Рет қаралды 16,808
ಸಾಮಗಾನ ಕೋವಿದೆ
ರಾಗರಾಣಿ ಶಾರದೆ||ಸಾಮಗಾನ||
ಸಾಮಗಾನ ಕೋವಿದೆ ಆ...ಆ...
ಶ್ರಂಗ ಪುರದಿ ನೆಲೆಸಿ ನಿಂತ
ಮಂಗಳಾಂಗಿ ಭಾರತಿ||ಶ್ರಂಗ||
ತಿಂಗಳ ಬೆಳಕ ಶಿರದಿ ಧರಿಸಿದ
ಅಂಗಜಾರಿಯ ಸೋದರಿ||ತಿಂಗಳ||
||ಸಾಮಗಾನ||
ತುಂಗಾನಂದಿನಿ ಬಳಸಿ ನಿಂತ
ಮಾತಂಗಿ ಸುಂದರಿ||ತುಂಗಾ||
ಮಂದಹಾಸ ಶೋಭಿತೆ
ಇಂದ್ರ ಪೂಜಿತ ವಂದಿತೆ||ಮಂದಹಾಸ||
||ಸಾಮಗಾನ||
ಅಕ್ಷಮಾಲೆ ಅಮ್ರತಕಳಸ
ಹಸ್ತಪುಸ್ತಕರೂಪಿಣಿ||ಅಕ್ಷಮಾಲೆ||
ಸಾಕ್ಷಾತ್ಕಾರದಿ ಶಂಕರಗೊಲಿದ
ಅಕ್ಷರರೂಪಧಾರಿಣಿ||ಸಾಕ್ಷಾತ್ಕಾರ||
||ಸಾಮಗಾನ||