Рет қаралды 78,816
ಸಾಕ್ಷಾತ್ ಗೋವಿಂದನಿಂದ ಅನುಗ್ರಹ "ಅಂಕಿತ" ವನ್ನು ಪಡೆದ ಶ್ರೀ ಪ್ರಸನ್ನ ವೆಂಕಟ ದಾಸರು ಗೋವಿಂದನನ್ನು "ನೀನೇ ನನ್ನ ತಾಯಿ ತಂದೆ" ಎಂದು ಸ್ತುತಿಸಿದ್ದಾರೆ.
ರಾಗ ಸಂಯೋಜನೆ, ಗಾಯನ : ರಾಯಚೂರು ಶೇಷಗಿರಿ ದಾಸ್.
ಗೋವಿಂದ ಗೋವಿಂದ ಗೋವಿಂದ
ನನ್ನ ತಾಯಿ ತಂದೆ ಗೋವಿಂದ || ಪ ||
ತಿರುಗಿ ಭವದಲಿ ಗೋವಿಂದ
ವ್ರಥಾ ಮರುಗಿ ಬಳಲಿದೆನು ಗೋವಿಂದ
ಕರಗಿ ತಾಪದಿ ಗೋವಿಂದ
ಸಿಡಿಲೆರಗಿಸಿಕೊಂಡೆನೋ ಗೋವಿಂದ || ೧ ||
ಎಚ್ಚರ ಹಾರಿತು ಗೋವಿಂದ
ನಾ ಮೆಚ್ಚಿದ ವಿಷಯಕ್ಕೆ ಗೋವಿಂದ
ಹುಚ್ಚು ಮಾಡಿತು ಮನ ಗೋವಿಂದ
ನಿನ್ನುಚ್ಛರಣಡಗಿತು ಗೋವಿಂದ || ೨ ||
ಆಸೆಯ ಬಿಡಿಸೈ ಗೋವಿಂದ
ನಿನ್ನ ದಾಸರೊಳಿರಿಸೈ ಗೋವಿಂದ
ಪ್ರಸನ್ನ ವೆಂಕಟ ಗೋವಿಂದ
ಭವ ಘಾಸಿಯ ತಪ್ಪಿಸು ಗೋವಿಂದ || ೩ ||
Gōvinda gōvinda gōvinda nanna tāyi tande gōvinda || pa ||
tirugi bhavadali gōvinda vr̥thā marugi baḷalideno gōvinda
karagi tāpadi gōvinda siḍileragisi koṇḍeno gōvinda || 1 ||
eccara hāritu gōvinda nāmeccide viṣayakke gōvinda
huccu māḍitu mana gōvinda ninnanuccaraṇaḍagitu gōvinda || 2 ||
āseya biḍisai gōvinda ninna dāsaroḷirisai gōvinda
prasannaveṅkaṭa gōvinda bhava ghāsiya tappisu gōvinda || 3 ||
********