ರಾಮ ಗೋವಿಂದ ಹರೇ ಕೃಷ್ಣ ಗೋವಿಂದ ದಾಮೋದರ ಹರಿ ವಿಷ್ಣು ಮುಕುಂದ || ಪ || ಮಚ್ಚವತಾರದೊಳಾಡಿದನೆ ಮಂದರಾಚಲ ಬೆನ್ನೊಳ ಗಾಂತವನೆ ಅಚ್ಚ ಸೂಕರನಾಗಿ ಬಾಳಿದನೆ ಮದ ಹೆಚ್ಚಿ ಹಿರಣ್ಯಕನ ಸೀಳಿದನೆ || ೧ || ಬಲಿಯೋಳು ದಾನವ ಬೇಡಿದನೆ ಕ್ಷಾತ್ರ ಕುಲವ ಬಿಡದೆ ಕ್ಷಯ ಮಾಡಿದನೆ ಜಲನಿಧಿಗೆ ಬಿಲ್ಲ ಹೂಡಿದನೆ ಕಾಮ ಕೊಲಿದು ಗೊಲ್ಲತಿಯೋಳ್ ಆಡಿದನೆ || ೨ || ಸಾಧಿಸಿ ತ್ರಿಪುರರ ಗೆಲಿದವನೆ ಪ್ರತಿವಾದಿಸಿ ಹಯವೇರಿ ನಲಿದವನೆ ಭೇದಿಸಿ ವಿಶ್ವವ ಗೆಲಿದವನೆ ಬಾಡದಾದಿ ಕೇಶವರಾಯ ನಮಗೊಲಿದವನೆ || ೩ ||
@viswanathn44562 жыл бұрын
ಬಹಳ ಚನ್ನಾಗಿ ಹಾಡಿದ್ದೀರಿ ನಿಮಗೆ ಅನಂತ ವಂದನೆಗಳು
@swarasangeetha3 жыл бұрын
ನಮಸ್ತೆ ಸರ್ ನೀವು ಹಾಡನ್ನು ತುಂಬಾ ಅದ್ಭುತವಾಗಿ ಹಾಡಿರುವಿರಿ🙏🙏🙏👌👌👌 ನಿಮಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು.ದಯವಿಟ್ಟು ಸಾಹಿತ್ಯ ಕಳುಹಿಸಿಕೊಟ್ಟರೆ ನಮಗೆ ಕಲಿಯಲು ಸಾಧ್ಯವಾಗುತ್ತದೆ.ಭಗವಂತನ ಆಶೀರ್ವಾದ ತಮ್ಮ ಗಾಯನವನ್ನು ಆಕಾಶದಷ್ಟು ಎತ್ತರಕ್ಕೆ ತಲುಪಿಸಲಿ