Рет қаралды 690
ಇಂದು (3-01-2025) ಬಳಕ್ಕುಂಜ ಗುತ್ತು ಮಾಣ್ಯಾ ಮನೆತನ ಶ್ರೀ ರಘುನಾಥ ಶೆಟ್ಟಿ ಇವರಿಗೆ ಗಡಿ ಪ್ರಧಾನ ಸಮಾರಂಭ. ಮುಲ್ಕಿ ಸೀಮೆ ಅರಸರಾದ ಯಂ. ದುಗ್ಗಣ್ಣ ಸಾವಂತರ ನೇತೃತ್ವದಲ್ಲಿ ನಡೆದ ಸಮಾರಂಭದಲ್ಲಿ ಪಂಜ ವಿದ್ವಾನ್ ಶ್ರೀ ಭಾಸ್ಕರ ಭಟ್, ಶ್ರೀ ಸುಬ್ರಹ್ಮಣ್ಯ ಭಟ್, ಮುಲ್ಕಿ ಒಂಬತ್ತು ಮಾಗಣೆಗೆ ಸಂಬಂಧ ಪಟ್ಟ ಬಾವ ಮತ್ತು ಗುತ್ತು ಮನೆತನದ ಮುಖ್ಯಸ್ಥರ ಉಪಸ್ಥಿತಿಯಲ್ಲಿ ಮುಲ್ಕಿ ಅರಮನೆಯ ಧರ್ಮ ಚಾವಡಿಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಕಾಸಪ್ಪಯ್ಯ ಮನೆಯ ಶ್ರೀ ಚಂದ್ರಶೇಖರ ಭಟ್, ಪ್ರಿಯದರ್ಶಿನಿ ಕೊ ಆಪರೇಟಿವ್ ಸೊಸೈಟಿ ಅಧ್ಯಕ್ಷರಾದ ಶ್ರೀ ಎಚ ವಸಂತ್ ಬೆರ್ನಾಡ್, ಬಂಕಿ ನಾಯಕರು, ಶ್ರೀ ಸತೀಶ್ ಶೆಟ್ಟಿ, ಶ್ರೀ ವಿನೋದ್ ಸಾಲ್ಯಾನ್, ಮುಲ್ಕಿ ಅರಮನೆ ಕುಟುಂಬಸ್ಥರು, ಬಳಕ್ಕುಂಜ ಗುತ್ತು ಕುಟುಂಬಸ್ಥರು ಹಾಗೂ ಅರಮನೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು