Sri Sripadaraja virachita 'Madhwanaama'. This songs praises the three avatars of lord Vayu, namely, Hanuma, Bheema and Madhwacharya. Lyrics link: ia801007.us.ar...
Пікірлер: 105
@shreyarao96433 жыл бұрын
ಜಯ ಜಯ ಜಗತ್ರಾಣ ಜಗದೊಳಗೆ ಸುತ್ರಾಣ ಅಖಿಲ ಗುಣಸದ್ದಾಮ ಮಧ್ವನಾಮ | ಪ | ಆವ ಕಚ್ಚಪರೂಪದಿಂದಲಂಡೋದಕದಿ ಓವಿ ಧರಿಸಿದ ಶೇಷಮೂರುತಿಯನು ಆವವನ ಬಲವಿಡಿದು ಹರಿಯ ಸುರರೈದುವರು ಆ ವಾಯು ನಮ್ಮ ಕುಲ ಗುರುರಾಯನು | ೧ | ಆವವನು ದೇಹದೊಳಗಿರಲು ಹರಿ ನೆಲೆಸಿಹನು ಆವವನು ತೊಲಗೆ ಹರಿ ತಾ ತೊಲಗುವ ಆವವನು ದೇಹದೊಳ ಹೊರಗೆ ನಿಯಾಮಕನು ಆ ವಾಯು ನಮ್ಮ ಕುಲ ಗುರುರಾಯನು | ೨ | ಕರಣಾಭಿಮಾನಿ ಸುರರುಗಳು ದೇಹವ ಬಿಡಲು ಕುರುಡ ಕಿವುಡ ಮೂಕನೆಂದೆನಿಸುವ ಪರಮ ಮುಖ್ಯಪ್ರಾಣ ತೊಲಗಲಾದೇಹವನು ಅರಿತು ಪೆಣವೆಂದು ಪೇಳ್ವರು ಬುಧಜನಾ | ೩ | ಸುರರೊಳಗೆ ನರರೊಳಗೆ ಸರ್ವ ಭೂತಗಳೊಳಗೆ ಪರತರನೆನಿಸಿ ನಿಯಾಮಿಸಿ ನೆಲೆಸಿಹ ಹರಿಯನಲ್ಲದೆ ಬಗೆಯ ಅನ್ಯರನು ಲೋಕದೊಳು ಗುರುಕುಲತಿಲಕ ಮುಖ್ಯ ಪವಮಾನನು | ೪ | ತ್ರೇತೆಯಲಿ ರಘುಪತಿಯ ಸೇವೆ ಮಾಡುವೆನೆಂದು ವಾತಸುತ ಹನುಮಂತನೆಂದೆನಿಸಿದ ಪೋತ ಭಾವದಿ ತರಣಿಬಿಂಬಕ್ಕೆ ಲಂಘಿಸಿದ ಈತಗೆಣೆ ಗಾಣೆ ಮೂರ್ಲೋಕದೊಳಗೆ | ೫ | ತರಣಿಗಭಿಮುಖನಾಗಿ ಶಬ್ದಶಾಸ್ತ್ರವ ಪಠಿಸಿ ಉರವಣಿಸಿ ಹಿಂದು ಮುಂದಾಗಿ ನಡೆದ ಪರಮ ಪವಮಾನಸುತ ಉದಯಾಸ್ತಶೈಲಗಳ ಭರದಿ ಐದಿದ ಈತಗುಪಮೆಯುಂಟೆ | ೬ | ಅಖಿಲ ವೇದಗಳ ಸಾರವ ಧರಿಸಿ ಮುಂದಿವನು ನಿಖಿಳ ವ್ಯಾಕರಣಗಳ ಇವ ಪೇಳಿದ ಮುಖದಲ್ಲಿ ಕಿಂಚದಪಶಬ್ದ ಇವಗಿಲ್ಲೆಂದು ಮುಖ್ಯಪ್ರಾಣನ ರಾಮನನುಕರಿಸಿದ | ೭ | ತರಣಿಸುತನನು ಕಾಯ್ದು ಶರದಿಯನು ನೆರೆ ದಾಟಿ ಧರಣಿಸುತೆಯಳ ಕಂಡು ಧನುಜರೊಡನೆ ಭರದಿ ರಣವನೆ ಮಾಡಿ ಗೆಲಿದು ದಿವ್ಯಾಸ್ತ್ರಗಳ ಉರುಹಿ ಲಂಕೆಯ ಬಂದ ಹನುಮಂತನು | ೮ | ಹರಿಗೆ ಚೂಡಾಮಣಿಯನಿತ್ತು ಹರಿಗಳ ಕೂಡಿ ಶರಧಿಯನು ಕಟ್ಟಿ ಬಲು ರಕ್ಕಸರನು ಒರೆಸಿ ರಣದಲ್ಲಿ ದಶಶಿರನ ಹುಡಿಗಟ್ಟಿ ತಾ ಮೆರೆದ ಹನುಮಂತ ಬಲವಂತ ಧೀರ | ೯ | ಉರಗಬಂಧಕೆ ಸಿಲುಕಿ ಕಪಿವರರು ಮೈಮರೆಯ ತರಣಿಕುಲತಿಲಕನಾಜ್ಞೆಯ ತಾಳಿದ ಗಿರಿಸಹಿತ ಸಂಜೀವನವ ಕಿತ್ತು ತಂದಿತ್ತ ಧರೆಯೊಳಗೆ ಸರಿಯುಂಟೆ ಹನುಮಂತಗೆ | ೧೦ | ವಿಜಯ ರಘುಪತಿ ಮೆಚ್ಚಿ ಧರಣಿಸುತೆಯಳಿಗೀಯೆ ಭಜಿಸಿ ಮೌಕ್ತಿಕದ ಹಾರವನು ಪಡೆದ ಅಜಪದವಿಯನು ರಾಮ ಕೊಡುವೆನೆನೆ ಹನುಮಂತ ನಿಜ ಭಕುತಿಯನೆ ಬೇಡಿ ವರವ ಪಡೆದ | ೧೧ | ಆ ಮಾರುತನೆ ಭೀಮನೆನಿಸಿ ದ್ವಾಪರದಲ್ಲಿ ಸೋಮಕುಲದಲಿ ಜನಿಸಿ ಪಾರ್ಥರೊಡನೆ ಭೀಮ ವಿಕ್ರಮ ರಕ್ಕರಸರನು ಮುರಿದಟ್ಟಿದ ಆ ಮಹಿಮ ನಮ್ಮ ಕುಲಗುರುರಾಯನು | ೧೨ | ಕರದಿಂದ ಶಿಶುಭಾವನಾದ ಭೀಮನ ಬಿಡಲು ಗಿರಿಯೊಡೆದು ಶತಶೃಂಗವೆಂದೆನಿಸಿತು ಹರಿಗಳ ಹರಿಗಳಿಂ ಕರಿಗಳ ಕರಿಗಳಿಂ ಅರೆವ ವೀರನಿಗೆ ಸುರನರರು ಸರೀಯೇ | ೧೩ | ಕುರುಪ ಗರಳವನಿಕ್ಕೆ ನೆರೆಯುಂಡು ತೇಗಿದ ಉರಗಗಳ ಮೇಲ್ಬಿಡಲು ಅದನೊರೆಸಿದ ಅರಗಿನರಮನೆಯಲ್ಲಿ ಉರಿಯನಿಕ್ಕಲು ವೀರ ಧರಿಸಿ ಜಾಹ್ನವಿಗೊಯ್ದ ತನ್ನನುಜರ | ೧೪ | ಅಲ್ಲಿರ್ದ ಬಕಹಿಡಂಬಕರೆಂಬ ರಕ್ಕಸರ ನಿಲ್ಲದೂರೆಸಿದ ಲೋಕಕಂಟಕರನು ಬಲ್ಲಿದಸುರರ ಗೆಲಿದು ದ್ರೌಪದಿಯ ಕೈವಿಡಿದು ಎಲ್ಲ ಸುಜನರಿಗೆ ಹರುಷವ ತೋರಿದ | ೧೫ | ರಾಜಕುಲವಜ್ರನೆನಿಸಿದ ಮಾಗಧನ ಸೀಳಿ ರಾಜಸೂಯ ಯಾಗವನು ಮಾಡಿಸಿ ಆಜಿಯೊಳು ಕೌರವರ ಬಲವ ಸವರುವೆನೆಂದು ಮೂಜಗವರಿಯೆ ಕಂಕಣವ ಕಟ್ಟಿದ | ೧೬ | ಮಾನನಿಧಿ ದ್ರೌಪದಿಯ ಮನದಿಂಗಿತವನರಿತು ದಾನವರ ಸವರಬೇಕೆಂದು ಬೇಗ ಕಾನನವ ಪೊಕ್ಕು ಕಿಮ್ಮೀರಾದಿಗಳ ತರಿದು ಮಾನಿನಿಗೆ ಸೌಗಂಧಿಕವನೆ ತಂದ | ೧೭ | ದುರುಳ ಕೀಚಕನು ತಾ ದ್ರೌಪದಿಯ ಚೆಲುವಿಕೆಗೆ ಮರುಳಾಗಿ ಕರಕರೆಯ ಮಾಡಲವನ ಗರಡಿಮನೆಯೊಳು ಬರಸಿ ಒರೆಸಿ ಅವನನ್ವಯದ ಕುರಪನಟ್ಟಿದ ಮಲ್ಲದನು ಸವರಿದ | ೧೮ | ವೈರಿ ದುಶ್ಯಾಸನನ ರಣದಲ್ಲಿ ಎಡೆ ಗೆಡಹಿ ವೀರನರಹರಿಯ ಲೀಲೆಯ ತೋರಿದ ಕೌರವರ ಬಲ ಸವರಿ ವೈರಿಗಳ ನೆಗ್ಗೊತ್ತಿ ಓರಂತೆ ಕೌರವನ ಮುರಿದು ಮೆರೆದ |೧೯ | ಗುರು ಸುತನು ಸಂಗರದಿ ನಾರಾಯಣಾಸ್ತ್ರವನು ಉರವಣಿಸಿ ಬಿಡಲು ಶಸ್ತ್ರವ ಬಿಸುಟರು ಹರಿ ಕೃಪೆಯ ಪಡೆದಿರ್ದ ಭೀಮ ಹುಂಕಾರದಲಿ ಹರಿಯ ದಿವ್ಯಾಸ್ತ್ರವನು ನೆರೆ ಅಟ್ಟಿದ | ೨೦ | ನೀರೊಳಡಗಿದ್ದ ದುರ್ಯೋಧನನ ಹೊರಗೆಡಹಿ ಊರುದ್ವಯ ತನ್ನ ಗದೆಯಿಂದ ಮುರಿದ ನಾರಿರೋದನ ಕೇಳಿ ಮರಮರುಗಿ ಗುರುಸುತನ ಹಾರಿ ಹಿಡಿದು ಶಿರೋ ರತ್ನ ಪಡೆದ | ೨೧ | ಚಂಡವಿಕ್ರಮನು ಗದೆಗೊಂಡು ರಣದಿ ಭೂ ಮಂಡಲದೊಳಿದಿರಾಂತ ಖಳರನೆಲ್ಲಾ ಹಿಂಡಿ ಬಿಸುಟಿಹ ವೃಕೋದರನ ಪ್ರತಾಪವನು ಕಂಡು ನಿಲ್ಲುವರಾರು ತ್ರಿಭುವನದೊಳು | ೨೨ | ದಾನವರು ಕಲಿಯುಗದೊಳವತರಿಸಿ ವಿಬುಧರೊಳು ವೇನನ ಮತ ವನರುಹಲದನು ಅರಿತು ಜ್ಞಾನಿ ತಾ ಪವಮಾನ ಭೂತಳದೊಳವತರಿಸಿ ಮಾನನಿಧಿ ಮಧ್ವಾಖ್ಯನೆಂದೆನಿಸಿದ |೨೩| ಅರ್ಭಕತನವನೈದಿ ಬದರಿಯಲಿ ಮಧ್ವಮುನಿ ನಿರ್ಭಯದಿ ಸಕಲ ಶಾಸ್ತ್ರವ ಪಠಿಸಿದ ಉರ್ವಿಯೊಳು ಮಾಯೆ ಬೀರಲು ತತ್ತ್ವಮಾರ್ಗವನು ಸರ್ವ ಸುಜನರಿಗೆ ತಾ ತೋರಿ ಮೆರೆದ |೨೪| ಸರ್ವೇಶ ಹರಿ ವಿಶ್ವ ಎಲ್ಲ ತಾ ಪುಸಿಯೆಂಬ ದುರ್ವಾದಿಗಳ ಮತವನೆ ಖಂಡಿಸಿ ಸರ್ವೇಶ ಹರಿ ವಿಶ್ವಸತ್ಯವೆಂದರುಹಿದ ಶರ್ವಾದಿಗೀರ್ವಾಣ ಸಂತತಿಯಲಿ | ೨೫| ಏಕವಿಶಂತಿ ಕುಭಾಷ್ಯಗಳ ಭೇರನು ತರೆದು ಶ್ರೀಕರಾರ್ಚಿತನೊಲುಮೆ ಶಾಸ್ತ್ರ ರಚಿಸಿ ಲೋಕತ್ರಯದೊಳಿದ್ದ ಸುರರು ಆಲಿಸುವಂತೆ ಆ ಕಮಲನಾಭಯತಿನಿಕರಕೊರೆದ |೨೬| ಬದರಿಕಾಶ್ರಮಕೆ ಪುನರಪಿಯೈದಿ ವ್ಯಾಸಮುನಿ ಪದಕೆರಗಿ ಅಖಿಳ ವೇದಾರ್ಥಗಳನು ಪದುಮನಾಭನ ಮುಖದಿ ತಿಳಿದು ಬ್ರಹ್ಮತ್ವ ಐದಿದ ಮಧ್ವಮುನಿರಾಯಗಭಿವಂದಿಪೆ |೨೭| ಜಯ ಜಯತು ದುರ್ವಾದಿಮತತಿಮಿರಮಾರ್ತಾಂಡ ಜಯ ಜಯತು ವಾದಿಗಜಪಂಚಾನನ ಜಯ ಜಯತು ಚಾರ್ವಾಕಗರ್ವಪರ್ವತಕುಲಿಶ ಜಯ ಜಯ ಜಗನ್ನಾಥ ಮಧ್ವನಾಥಾ |೨೮| ತುಂಗಕುಲಗುರುವರನ ಹೃತ್ಕಮಲದೊಳು ನೆಲೆಸಿ ಭಂಗವಿಲ್ಲದ ಸುಖವ ಸುಜನಕೆಲ್ಲ ಹಿಂಗದೆ ಕೊಡುವ ನಮ್ಮ ಮಧ್ವಾಂತರಾತ್ಮಕನು ರಂಗವಿಠ್ಠಲನೆಂದು ನೆರೆ ಸಾರಿರೈ |೨೯|
@shreyarao96433 жыл бұрын
ಸೋಮಸೂರ್ಯೋಪರಾಗದಿ ಗೋಸಹಸ್ರಗಳ ಭೂಮಿದೇವರಿಗೆ ಸುರನದಿಯ ತಟದಿ ಶ್ರೀಮುಕುಂದಾರ್ಪಣವೆನುತ ಕೊಟ್ಟ ಫಲವಕ್ಕು ಈ ಮಧ್ವನಾಮ ಬರೆದೋದಿದವಗೆ |೩೦| ಪುತ್ರರಿಲ್ಲದವರು ಸತ್ಪುತ್ರರೈದುವರು ಸ ರ್ವತ್ರದಲಿ ದಿಗ್ವಿಜಯವಹುದನುದಿನ ಶತ್ರುಗಳು ಕೆಡುವರಪಮೃತ್ಯು ಬರಲಂಜುವುದು ಸೂತ್ರನಾಮಕನ ಸಂಸ್ತುತಿ ಮಾತ್ರದಿ |೩೧| ಶ್ರೀಪಾದರಾಯ ಪೇಳಿದ ಮಧ್ವನಾಮ ಸಂ ತಾಪಕಳೆದಖಿಳ ಸೌಖ್ಯವನೀವುದು ಶ್ರೀಪತಿ ಜಗನ್ನಾಥವಿಠ್ಠಲನ ತೋರಿ ಭವ ಕೂಪಾರದಿಂದ ಕಡೆ ಹಾಯಿಸುವುದು |೩೨ |
@sushmithas4583 Жыл бұрын
🙏🙏✨
@shobhakotian424Ай бұрын
Very nice
@Vaish2013 Жыл бұрын
Bahala chennagi agide 👌👌👍👍
@srinivasarao831810 ай бұрын
Venu sir, excellent
@srinivasarao831810 ай бұрын
Super sir
@satyanarayandesai1122 жыл бұрын
ಮದ್ವನಾಮ ಕೇಳಲು ಇಂಪಾಗಿವೆ. ಭಕ್ತಿ ಪೂರಿತವಾಗಿದೆ.
@geetharaghavendrarao9481 Жыл бұрын
Very nice sung
@badrikatiki8677 Жыл бұрын
Wonderful song status lo vini fan aipoina❤
@pavanshetty8876 Жыл бұрын
ಜಯ ಜಯ ಜಗತ್ರಾಣ ಜಗದೊಳಗೆ ಸುತ್ರಾಣ ಅಖಿಲ ಗುಣ ಸಧ್ದಾಮ ಮಧ್ವನಾಮ ❤
@srivathskamath4722 жыл бұрын
हरि सर्वोत्तम वायु जीवोत्तम 🙏🙏🙏🙏🙏
@shilparamachandra1137Ай бұрын
What a Magical voice, pleasing to listen really heavenly feeling..
@padmanabharao1096 Жыл бұрын
Sung with most devotion. Bhakti ukki bandu pade pade keluva hage agide. Dhanyavadagalu
@gunduraonadigchittoor4573 жыл бұрын
Not only soothing to ears but also soul-stirring also and my deep devotion-ful salutation to Poorna Prajna and also ace singer on whose melodious strains the sublime message of Madhva philosophy wafts gently ,NCGR SMG
@srivathskamath4722 жыл бұрын
हरि सर्वोत्तम वायु जीवोत्तम 🙏🙏🙏🙏🙏
@kirshnakumar28193 жыл бұрын
Excellent singing with fantastic music thanks for the posting God bless you always
@rashmimaniyamysuru83742 жыл бұрын
Thank you much.... lotus feet
@manjulajois33863 жыл бұрын
You have golden voice. God's grace
@tejaswinij60532 жыл бұрын
Very nice buautyful song
@VASUDEVASG Жыл бұрын
Aachaarya sreemadaachaarya santhume janmajanmanee
@vguruprasad4 күн бұрын
ಹರಿ ಸರ್ವೋತ್ತಮ ವಾಯು ಜೀವೂತ್ತಮ
@vijayasimha80503 жыл бұрын
Vayudevara avatara kannumunde ide. Adbutha voice and way of song is beautiful
@anuradhapatil88213 жыл бұрын
Superb ,very divine voice ,may GOD bless you abundantly,Sri Venkateshwara yana namah 🙏 Sri vasudevanamah 🙏,Mukhyaprana devayana namah 🙏.
@umapujar1578 Жыл бұрын
So soothing,😍 instantly connects the divinity,💓, whole hearted thanks the singer 🙏
@pramodm7013 жыл бұрын
Wow very soothing, and music is very calming. Tumba chennagi ide Venugopal Avare 👌👌
@vishwanathr46453 жыл бұрын
Hari om 🕉
@parimalamurthy56932 ай бұрын
Excellent
@sujathammagv38743 жыл бұрын
ಬಹಳ ಚೆನ್ನಾಗಿ ಹಾಡಿರುವಿರಿ.
@vishwanathr46453 жыл бұрын
Very very nice and sweet sir.
@mohanapoojar6293 Жыл бұрын
Super song ❤️❤️❤️❤️🙏🙏🙏🙏🙏
@akhilasuresh71883 жыл бұрын
Nice singing
@shreenivastupsakri30489 ай бұрын
Thanks for Tupsakri Sreenivas family 🆗🆗 1:27
@shreenivastupsakri304811 ай бұрын
Thanks to madhwa mama good Tupsakri Sreenivas family 🆗🆗🆗🆗🆗🙏 4:34
@vijayindrachavate26362 жыл бұрын
Sir very very super prandevaya namaha
@vijayalakshmigreat1832 жыл бұрын
Hare srìnivasa ñàmaga
@joshnaa76393 жыл бұрын
Hare Sreenivasa 🙏🙏🙏🙏
@jyotsna.rao233 жыл бұрын
Very nice,thanks for uploading 🙏
@arunadeshpande60053 жыл бұрын
V. Beautiful sir🙏🙏🙏🙏
@narasimharaju93283 жыл бұрын
Really it takes to god head 🙏
@gayathribala13 жыл бұрын
Very beautiful rendition.. venu sir 🙏🏻🙏🏻
@pranavijoshi96623 жыл бұрын
Bhaala chalo ada anna 🙏
@mohanng46303 жыл бұрын
🙏🏽🙏🏽 समीचीनम्👌🏼👌🏼👌🏼👌🏼👌🏼👌🏼👌👌🏼
@jagannathakulagatte4237 Жыл бұрын
Hare Srinivasa👌🙏🙏🙏🙏
@sedimbijayalakshminarasimh92312 жыл бұрын
Very melodious singing. Divine voice. God bless you Sir.
@aspani63 жыл бұрын
Very pleasant voice namaskaragalu
@srivathskamath4722 жыл бұрын
हरि सर्वोत्तम वायु जीवोत्तम 🙏🙏🙏🙏🙏
@Srikanthraoma3 жыл бұрын
Heart touching. Thank you
@sanjaysakri9 Жыл бұрын
❤jy shri Ram
@gururajdesai16253 жыл бұрын
Haresrinivasa dhannyosmi dhannyosmi
@vijayakannan30543 жыл бұрын
Sweet Voice 👌🙏🙏
@geethavenkat95263 жыл бұрын
Awesome, really soothening to the ears.
@srivathskamath4722 жыл бұрын
हरि सर्वोत्तम वायु जीवोत्तम 🙏🙏🙏🙏🙏
@chidambararao52843 жыл бұрын
ಸುಪರ್
@shakuntalahr61553 жыл бұрын
Clear rendition
@shreenivastupsakri304811 ай бұрын
Super madhwa song TUPSAKRi Sreenivas family 🆗🆗🆗🆗🆗 0:58
@manjunatashiva58943 жыл бұрын
Om shri guruve namha
@hemakulkarni6162 Жыл бұрын
So melodious...
@ರಘುಢಮರುಧ್ವಜ3 жыл бұрын
ಧನ್ಯವಾದಗಳು 🙏🙏🙏
@geetagutti31703 жыл бұрын
How beautiful 👌👌🙏🙏
@mamatharamesh503 жыл бұрын
Jai sri ram
@saraswativittal14412 жыл бұрын
Masterpiece composition 🙏🙏🙏
@shashikalasb78202 жыл бұрын
Dhanyvadagalu.
@mohanrao41773 жыл бұрын
SRI GURUBIHUO NamhaHariOm 🙏🌹🙏🌹🙏🌹🙏🌹🙏🌹🙏🌹🙏🌹
@shreenivastupsakri304811 ай бұрын
Tupsakri Sreenivas family 🆗🆗🆗🆗🆗🆗🆗🆗🆗🆗🆗 thanks for u and ABD vagishtupsakri family Pune Maharashtra India 16:37
@shreenivastupsakri30487 ай бұрын
Thanks for u Tupsakri Sreenivas family 🙏 ok with thanks for your TUPSAKRi Sreenivas family 🙏 ok with thanks for your TUPSAKRi Sreenivas family 🙏🙏😊
@waterfire96678 Жыл бұрын
Sri Hari
@jhenkarjrao80582 жыл бұрын
ಜಯ ಜಯ ಜಗತ್ರಾಣ ಜಗದೊಳಗೆ ಸುತ್ರಾಣ ಅಖಿಳ ಗುಣ ಸದ್ಧಾಮ ಮಧ್ವನಾಮ || ಪ. || ಆವ ಕಚ್ಚಪ ರೂಪದಿಂದ ಲಂಡೋದಕವ ಓವಿ ಧರಿಸಿದ ಶೇಷಮೂರುತಿಯನು ಆವವನ ಬಳಿ ವಿಡಿದು ಹರಿಯ ಸುರರೆಯ್ದುವರು ಆ ವಾಯು ನಮ್ಮ ಕುಲ ಗುರುರಾಯನು || 1 || ಆವವನು ದೇಹದೊಳಗಿರಲು ಹರಿ ನೆಲಸಿಹನು ಆವವನು ತೊಲಗೆ ಹರಿ ತಾ ತೊಲಗುವ ಆವವನು ದೇಹದ ಒಳ ಹೊರಗೆ ನಿಯಾಮಕನು ಆ ವಾಯು ನಮ್ಮ ಕುಲ ಗುರುರಾಯನು || 2 || ಕರುಣಾಭಿಮಾನಿ ಸುರರು ದೇಹವ ಬಿಡಲು ಕುರುಡ ಕಿವುಡ ಮೂಕನೆಂದೆನಿಸುವ ಪರಮ ಮುಖ್ಯಪ್ರಾಣ ತೊಲಗಲಾ ದೇಹವನು ಅರಿತು ಪೆಣವೆಂದು ಪೇಳುವರು ಬುಧ ಜನ || 3 || ಸುರರೊಳಗೆ ನರರೊಳಗೆ ಸರ್ವ ಭೂತಗಳೊಳಗೆ ಪರತರನೆನಿಸಿ ನಿಯಾಮಿಸಿ ನೆಲಸಿಹ ಹರಿಯನಲ್ಲದೆ ಬಗೆಯ ಅನ್ಯರನು ಲೋಕದೊಳು ಗುರು ಕುಲ ತಿಲಕ ಮುಖ್ಯ ಪವಮಾನನು || 4 || ಹನುಮಾವತಾರ ತ್ರೇತೆಯಲಿ ರಘುಪತಿಯ ಸೇವೆ ಮಾಡುವೆನೆಂದು ವಾತ ಸುತ ಹನುಮಂತನೆಂದೆನಿಸಿದ ಪೋತ ಭಾವದಿ ತರಣಿ ಬಿಂಬಕ್ಕೆ ಲಂಘಿಸಿದ ಈತಗೆಣೆಯಾರು ಮೂರ್ಲೋಕದೊಳಗೆ || 5 || ತರಣಿ ಗಭಿಮುಖನಾಗಿ ಶಬ್ದ ಶಾಸ್ತ್ರವ ರಚಿಸಿ ಉರವಣಿಸಿ ಹಿಂದು ಮುಂದಾಗಿ ನಡೆದ ಪರಮ ಪವಮಾನಸುತ ಉದಯಾಸ್ತ ಶೈಲಗಳಭರದಿಯೈದಿದಗೀತಗುಪಮೆ ಉಂಟೇ || 6 || ಅಖಿಳ ವೇದಗಳ ಸಾರ ಪಠಿಸಿದನು ಮುನ್ನಲ್ಲಿ ನಿಖಿಳ ವ್ಯಾಕರಣಗಳ ಇವ ಪಠಿಸಿದ ಮುಖದಲ್ಲಿ ಕಿಂಚಿದಪ ಶಬ್ದ ಇವಗಿಲ್ಲೆಂದು ಮುಖ್ಯಪ್ರಾಣನನು ರಾಮನನುಕರಿಸಿದ || 7 || ತರಣಿ ಸುತನನು ಕಾಯ್ದು ಶರಧಿಯನು ನೆರೆ ದಾಟಿ ಧರಣಿ ಸುತೆಯಳ ಕಂಡು ದನುಜರೊಡನೆ ಭರದಿ ರಣವನೆ ಮಾಡಿ ಗೆಲಿದು ದಿವ್ಯಾಸ್ತ್ರಗಳ ಉರುಹಿ ಲಂಕೆಯ ಬಂದ ಹನುಮಂತನು || 8 || ಹರಿಗೆ ಚೂಡಾಮಣಿಯನಿತ್ತು ಹರಿಗಳ ಕೂಡಿ ಶರಧಿಯನು ಕಟ್ಟಿ ಬಲು ರಕ್ಕಸರನು ಒರಸಿ ರಣದಲಿ ದಶ ಶಿರನ ಹುಡಿ ಗುಟ್ಟಿದ ಮೆರೆದ ಹನುಮಂತ ಬಲವಂತ ಧೀರ || 9 || ಉರಗ ಬಂಧಕೆ ಸಿಲುಕಿ ಕಪಿವರರು ಮೈಮರೆಯೆ ತರಣಿ ಕುಲ ತಿಲಕನಾಜ್ಞೆಯ ತಾಳಿದಗಿರಿ ಸಹಿತ ಸಂಜೀವನವ ಕಿತ್ತು ತಂದಿತ್ತ ಹರಿವರಗೆ ಸರಿಯುಂಟೆ ಹನುಮಂತಗೆ || 10 || ವಿಜಯ ರಘುಪತಿ ಮೆಚ್ಚಿ ಧರಣಿ ಸುತೆಯಳಿಗೀಯೆ ಭಜಿಸಿ ಮೌಕ್ತಿಕದ ಹಾರವನು ಪಡೆದ ಅಜ ಪದವಿಯನು ರಾಮ ಕೊಡುವೆನೆನೆ ಹನುಮಂತ ನಿಜ ಭಕುತಿಯನೆ ಬೇಡಿ ವರವ ಪಡೆದ || 11 || ಭೀಮಾವತಾರ ಆ ಮಾರುತನೆ ಭೀಮನೆನಿಸಿ ದ್ವಾಪರದಲ್ಲಿ ಸೋಮ ಕುಲದಲಿ ಜನಿಸಿ ಪಾರ್ಥನೊಡನೆ ಭೀಮ ವಿಕ್ರಮ ರಕ್ಕಸರ ಮುರಿದೊಟ್ಟಿದ ಆ ಮಹಿಮನಮ್ಮ ಕುಲ ಗುರು ರಾಯನು || 12 || ಕರದಿಂದ ಶಿಶು ಭಾವನಾದ ಭೀಮನ ಬಿಡಲು. ಗಿರಿ ವಡೆದು ಶತ ಶೃಂಗವೆಂದೆನಿಸಿತು ಹರಿಗಳ ಹರಿಗಳಿಂ ಕರಿಗಳ ಕರಿಗಳಿಂ ಅರೆವ ವೀರನಿಗೆ ಸುರ ನರರು ಸರಿಯೇ || 13 || ಕುರುಪ ಗರಳವನಿಕ್ಕೆ ನೆರೆ ಉಂಡು ತೇಗಿ ಹಸಿದುರಗಗಳ ಮ್ಯಾಲೆ ಬಿಡಲದನೊರಸಿದ ಅರಗಿನರಮನೆಯಲ್ಲಿ ಉರಿಯನಿಕ್ಕಲು ವೀರ ಧರಿಸಿ ಜಾಹ್ನವಿಗೊಯ್ದ ತನ್ನನುಜರ || 14 || ಅಲ್ಲಿರ್ದ ಬಕ ಹಿಡಿಂಬಕರೆಂಬ ರಕ್ಕಸರನಿಲ್ಲದೊರಸಿದ ಲೋಕ ಕಂಟಕರನು ಬಲ್ಲಿದಸುರರ ಗೆಲಿದು ದ್ರೌಪದಿಯ ಕೈವಿಡಿದು ಎಲ್ಲ ಸುಜನರಿಗೆ ಹರುಷವ ತೋರಿದ || 15 || ರಾಜಕುಲ ವಜ್ರನೆನಿಸಿದ ಮಾಗಧನ ಸೀಳಿ ರಾಜಸೂಯ ಯಾಗವನು ಮಾಡಿಸಿದನು ಆಜಿಯೊಳು ಕೌರವರ ಬಲವ ಸವರುವೆನೆಂದು ಮೂಜಗವರಿಯೆ ಕಂಕಣ ಕಟ್ಟಿದ || 16 || ಮಾನನಿಧಿ ದ್ರೌಪದಿಯ ಮನದಿಂಗಿತವನರಿತು ದಾನವರ ಸವರಬೇಕೆಂದು ಬ್ಯಾಗಕಾನನವ ಪೊಕ್ಕು ಕಿಮ್ಮೀರಾದಿಗಳ ತರಿದು ಮಾನಿನಿಗೆ ಸೌಗಂಧಿಕವನೆ ತಂದ || 17 || ದುರುಳ ಕೀಚಕನು ತಾಂ ದ್ರೌಪದಿಯ ಚಲುವಿಕೆಗೆ ಮರುಳಾಗಿ ಕರ ಕರೆಯ ಮಾಡಲವನಾ ಗರಡಿ ಮನೆಯಲ್ಲಿ ವರೆಸಿ ಅವನನ್ವಯದ ಕುರುಪನಟ್ಟಿದ ಮಲ್ಲ ಕುಲವ ಸದೆದ || 18 || ಕೌರವರ ಬಲ ಸವರಿ ವೈರಿಗಳ ನೆಗ್ಗೊತ್ತಿ ಓರಂತೆ ಕೌರವನ ಮುರಿದು ಮೆರೆದ ವೈರಿ ದುಶ್ಯಾಸನ್ನ ರಣದಲ್ಲಿ ಎಡೆ ಗೆಡಹಿ ವೀರ ನರಹರಿಯ ಲೀಲೆಯ ತೋರಿದ || 19 || ಗುರು ಸುತನು ಸಂಗರದಿ ನಾರಾಯಣಾಸ್ತ್ರವನು ಉರವಣಿಸಿ ಬಿಡಲು ಶಸ್ತ್ರವ ಬಿಸುಟರು ಹರಿ ಕೃಪೆಯ ಪಡೆದಿರ್ದ ಭೀಮ ಹುಂಕಾರದಲಿ ಹರಿಯ ದಿವ್ಯಾಸ್ತ್ರವನು ನೆರೆ ಅಟ್ಟಿದ || 20 || ಚಂಡ ವಿಕ್ರಮನು ಗದೆಗೊಂಡು ರಣದಿ ಭೂಮಂಡಲದೊಳಿದಿರಾಂತ ಖಳರನೆಲ್ಲಾಹಿಂಡಿ ಬಿಸುಟಿಹ ವೃಕೋದರನ ಪ್ರತಾಪವನುಕಂಡು ನಿಲ್ಲುವರಾರು ತ್ರಿಭುವನದೊಳು || 21 || ನಾರಿರೋದನ ಕೇಳಿ ಮನಮರುಗಿ ಗುರುಸುತನ ಹಾರಿ ಹಿಡಿದು ಶಿರೋರತ್ನ ಕಿತ್ತಿ ತೆಗೆದ ನೀರೊಳಡಗಿದ್ದ ದುರ್ಯೋಧನನ ಹೊರಗೆಡಹಿ ಉರುದ್ವಯ ತನ್ನ ಗದೆಯಿಂದ ಮುರಿದ || 22 || ಮಧ್ವಾವತಾರ ದಾನವರು ಕಲಿಯುಗದೊಳವತರಿಸಿ ವಿಬುಧರೊಳು ವೇನನ ಮತ ವನರುಹಲದನರಿತು ಜ್ಞಾನಿ ತಾ ಪವಮಾನ ಭೂತಳದೊಳವತರಿಸಿ ಮಾನನಿಧಿ ಮಧ್ವಾಖ್ಯನೆಂದೆನಿಸಿದ || 23 || ಅರ್ಭಕತನದೊಳೈದಿ ಬದರಿಯಲಿ ಮಧ್ವಮುನಿ ನಿರ್ಭಯದಿ ಸಕಳ ಶಾಸ್ತ್ರವ ಪಠಿಸಿದ ಉರ್ವಿಯೊಳು ಮಾಯೆ ಬೀರಲು ತತ್ವ ಮಾರ್ಗವನು ಓರ್ವ ಮಧ್ವಮುನಿ ತೋರ್ದ ಸುಜನರ್ಗೆ || 24 || ಸರ್ವೇಶ ಹರ ವಿಶ್ವ ಎಲ್ಲ ತಾ ಪುಸಿಯೆಂಬ ದುರ್ವಾದಿಗಳ ಮತವ ನೆ ಖಂಡಿಸಿ ಸರ್ವೇಶ ಹರಿ ವಿಶ್ವ ಸತ್ಯವೆಂದರುಹಿ ದಾಶರ್ವಾದಿ ಗೀರ್ವಾಣ ಸಂತತಿಯಲಿ || 25 || ಏಕವಿಂಶತಿ ಕುಭಾಷ್ಯಗಳ ಬೇರನು ತರಿದು ಶ್ರೀಕರಾರ್ಚಿತನೊಲುಮೆ ಶಾಸ್ತ್ರ ರಚಿಸಿ ಲೋಕತ್ರಯದೊಳಿದ್ದಸುರರು ಆಲಿಸುವಂತೆ ಆಕಮಲನಾಭಯತಿನಿಕರಕೊರೆದ || 26 || ಬದರಿಕಾಶ್ರಮಕೆ ಪುನರಪಿಯೈದಿ ವ್ಯಾಸಮುನಿ ಪದಕೆರಗಿ ಅಖಿಳ ವೇದಾರ್ಥಗಳನು ಪದುಮನಾಭನ ಮುಖದಿ ತಿಳಿದು ಬ್ರಹ್ಮತ್ವಯ್ಯೆದಿದ ಮಧ್ವಮುನಿರಾಯಗಭಿವಂದಿಪೆ || 27 || ಜಯ ಜಯತು ದುರ್ವಾದಿ ಮತ ತಿಮಿರ ಮಾರ್ತಾಂಡ ಜಯ ಜಯತು ವಾದಿ ಗಜ ಪಂಚಾನನ ಜಯ ಜಯತು ಚಾರ್ವಾಕ ಗರ್ವ ಪರ್ವತ ಕುಲಿಶ ಜಯ ಜಯ ಜಗನ್ನಾಥ ಮಧ್ವನಾಥ || 28 || ತುಂಗ ಕುಲ ಗುರು ವರನ ಹೃತ್ಕಮಲದಲಿ ನಿಲಿಸಿ ಭಂಗ ವಿಲ್ಲದೆ ಸುಖದ ಸುಜನಕೆಲ್ಲ ಹಿಂಗದೆ ಕೊಡುವ ನಮ್ಮ ಮಧ್ವಾಂತರಾತ್ಮಕ ರಂಗವಿಠಲನೆಂದು ನೆರೆ ಸಾರಿರೈ || 29 ||
@shreenivastupsakri304811 ай бұрын
Thanks for your support Tupsakri Sreenivas family 🆗🆗🆗 i 6:45 6:53 6:56
@badrinathkowligi58973 жыл бұрын
Thumba chennagi helidira sir...music is also very good..
@Ayd-g-aming5 ай бұрын
😍😇🙏
@shobha.s.kulkarnikulkarni9392 Жыл бұрын
So beautiful and gergous song 💕💕💕💕💕💕💞💞💞💞💞💞💘💘💘💘💘💘💘❤❤❤❤❤😍😍😍😍😍