Рет қаралды 6,815
ರಾಗ : ಮಧುಕೌಂಸ್
ಕಡಗ ಕಂಕಣ ನಡುವಿನೊಡ್ಯಾಣ
ಹೊಳೆಯುವ ಕರ್ಣದ ಆಭರಣ
ಸರ್ವಾಲಂಕ್ರತೆ ನಿನ್ನ ನಂಬಿದೆ ತಾಯೆ
ಸರ್ವಮಂಗಳೆ ಪಾಲಿಸು ವರಮಾಲೆ
ಪಾಲಿಸೆ ವರ ಮಾಲೆಯ ಭ್ರಾಮರಿ|
ಚರಣ ಪಲ್ಲವ ಕುಸುಮವ ವರದ ಹಸ್ತದ ಪುಷ್ಪವಾ ||
ಉಡಿಯ ಮಲ್ಲಿಗೆ ಕರದ ತಾವರೆ ವರ ಪ್ರಸಾದದ ಮಾಲೆಯ ||ಪಾಲಿಸೆ||
ಶರಣರನ್ನು ಪೊರೆಯಲೆಂದೆ ಧರೆಗೆ ಬಂದು ನಿಂತೆಯ|
ಕಟೀಲ ರಾಣಿ ಕುಸುಮವೇಣಿ|
ನಿನ್ನ ಪಾದದ ಪಂಕಜಾ ಗಂಧ ಘಮ ಹೂದಂಡೆಯಾ|
ಮುಡಿಯ ಸಂಪಿಗೆ ಕರದ ಕೇದಗೆ ವರ ಪ್ರಸಾದದ ಮಾಲೆಯ
ಬೇಡಿದವರಿಗೆ ನೀಡಲೆಂದೆ ಭುವಿಗೆ ಓಡಿ ಬಂದೆಯಾ|
ಕಟೀಲ ಅಂಬೆ ಸುಂದರಾಂಬೆ|
ಪರಮ ಚರಣದ ಪುಷ್ಪವ ಗಂಧ ಸಂಭ್ರಮ ದಂಡೆಯ|
ಮುಡಿಯ ನೈದಿಲೆ ಕರದ ರಂಜೆ ವರ ಪ್ರಸಾದದ ಮಾಲೆಯ
ಧರೆಯ ಭಾರವ ಇಳುಹಳೆಂದೆ ದುಂಬಿ ರೂಪದಿ ಬಂದೆಯಾ|
ಕಟೀಲ ಕಣ್ಮಣಿ ಮಧುಮನೋನ್ಮಣಿ|
ನಿನ್ನ ಅಡಿಗಳ ಹೂಗಳ ಘನ್ನ ಮಹಿಮ ಪ್ರಸಾದವ|
ಮುಡಿಯ ಸೇವಂತಿ ಕರದ ನಂದಿನಿ ವರ ಪ್ರಸಾದದ ಮಾಲೆಯ