Рет қаралды 6,772
ವಿವಾಹವು ಜೀವನ ಪೂರ್ತಿ ಎರಡು ಜೀವಗಳು ಜೊತೆಯಲ್ಲಿ ಪಯಣಿಸುವಂತೆ, ಪೋಣಿಸುವ ಒಂದು ಧಾರ್ಮಿಕ ವಿಧಿ. ಹಿಂದೂಗಳಲ್ಲಿ ವಿವಾಹಗಳನ್ನು ಏಳು ಜನುಮಗಳ ಅನುಬಂಧವೆಂದು ಭಾವಿಸಲಾಗಿದೆ. ಇಂತಿರುವ ವಿವಾಹವು ಪೂರ್ಣಗೊಳ್ಳಲು ಇರುವ 5 ಪ್ರಮುಖ ಷರತ್ತುಗಳನ್ನು ಸೆಕ್ಷನ್ 5ರಲ್ಲಿ ತಿಳಿಸಲಾಗಿದೆ. ಮೇಲ್ನೋಟಕ್ಕೆ 5 ಎನಿಸಿದರೂ, ಆರಂಭದಲ್ಲೇ ಈರ್ವರೂ ಹಿಂದೂ ಆಗಿರಬೇಕು ಎಂಬ ಷರತ್ತು ಸಹ ತಿಳಿಸಲಾಗಿದೆ.
ಕನ್ನಡದಲ್ಲಿ ಕಾನೂನನ್ನು ಜನಸಾಮಾನ್ಯರಿಗೂ ತಿಳಿಸುತ್ತ ಸಾಗುವ ಈ ಪಯಣದಲ್ಲಿ, ನಿರಂತರ ಪ್ರೋತ್ಸಾಹ ನೀಡುತ್ತಾ ನನ್ನೊಂದಿಗೆ ಸಾಗುತ್ತಿರುವ ಪ್ರತಿಯೊಬ್ಬ ಕನ್ನಡಿಗ ಮಿತ್ರರಿಗೂ ನನ್ನ ವ್ಯಕ್ತಿಗತ ಧನ್ಯವಾದಗಳು. ನಿಮ್ಮ ನಿರಂತರ ಪ್ರೀತಿ, ಅಭಿಮಾನ, ವಿಶ್ವಾಸ, ಹಿತನುಡಿಗಳ ನಿರಂತರ ಹಾರೈಕೆಯೊಂದಿಗೆ,
ನಿಮ್ಮವನೇ ಆದ,
ಗಣೇಶ್ ಪೂಜಾರಿ.