Рет қаралды 125,031
Watch UHD ( 4K ) Exclusive Hachagonda Hudugiya Maduve Adara Chuchidanga Agataiti Kannada Janapada Video Song On Ningaraj Singadi KZbin Channel
ಸಾಹಿತ್ಯ - ಸಂಕಲನ - ನಿರ್ದೇಶನ : ನಿಂಗರಾಜ್ ಸಿಂಗಾಡಿ
ಗಾಯನ : ಪರಸು ಕೋಲೂರ್
ಕ್ಯಾಮೆರಾ : ಅಜೀತ್ ಸಿಂಗಾಡಿ
ಸಂಗೀತ : ಅಲಿಬಾಬಾ ಗೋಕಾಕ
ರೆಕಾರ್ಡಿಂಗ್ : ವಿನಾಯಕ ರೆಕಾರ್ಡಿಂಗ್ ಸ್ಟುಡಿಯೋ ಮಹಾಲಿಂಗಾಪುರ
ವಿಶೇಷ ಧನ್ಯವಾದಗಳು :
ಆನಂದ್ ಅಚ್ಚಾರಟ್ಟಿ
ಪ್ಯಾರಡೈಸ್ ಸ್ಟುಡಿಯೋ
ರಾಘು ಕಡಕೋಳ
ರೆಡ್ಡಿ ಕಲ್ಯಾಣ ಮಂಟಪ
ಹಾಲಳ್ಳಿ ಗ್ರಾಮಸ್ಥರು
ಭೂಮಿಕಾ ದೇಶಪಾಂಡೆ
ಕಲಾವಿದರು :
ನಿಂಗರಾಜ್ ಸಿಂಗಾಡಿ
ಶ್ರೀ ಕಲಬುರಗಿ
ಅಮೀತ್ ಶೂರ್ಪಾಲಿ
ರಾಘು ಕಡಕೋಳ
ತಿಮ್ಮಣ್ಣ ಪೂಜಾರಿ
ರಾಯಪ್ಪ ಸಾತಾನಿ
ರಾಮಪ್ಪ ಪೂಜಾರಿ
ಚೋಳ ಪ್ರಶಾಂತ್
ಪ್ರವೀಣ್ ಕವಟಗಿ
ಪುಂಡಲೀಕ್ ಸಂಪಾಳ್
ಕಾಗಿ ಮೇಡಂ
ಗಿರೀಶ್ ಪಾಟೀಲ್
ಮಾರುತಿ ಗಾಡಿವಡ್ಡರ
ವಿನಯ ಹುನ್ನೂರ
ಶಂಕರ್ ಶಾಸ್ತ್ರೀ
ಟೀಮ್ :
ಅಮೀತ್ ಶೂರ್ಪಾಲಿ
ಅಜೀತ್ ಸಿಂಗಾಡಿ
ಅನಿರುದ್ದ್ ಜೋಶಿ
ಅಕ್ಷಯ್ ಗುಡ್ಡದಮಠ
ಮಾರುತಿ ಗಾಡಿವಡ್ಡರ
ಮಲ್ಲು ಕಲಕತ್ತಿಮಠ
ಪ್ರಶಾಂತ್ ಗುರ್ಲಾಪುರ
ಅಬೂಬಕರ್ ಅವಟಿ
ಸಾಹಿತ್ಯ :
ಹಚಗೊಂಡ ಹುಡಗಿಯ ಮದುವಿಯಾದರ ಚುಚ್ಚಿದಂಗ ಆಗತೈತಿ ||
ಚುಚ್ಚಿದಂಗ ಆಗತೈತಿ, ಮಣ್ಣಾಗ ಮುಚ್ಚಿದಂಗ ಆಗತೈತಿ.
ರೊಕ್ಕ ನೋಡುವ ನಿಮ್ಮನಿ ಮಂದಿಗೆ ಪ್ರೀತಿ ಕಾಣಲಿಲ್ಲ
ಜಾತಿಯೆಂಬ ವಿಷ ಕುಡಸಿದ ಮ್ಯಾಲ ಪ್ರೀತಿ ಉಳಿಯಲ್ಲಿಲ್ಲ
ರಾಧಾಕೃಷ್ಣರಂಗ ನಮ್ಮ ಪ್ರೀತಿನೂ ದೂರ ಆಯಿತಲ್ಲ
ಜೀವನಪೂರ್ತಿ ಬಿಟ್ಟೆಂಗ ಬದುಕುದು ಒಂದೂ ತಿಳಿಯುತ್ತಿಲ್ಲ
ಮರೆತರೂ ಮರೆಯಲಾಗುತ್ತಿಲ್ಲ. || ಪ ||
ಚಂದನ ಹುಡುಗಿ ಚಿನ್ನದ ಗಡಿಗಿ ಪಳ ಪಳ ಹೊಳಿತಾಳೋ
ನನ್ನ ನೋಡಿದರ ಏನೋ ಸಿಕ್ಕಂಗ ಕುಲುಕುಲು ನಗುತಾಳೋ
ಕಣ್ಣು ಮುಚ್ಚಿದರ ಕಣ್ಣಿನ ಮುಂದ ಆಕಿನ ಕಾಣತಾಳೋ
ಮುಂದಿನ ಜನ್ಮ ಮತ್ತೊಂದಿದ್ದರೆ ನನಗೆ ಸಿಗುತಾಳೋ
ಈಗ ಬಿಟ್ಟೆಂಗ ಇರತಾಳೋ. || ಪ ||
ನಿನ್ನ ಕೈಯಿಗೆ ಬಳಿ ಹಣೆಗೆ ಕುಂಕುಮ ಹಚ್ಚಿದಾವ ನಾನ
ಸೀರೆಯನುಡಿಸಿ ಹೂವ ಮುಡಿಸಿ ಪ್ರೀತಿಸಿದವ ನಾನ
ನಗುನಗುತಿರಲಿ ಸುಖವಾಗಿರಲೆಂದು ನಾನು ಕೇಳುತ್ತೇನ
ಗಂಡನ ಕೈಹಿಡಿದು ಹೊರಟ ನಿನ್ನನ್ನೂ ಹೆಂಗ ನೋಡತೇನ
ಗೆಳತಿ ನಾನು ಸಾಯತೇನ. || ಪ ||
ನಿನ್ನ ಅರಿಶಿಣ ನೀರ ಹಾಕುವಾಗ ನನ್ನ ಹೆಣ ತೊಳಿಯಬೇಕ
ಉಡಿಯಕ್ಕಿ ಹಾಕೊಂಡು ಹೋಗುವ ಮೊದಲು ಮಣ್ಣ ಮಾಡಬೇಕ
ಸೂರ್ಯ ಚಂದ್ರರು ಇರುವವರೆಗೂ ನಮ್ಮ ಪ್ರೀತಿ ಉಳಿಯಬೇಕ
ಪ್ರೀತಿಸಿದವರು ನಮ್ಮನ್ನು ನೋಡಿ ಪ್ರೀತಿ ಕಲಿಯಬೇಕ
ನನ್ನಂಗ ಪ್ರೀತಿ ಮಾಡಬೇಕ. || ಪ ||
ಹಚಗೊಂಡ ಹುಡಗಿಯ ಮದುವಿಯಾದರ ಚುಚ್ಚಿದಂಗ ಆಗತೈತಿ
ಚುಚ್ಚಿದಂಗ ಆಗತೈತಿ, ಮಣ್ಣಾಗ ಮುಚ್ಚಿದಂಗ ಆಗತೈತಿ.
#ningarajsingadi #parasukolur #janapada #janapada_geete #janapada_songs_kannada_feeling_dj #janapada_geethegalu #janapada_songs_kannada #mallyabagalkot #basavarajsanadi
Thank You for Watching Video
Please do Subscria