ಮದುವೆಯಾದ ಮೇಲೆ ಅಳಿಯ, ತನ್ನ ಅತ್ತೆ ಮಾವನ ಮನೆಗೆ ಮೊದಲ ಬಾರಿಗೆ ಹೋಗುವ ಸಂಪ್ರದಾಯಕ್ಕೆ "ಅಳೆತನ" ಎಂಬ ಹೆಸರು.. ಹೀಗೆ ಅಳೆತನಕ್ಕೆ ಬರುವ ಅಳಿಯನ ಸತ್ಕಾರಕ್ಕೆ ಇಡೀ ಮನೆಮಂದಿಯಲ್ಲ ನಿಂತುಕೊಳ್ಳುವುದು ವಾಡಿಕೆ.. ತಮ್ಮ ಅಳಿಯನ ಸತ್ಕಾರಕ್ಕೆ ಯಾವುದೇ ಕುಂದು ಕೊರತೆಗಳ ಆಗಬಾರದು.. ಅವರಿಗೆ ಬಡಿಸುವ ಊಟ.. ಅವರ ಆರೋಗ್ಯ.. ಅವರಿಗೆ ಕೊಡುವ ಉಡುಗೊರೆ.. ಹೀಗೆ ನಾನಾ ತರದ ವಿಚಾರಗಳನ್ನು ಜಾಗ್ರತೆಯಿಂದ ಕೂಲಂಕುಷವಾಗಿ ಮಾಡುವುದು ಸಂಪ್ರದಾಯದ ಒಂದು ಭಾಗ... ಈ ಜನಪದ ಹಾಡು ಅಳಿಯನ ಆತಿಥ್ಯವನ್ನು ಬೀಗರು ಯಾವತರ ಮಾಡಿದರು?? ಎಂಬ ವಿವರಣೆಯನ್ನು ಕೊಡುತ್ತದೆ.. ಬನ್ನಿ.... ಈ ಹಾಡನ್ನು ಕೇಳುತ್ತಾ ನಾವು ನಮ್ಮ ಅಳೆತನದ ನೆನಪನ್ನು ಮಾಡಿಕೊಳ್ಳೋಣ.. ಈ ಅಳೆತನದ ಖುಷಿಯನ್ನು ಎಲ್ಲರಿಗೂ ಹಂಚೋಣ