F. ಮೊದಲ ಪ್ರೇಮ ಪತ್ರವೆ ಹೃದಯಗಳಿಗೆ ಸೇತುವೆ ಮೊದಲ ಪ್ರಣಯ ಪತ್ರವೆ ಕನಸುಗಳಿಗೆ ಸೇತುವೆ ತೊದಲ ಪ್ರೇಮದ ಪರಿ ಇದು ಎಲ್ಲಾ ಹುಡುಗರು ಎಲ್ಲಾ ಹುಡುಗಿಯರು ಪ್ರೀತಿಗೆ ಸೋಲದೇ ಇರುವರೆ ಸೋಲದೆ ಪ್ರೀತಿಯ ಕೊಡುವರೆ M. ಒಂದೇ ಒಂದು ಸಾರಿ ನಿನ್ನ ಕಂಡ ಒಡನೆ ಮರೆತೆ ನನ್ನ ಮರೆತು ಕೂಡ ಮರೆಯಲಾರೆನಾ ನಿನ್ನ ಎಷ್ಟು ಸಾರಿ ನೋಡಿದರು ಎಷ್ಟು ಸಾರಿ ಹಾಡಿದರು ಸವೆಯದಂತ ಸವಿಯ ಕೊಡುವೆ ನಾ ಇನ್ನ ಇದೇ ಮೊದಲ ಒಲ ಓಲೆಯಿದು ಎದೆಯ ತೊದಲ ಕರೆಯೋಲೆಯಿದು ಕೈ ಹಿಡಿದು ಕಾಪಾಡು ಈ ಪ್ರೀತಿಯನ್ನ F. ಒಂದೇ ಒಂದು ಸಾರಿ ಹೆಣ್ಣ ಕಂಡ ಒಡನೆ ಮರೆಯೋ ನಿನ್ನ ಮೆಚ್ಚಿ ನೆಚ್ಚಿಕೊಂಡೆರೆ ನು ಚೆನ್ನ M. ಓ.......ಒಒಒಓ..ಎಷ್ಟೋ ಹುಡುಗೀರ ನೋಡಿದೆ ನಾ ನಿನ್ನಲ್ಲೇನೊ ಹೊಸ ಸೆಳೆತ ಆಗಿನಿಂದ ನನ್ನಲ್ಲೇನೋ ಕೊರೆತ ಎಷ್ಟೋ ಹುಡುಗರ ಬಲ್ಲೆನು ನಾ ಎಲ್ಲ ಹೇಳೊ ಟೊಳ್ಳು ಮಾತಿದು ಇಂಥ ಸುಳ್ಳು ಪೊಳ್ಳು ಎಲ್ಲು ನಡೆಯದು M. ಈ ನನ್ನ ಮಾತಿನಲ್ಲಿ ಸತ್ಯವಿಲ್ಲ ಅನ್ನೊದಾದರೆ ಹೃದಯನ ಒಮ್ಮೆ ನೋಡು ಜಪವು ನಿನದೇ F. ನೀ ಹುಟ್ಟಿದಾಗಿನಿಂದ ನಿನ್ನ ಹೃದಯ ನೀನೆ ಕಂಡಿಲ್ಲ ಕಾಣದ್ದು ಗೀಚದರೆ ಯಾರು ನಂಬಲ್ಲ M. ಬರಿ ಅಕ್ಷರ ಇಲ್ಲಮ್ಮ ನನ್ನ ಏದುಸುರಿದೆಯಮ್ಮ ಈ ಉಸಿರ ಸಾಲಿಗೆ ಹಾಳೆ ನೀನಮ್ಮ F. ಹಾಳೆ ಹರಿಬಹುದು ನಾಳೆ ಮರಿಬಹುದು ಈ ಆಗದ ಹೋಗದ ಮಾಗದ ಕಾಗದ ಪ್ರೀತಿಯ ಕಾಯುವ ಮೂರ್ಖಳು ನಾನಲ್ಲ M. ಒಂದೇ ಒಂದು ಸಾರಿ ನಿನ್ನ ಕಂಡ ಒಡನೆ ಮರೆತೆ ನನ್ನ ಮರೆತು ಕೂಡ ಮರೆಯಲಾರೆನಾ ನಿನ್ನ M. ಓ..........ಒಒ F. ಓಒಒಓ... ಓಒಒಓ M. ಊ......ಉಉಊ F. ಓಒಒಓ... ಓಒಒಓ ಓ ಒ ಒ F. ಎಷ್ಟೋ ಕವಿಗಳ ಕಾಲೆಳೆದು ಕಾಲು ತೊಳೆಯೋ ಪ್ರೀತಿ ಅಂತೀರಿ ಆಮೇಲ್ ಕೈ ತೊಳೆದುಕೊಂಡು ಹೋಗ್ತೀರಿ M. ನನ್ನಾ ಪದಗಳಿವು ಪದವಲ್ಲ ನನ್ನ ಎದೆ ಕದಗಳಿವು ಒಳಗೆ ನಿಂದೆ ಪ್ರೀತಿ ಅಂತರಂಗವು F. ಏನೆಂದರೇನು ಪ್ರೀತಿ ಕಣ್ಣು ಕುರುಡು ಅನ್ನೋದು ಗಾದೆ ಬೇಕಿಲ್ಲದಿದ್ದರೂನು ಬೇಡುತ ಇದೆ M. ಕಣ್ಣಾಗೊ ಪ್ರೀತಿ ನಂಬಿ ನಿನ್ನ ಕಣ್ಣಾಗೊ ನಾನಮ್ಮ ಕುರುಡಾದರೂನು ನಂದು ನೇರ ನಡೆಯಮ್ಮ F. ಅಂದ ಹೊಗಳೋರು ಸಂಬಂಧ ಹುಡುಕೋರು ಈ ಪ್ರೀತಿ ಅನ್ನೊರೆಲ್ಲ ಹುಚ್ಚರು M. ಯಾರೇನೆ ಅಂದರೂ ನೀ ನನ್ನ ಕೊಂದರು ನಿನ್ ಪ್ರೀತಿ ಒಂದೆ ನನ್ನ ದೇವರು ತಂದನ್ ನಾನ ತಾನ ನಾನ ತಂದನ್ ನಾನ ತಾನ ನಾನ ಮರೆತು ಕೂಡ ಮರೆಯಲಾರೆನಾ ನಿನ್ನ M. ಎಷ್ಟು ಸಾರಿ ನೋಡಿದರು ಎಷ್ಟು ಸಾರಿ ಹಾಡಿದರು F. ಸವಿಯದಂತ ಸವಿಯ ಕೊಡುವೆ ನಾ ಇನ್ನ
@Be_happy_301011 ай бұрын
Old memories of 90s children..these song used to come in udaya tv song program on early 2000s ❤❤