Рет қаралды 14,435
Guru Bhajan
Lyrics : D.R.Bendre
Singer: Swami Brahmananda Ji (Chinmaya Mission)
ಗುರು ಭಜನೆ
ಸಾಹಿತ್ಯ: ದ.ರಾ.ಬೇಂದ್ರೆ
ಹಾಡಿದವರು: ಸ್ವಾಮಿ ಬ್ರಹ್ಮಾನಂದ (ಚಿನ್ಮಯ ಮಿಷನ್)
ಶ್ರೀ ಗುರುವೆ ಅರುವೆ ಶರಣಾಗಿ ಬರುವೆ
ಕರುಣೆಯನು ಕೋರಿ ಬರುವೆ
ಹೃತ್ ಪ್ರಕೃತಿ ತಂದ ಬಿಡಿ ಹೂಗಳನ್ನು
ಶ್ರೀಚರಣಕೆರೆಯುತಿರುವೆ
ಆ ಪಾದ ಪದ್ಮ ಎದೆಗವಚಿ ಹಿಡಿದು
ನಡುನೆತ್ತಿಗೊತ್ತಿಕೊಂಬೆ
ಉಸಿರಿಂದಲದನೆ ಬಲಗೊಂಬೆ ನನ್ನ
ಕಣ್ಗೊಂಬೆಗೊತ್ತಿಕೊಂಬೆ
ಕಣ್ಣಿಂದ ನಿನ್ನ ನನ್ನನ್ನ ಸೇರಿ
ಎದೆಯೊಳನ ಬೆಳಕನೆತ್ತಿ
ತಿರುಮೂರ್ತಿ ಮಾಡು ನನ್ನನ್ನು ನಿನ್ನ
ಚಿನ್ಮೋದ ಬೋಧ ಬಿತ್ತಿ
ಭವಭವಕೆ ನನ್ನ ಮುಂದೆತ್ತಿ ಒತ್ತಿ
ತಂದಥ ತಂದೆ ನೀನು
ಭಾವಕ್ಕೆ ಇಳಿದು ಸದ್ಭಾವ ಬರಿಸಿ
ಬರುವಂತೆ ಮಾಡು ನಾನು
ಅಂತರ್ಯದೊಂದು ಚೈತನ್ಯ ನಿನ್ನ
ಕೈಂಕರ್ಯ ಕರ್ತೃವಾಗಿ
ಕ್ಷೇತ್ರಜ್ಞ ಬರಲಿ ಚೇತ್ಯೇಶನಾಗಿ
ಮಧುಬೋಧ ಮೋದನಾಗಿ