Рет қаралды 34,855
ಇದ ಕೊಳ್ಳಿ ಇದ ಕೊಳ್ಳಿ ಭವರೋಗಕೌಷಧ.
ಭಗವಂತನ ನಾಮಸ್ಮರಣೆಯಿಂದ ಸಕಲ ರೋಗ ಪರಿಹಾರವಾಗುತ್ತದೆ.
ಆದಿವ್ಯಾಧಿಗಳು, ಉನ್ಮಾದ ವಿಭ್ರಮ ನಾನಾ ಬಾಧೆಗೆ ಭಗವಂತನ ನಾಮವೇ ಸರ್ವ ಔಷಧ. ಬನ್ನಿ ಎಲ್ಲರೂ ಎಡಬಿಡದೆ ಹರಿ ನಾಮವ ನೆನೆದು ರೋಗ ಮುಕ್ತರಾಗೋಣ. ದುಃಖದೂರರಾಗೋಣ.
ರಾಗ : ಚಾರುಕೇಶಿ
ತಾಳ : ಖಂಡ ಛಾಪು
ಇದಕೊಳ್ಳಿ ಭವರೋಗಕೌಷಧವನು ||ಪ||
ಇಂದ್ರಿಯವಜೈಸುವುದೆ ಇದಕೆ ಇಚ್ಛಾಪಥ್ಯ ||ಅ ಪ||
ವಾಸುದೇವನ ನಾಮ ವಾತವಿಧ್ವಂಸಿನಿ |
ಜನಾರ್ದನನ ನಾಮ ಜ್ವರಾಂಕುಶ ||
ಮಾಧವನ ನಾಮವೇ ಮನಗಂಡ ಮಂಡೂರ |
ಮಂಗಳಾತ್ಮನ ನಾಮ ಮಾಲ್ಯವಸಂತ ||1||
ರಾಗ : ಮಾಂಡ್
ಚಿಂತಾಯಕನ ನಾಮ ತ್ರೈಲೋಕ್ಯ ಚಿಂತಾಮಣಿ |
ಭುಜಗಶಯನನ ನಾಮ ಭೂಪತಿಮಾತ್ರೆ||
ರಾಜೀವಲೋಚನನ ನಾಮ ರಸಕರ್ಪೂರ |
ಸೀತಾಪತಿಯ ನಾಮ ದಿವ್ಯ ಸಿಂಧೂರ ||2||
ರಾಗ : ಸಾಮ
ನಾರಾಯಣನ ನಾಮ ದಿವ್ಯ ತಾಮ್ರಭಸ್ಮ|
ಲೋಕದೊಡೆಯನ ನಾಮ ಲೋಹಭಸ್ಮ||
ವೈಕುಂಠಪತಿಯೆಂಬ ವಂಗಭಸ್ಮವ ಕೊಳ್ಳಿ|
ಶ್ರೀನಿವಾಸನ ನಾಮ ಸ್ವರ್ಣಭಸ್ಮ ||3||
ರಾಗ : ವಸಂತಭೈರವಿ
ರಾಮಚಂದ್ರನೆಂಬ ಪೂರ್ಣಚಂದ್ರೋದಯವು ||
ಕೃಷ್ಣಕೃಷ್ಣನೆಂಬ ಶ್ಲೇಷ್ಮಕುಠಾರ ||
ವಾರಿಜಾಂಬಕನೆಂಬ ವಸಂತಕುಸುಮಾಕರ |
ಕಮಲನಾಭನೆಂಬ ಕರ್ಣಚೂರ್ಣವಿದಕೊ ||4||
ರಾಗ : ಕನ್ನಡ
ಇದನು ಕೊಂಡವರ ಪೆಸರನು ಪೇಳುವೆನು ಕೇಳಿ |
ಮುದದಿ ಪ್ರಹ್ಲಾದ ಮುಚುಕುಂದ ಧ್ರುವನು |
ಸದಮಲೆ ದ್ರೌಪದಿಯು ಅಜಮಿಳನು ಬದುಕಿದರು ||
ಪದುಮಾಕ್ಷ ಪುರಂದರವಿಠಲನೆಂಬೌಷಧವ ||5||
Ida koḷḷi ida koḷḷi bhavarōgakauṣadha.
Bhagavantana nāmasmaraṇeyinda sakala rōga parihāravāguttade.
Ādivyādhigaḷu, unmāda vibhrama nānā bādhege bhagavantana nāmavē sarva auṣadha. Banni ellarū eḍabiḍade hari nāmava nenedu rōga muktarāgōṇa. Duḥkhadūrarāgōṇa.
Raga : charukeshi
Taala : khanda chapu
Idakoḷḷi bhavarōgakauṣadhavanu ||pa||
indriyavajaisuvude idake icchāpathya ||a pa||
vāsudēvana nāma vātavidhvansini |
janārdanana nāma jvarāṅkuśa ||
mādhavana nāmavē managaṇḍa maṇḍūra |
maṅgaḷātmana nāma mālyavasanta ||1||
Raga : maand
Cintāyakana nāma trailōkya cintāmaṇi |
bhujagaśayanana nāma bhūpatimātre||
rājīvalōcanana nāma rasakarpūra |
sītāpatiya nāma divya sindhūra ||2||
Raga : sama
nārāyaṇana nāma divya tāmrabhasma|
lōkadoḍeyana nāma lōhabhasma||
vaikuṇṭhapatiyemba vaṅgabhasmava koḷḷi|
śrīnivāsana nāma svarṇabhasma ||3||
Raga : vasanta bhairavi
Rāmacandranemba pūrṇacandrōdayavu ||
kr̥ṣṇakr̥ṣṇanemba ślēṣmakuṭhāra ||
vārijāmbakanemba vasantakusumākara |
kamalanābhanemba karṇacūrṇavidako ||4||
Raga : kannada
idanu koṇḍavara pesaranu pēḷuvenu kēḷi |
mudadi prahlāda mucukunda dhruvanu |
sadamale draupadiyu ajamiḷanu badukidaru ||
padumākṣa purandaraviṭhalanembauṣadhava ||5||
🙏ಶ್ರೀಕೃಷ್ಣಾರ್ಪಣಮಸ್ತು 🙏
🙏Sri krishnaarpanamastu 🙏