Рет қаралды 222,570
ಇದು ಉದಯ ಟಿವಿಯಲ್ಲಿ ಪ್ರಸಾರವಾದ ಬಿ.ಸುರೇಶ ನಿರ್ದೇಶನದ ಧಾರಾವಾಹಿಯ ಶೀರ್ಷಿಕೆ ಗೀತೆ. ಸಂಗೀತ : ಹಂಸಲೇಖ. ಹಾಡಿದವರು: ಫಯಾಜ್ ಖಾನ್ ಮತ್ತು ಎಂ.ಡಿ.ಪಲ್ಲವಿ. ರಚನೆ : ದ.ರಾ.ಬೇಂದ್ರೆ. ಒಟ್ಟು ೧೪೦೦ ಕಂತುಗಳಷ್ಟು ಪ್ರಸಾರವಾದ ಈ ಧಾರಾವಾಹಿ ೨೦೦೪ ರಿಂದ ೨೦೦೯ ರ ವರೆಗೆ ಪ್ರಸಾರವಾದ ಅತ್ಯಂತ ಜನಪ್ರಿಯ ಧಾರಾವಾಹಿ ಆಗಿತ್ತು.
ಇಲ್ಲಿರುವ ಹಾಡಿನ ದೃಶ್ಯದಲ್ಲಿ ನೀವು ಕಾಣುವುದು ಡಿ.ಎಸ್.ಚೌಗಲೆ ಅವರು ಬರೆದ ಚಿತ್ರಗಳನ್ನು.ಇದಲ್ಲದೆ ಇದೇ ಹಾಡಿಗೆ ಪ್ರತೀ ನೂರು ಪ್ರಕರಣಕ್ಕೆ ಎಂಬಂತೆ ವಿಭಿನ್ನ ದೃಶ್ಯ ಸಂಯೋಜಿಸುತ್ತಾ ಇದ್ದೆವು.