Рет қаралды 66,337
ನಿನ್ನನೇ ನಂಬಿದೆನೋ...
ರಚನೆ ಶ್ರೀಪುರಂದರದಾಸರು.
ರಾಗ : ಸಿಂಧುಭೈರವಿ.
ತಾಳ : ಖಂಡ ಛಾಪು.
ನಿನ್ನನೇ ನಂಬಿದೆನೋ ನೀ ಎನ್ನ ಸಲಹಯ್ಯ ||ಪ||
ಎನ್ನ ಗುಣ ದೋಷಗಳ ಎಣಿಸ ಬೇಡಯ್ಯ ||ಅ ಪ||
ಬಾಲ್ಯದಲಿ ಹಲವುದಿನ ಬರಿದೆ ಹೋಯಿತು ಹೊತ್ತು|
ಮೇಲೆ ಯವ್ವನ ಮದದಿ ಮುಂದರಿಯದಿದ್ದೆ ||
ಜಾಲ ಸಂಸಾರದಲಿ ತೊಳಲಿ ಬಳಲಿದೆನಯ್ಯ |
ಪಾಲಿಸೋ ಪರಮಾತ್ಮ ಭಕ್ತಯನೇ ಕೊಟ್ಟು ||1||
ರಾಗ : ಹಂಸಾನಂದಿ
ಆಸೆಯೆಂಬುದು ಅಜನ ಲೋಕವನೆ ಮುಟ್ಟುತಿದೆ |
ಬೇಸರದೆ ಸ್ತ್ರೀಯರಲಿ ಬುದ್ಧಿ ಎನಗೆ ||
ವಾಸುದೇವನ ಸ್ಮರಣೆ ಒಮ್ಮೆಯಾದರೂ ಇಲ್ಲ |
ಕ್ಲೇಶವನು ಬಿಡಿಸಿ ನಿನ್ನ ದಾಸನೆಂದೆನಿಸಯ್ಯ ||2||
ರಾಗ : ಕಲ್ಯಾಣವಸಂತ
ಈ ಪರಿಯ ಕಾಲವನು ಇಂದಿರೇನೆ ಕಳೆದೆ |
ಭೀತಿ ಇಲ್ಲದೆ ಜ್ಞಾನ ರಹಿತನಾದೆ ||
ಮಾತೆ ತನ್ನನಯ ಶಿಶುವ ಮನ್ನಿಸುವ ತೆರನಂತೆ|
ದಾತ ಪುರಂದರವಿಠಲ ದಯಮಾಡಿ ಸಲಹಯ್ಯ ||3||
Ninnanē nambidenō...
Racane śrīpurandaradāsaru.
Rāga: Sindhubhairavi.
Tāḷa: Khaṇḍa chāpu.
Ninnanē nambidenō nī enna salahayya ||pa||
enna guṇa dōṣagaḷa eṇisa bēḍayya ||a pa||
bālyadali halavudina baride hōyitu hottu|
mēle yavvana madadi mundariyadidde ||
jāla sansāradali toḷali baḷalidenayya |
pālisō paramātma bhaktayanē koṭṭu||1||
Rāga: Hansānandi
āseyembudu ajana lōkavane muṭṭutide |
bēsarade strīyarali bud'dhi enage ||
vāsudēvana smaraṇe om'meyādarū illa |
klēśavanu biḍisi ninna dāsanendenisayya ||2||
rāga: Kalyāṇavasanta
ī pariya kālavanu indirēne kaḷede |
bhīti illade jñāna rahitanāde ||
māte tannanaya śiśuva mannisuva teranante|
dāta purandaraviṭhala dayamāḍi salahayya ||3||
🙏ಶ್ರೀಕೃಷ್ಣಾರ್ಪಣಮಸ್ತು 🙏
🙏Sri krishnaarpanamastu 🙏