Рет қаралды 809
ಶರಣು ಭಾರತೀ ದೇವಿಗೆ | ಶರಣು ವಾಯು ರಮಣಿಗೆ ||ಪ ||
ಶರಣು ಶರಣರ ಪೊರೆವ ಕರುಣಿಗೆ |ಶರಣು ಸುರವರ ದೇವಿಗೆ ||
ಸುರರು ಮೊದಲದವರಿಗೆಲ್ಲ | ಪರಮ ಮಂಗಳ ನೀವಳೇ ||
ಚರಣ ಕಮಲಕೆ ಮೊರೆಯ ಹೊಕ್ಕೆನು |ಕರುಣಿಸೆನಗೆ ಮತಿಗಳ ||
ಪಿಂಗಳ ರೂಪಳೆ ಮಂಗಳ ಮಹಿಮಳೆ |ಹಿಂಗದೆ ಕೊಡು ಹರಿ ಭಕುತಿಯ || ರಂಗನಾಥ ಪಾದಬ್ಜ bhrungale | ಅಂತರಂಗದ ಪ್ರಿಯಳೇ ||
ಪಕ್ಷಿವಾಹನ ಲಕ್ಷ್ಮೀ ರಮಣ ದಕ್ಷ ಪುರಂದರ ವಿಠ್ಠಲ ನೋಳ್ |
ಅಕ್ಷಯ ದಿಂದಲಿ ಕೊಟ್ಟು ಭಕುತಿಯ ರಕ್ಷಿಸೆನ್ನನು ಅನುದಿನ ||