Lyrics... 🎧 ನೀನೆ ನನ್ನ ಮಾರ್ಗವು ನೀನೆ ನನ್ನ ಸತ್ಯವು ನೀನೆ ನನ್ನ ಜೀವವು ನೀನೆ ನನ್ನ ಭಾಗ್ಯವು ಆರಾಧನೆ ಆರಾಧನೆ ಆರಾಧನೆ ಆರಾಧನೆ 1.ನನ್ನ ಚಿಕ್ಕ ದೋಣಿಯಲ್ಲಿ ಇರುವೆ ನೀ ಯೇಸು ಬಿರುಗಾಳಿ ಬೀಸಿದರು ಕಾಯುವುದು ನಿನ್ನ ಹಸ್ತವು ನನ್ನ ಪುಟ್ಟ ಬಾಳಿನಲ್ಲಿ ಇರುವೆ ನೀ ಯೇಸು ಹಿಂಸೆಗಳು ಎದುರಾದರೂ ನಿನ್ನ ಕೃಪೆಯೇ ಸಾಕು ಸೋತು ಹೋದ ದಿನವೆಲ್ಲಾ ಚೈತನ್ಯ ತುಂಬಿನನ್ನನ್ನು ನೀ ನಡೆಸಿದಿ 2.ರೋಗವು ಬಂದಿದ್ದು ಒಳ್ಳೆಯದೆ ಯೇಸು ನಿನ್ನ ಮಹಿಮೆ ಕಾಣದೆ ನಾ ಸಾಯುತ್ತಿದ್ದೆ ಲೋಕದ ಭೋಗಗಳಿಗೆ ಒಳಗಾಗಿ ನಾ ನರಕದ ಹಾದಿಯಲ್ಲಿ ನಾ ಆಲೆಯುತ್ತಿದ್ದೆ ನಿನ್ನ ಸ್ವರವ ಕೇಳಿ ನಾ ನಿನ್ನಲ್ಲಿ ಬಂದಿರುವೆ ನನ್ನನ್ನು ಕೈ ಬಿಡಬೇಡ 3.ಕಷ್ಟನುಭವವು ಹಿತಕರವಾಯ್ತು ಆದ್ದರಿಂದಲೇ ನಿನ್ನ ನಿಬಂಧನೆ ಕಲಿತೆ ನಿನಗೆ ಸಮಾನರು ಯಾರಿಹರೆಂದು ನನ್ನಯ ಎಲುಬುಗಳು ಹೇಳುವವು ನನ್ನ ಪ್ರಾಣವನ್ನು ಮರಣದಿಂದ ತಪ್ಪಿಸಿ ಬರಗಾಲದಲ್ಲಿ ಜೀವ ಉಳಿಸಿದೆ