Рет қаралды 2,095
ಭಜನೆ, ದಾಸರ ಹಾಡುಗಳು, ದಾಸರ ಪದಗಳು, ದಾಸ ಸಾಹಿತ್ಯ
Bhajane, Dasara Hadugalu, Padagalu, Dasa Sahitya
Singer: Gayathri Sudarshan
ಗಾಯಕರು: ಗಾಯತ್ರೀ ಸುದರ್ಷನ್
ಮೂಢನು ನಾನಯ್ಯ ನಿನ್ನನು
ಬೇಡಲರಿಯೆನಯ್ಯ ||ಪ||
ದಯಾಸಿಂಧು ಹರಿಯೆ
ದಯದಲಿ ನೋಡು ವಜ್ರದ ಖಣಿಯೆ
ಭಯಪಡುವೆನು ಈ ಭವಸಾಗರದಿ ಅ-
ಭಯವ ಪಾಲಿಸೊ ಹಯವದನನೆ ಹರಿ ||೧||
ದಿಕ್ಕುಯಾರು ಇದಕೆ ಪಾಪವು ಉಕ್ಕಿತು ದಿನದಿನಕೆ
ಸೊಕ್ಕಿ ಸಿಲುಕಿದೆನು ಯಮನ ಪಾಶಕೆ
ಚಿಕ್ಕವನನು ನೋಡಕ್ಕರದಲಿ ಹರಿ ||೨||
ಸಿರಿಹಯವದನನ್ನ ಶರಣರ ಶಿರೋಮಣಿರನ್ನ
ಗುರು ದೊರೆಯೆ ನಂಬಿದೆ ನಿನ್ನ
ಕರಿಯ ರಕ್ಷಕನೆಂದು ಕರೆವೆನೊ ಮುನ್ನ ||೩||
mUDhanu nAnayya ninnanu
bEDalariyenayya ||pa||
dayAsiMdhu hariye
dayadali nODu vajrada KaNiye
BayapaDuvenu I BavasAgaradi a-
Bayava pAliso hayavadanane hari ||1||
dikkuyAru idake pApavu ukkitu dinadinake
sokki silukidenu yamana pASake
cikkavananu nODakkaradali hari ||2||
sirihayavadananna SaraNara SirOmaNiranna
guru doreye naMbide ninna
kariya rakShakaneMdu kareveno munna ||3||