Vasudhendra Full Version | ಬಿಚ್ಚಿಟ್ಟ ಬುತ್ತಿ | Web Sambhashane | bichchitta butthi | ಮಾಧ್ಯಮ ಅನೇಕ

  Рет қаралды 10,787

Maadhyama Aneka ಮಾಧ್ಯಮ ಅನೇಕ

Maadhyama Aneka ಮಾಧ್ಯಮ ಅನೇಕ

3 жыл бұрын

Maadhyama Aneka | Web Interview | ಬಿಚ್ಚಿಟ್ಟ ಬುತ್ತಿ | Web Sambhashane | bichchitta butthi | ಮಾಧ್ಯಮ ಅನೇಕ
2013ರಲ್ಲಿ ಪ್ರಕಟವಾದ “ಮೋಹನ ಸ್ವಾಮಿ” ಕಥಾ ಸಂಕಲನ ಸಾಹಿತ್ಯ ಮತ್ತು ಸಾಮಾಜಿಕ ವಲಯಗಳಲ್ಲಿ ಹೊಸ ಸಂಚಲನ ಮತ್ತು ಚರ್ಚೆಗೆ ಹುಟ್ಟುಹಾಕಿತು. ಅದರ ಲೇಖಕ ವಸುಧೇಂದ್ರ ಅವರು ತಮ್ಮ ಮೋಹನಸ್ವಾಮಿ ಪುಸ್ತಕ ಪ್ರಕಟಿಸುವುದರೊಂದಿಗೆ ತಾವೊಬ್ಬ Gay ಎಂಬುದನ್ನೂ ಬಹಿರಂಗಪಡಿಸುವುದರೊಂದಿಗೆ ಸಾಮಾಜಿಕ ವಲಯಗಳಲ್ಲೂ ಸಂಚಲನೆಯನ್ನು ಸೃಷ್ಟಿಸಿದರು. ಗೇಗಳಿಗೆ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಸಾಮಾಜಿಕ ಸ್ವೀಕಾರದ ಕುರಿತು ಬರೆದ ಆ ಪುಸ್ತಕ ಎಷ್ಟು ಜನಪ್ರಿಯವಾಯಿತೆಂದರೆ ದಕ್ಷಿಣದ ಎಲ್ಲ ಭಾಷೆಗಳು ಮತ್ತು ಹಿಂದಿಗೂ ಅನುವಾದವಾಗುವುದಷ್ಟೇ ಅಲ್ಲದೆ English ಮತ್ತು Spanishಗೂ ಭಾಷಾಂತರವಾಯಿತು.
“ಮೋಹನಸ್ವಾಮಿ” ವಸುಧೇಂದ್ರರ ಮೊದಲ ಕೃತಿಯಲ್ಲ. ಮನೀಷೆ, ಯುಗಾದಿ, ಕೋತಿಗಳು, ಚೇಳು, ನಮ್ಮಮ್ಮ ಅಂದ್ರೆ ನಂಗಿಷ್ಟ, ರಕ್ಷಕ ಅನಾಥ, ಹಂಪಿ ಎಕ್ಸ್ ಪ್ರೆಸ್, ವರ್ಣಮಯ ಇತ್ಯಾದಿ ಕತೆಗಳು ಮತ್ತು ಸುಲಲಿತ ಪ್ರಬಂಧಗಳನ್ನು ವಸುಧೇಂದ್ರ ಅವರು ಬರೆದಿದ್ದಾರೆ. “ಮಿಥುನ” ಶೀರ್ಷಿಕೆಯಲ್ಲಿ ರಮಣ ಅವರ ಕಥೆಗಳ ಅನುವಾದ, ಪರ್ವತಾರೋಹಣದ ದುರಂತದ ಬಗ್ಗೆ ಜಾನ್ ಕ್ರಾಕೌರ್ ಅವರ “ಎವರೆಸ್ಟ್” ಪುಸ್ತಕದ ಅನುವಾದವನ್ನೂ ಮಾಡಿದ್ದಾರೆ. ಇದೀಗಷ್ಟೇ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಗೌರವ ಪಡೆದ “ತೇಜೋ ತುಂಗಭದ್ರಾ” ವಸುಧೇಂದ್ರ ಅವರ ಇತ್ತೀಚಿನ ಜನಪ್ರಿಯ ಕಾದಂಬರಿ.
“ನನ್ನ ಕತೆಗಳನ್ನು ಓದಿ ಅರ್ಥೈಸಿಕೊಳ್ಳುವುದು ಒಂದು ಸವಾಲಾಗಿ ಪರಿಣಮಿಸಬಾರದು” ಅನ್ನುವ ವಸುಧೇಂದ್ರ, ಎಲ್ಲರಿಗೂ ಸುಲಭವಾಗಿ ಅರ್ಥವಾಗುವ ಹಾಗೆ ಸರಳವಾಗಿ ಬರೆಯುತ್ತಾರೆ. ತಮ್ಮ ಬರಹಗಳಂತೆ, ಮಾತು ಹಾಗೂ ನಡವಳಿಕೆಯಲ್ಲೂ ಸರಳತೆ ಹೊಂದಿರುವ ವಸುಧೇಂದ್ರ, ಬಳ್ಳಾರಿ ಜಿಲ್ಲೆಯ ಸಂಡೂರಿನವರು. ಸುರತ್ಕಲ್ ನ National Institute of Technologyಯಿಂದ ಇಂಜಿನಿಯರಿಂಗ್ ಪದವಿ ಪಡೆದ ಇವರು, ಬೆಂಗಳೂರಿನ Indian Institute of Science ನಿಂದ Master of Engineering ಪದವಿ ಗಳಿಸಿದ್ದಾರೆ. ಆ ಬಳಿಕ, ಸುಮಾರು 20 ವರ್ಷಗಳ ಕಾಲ Software ತಜ್ಞರಾಗಿ ಆಗಿ ದೇಶ ವಿದೇಶಗಳಲ್ಲಿ ಕೆಲಸ ಮಾಡಿದ್ದಾರೆ.
ತಮ್ಮ ಬರವಣಿಗೆಯನ್ನು ಓದುಗರಿಗೆ ಮುಟ್ಟಿಸುವಲ್ಲಿ ಎದುರಾದ ಸಮಸ್ಯೆಗಳನ್ನು ನಿವಾರಿಸಿಕೊಳ್ಳುವ ಸಲುವಾಗಿ ತಮ್ಮದೇ ಆದ “ಛಂದ ಪುಸ್ತಕ” ಪ್ರಕಾಶನ ಸಂಸ್ಥೆಯನ್ನೇ ಆರಂಭಿಸಿದ ವಸುಧೇಂದ್ರ, ಆ ಕೆಲಸದಲ್ಲೂ ಯಶಸ್ವಿಯಾಗಿದ್ದಾರೆ. ಇದರ ಜೊತೆಗೆ, ಹಲವಾರು ಯುವ ಬರಹಗಾರರ ಪುಸ್ತಕಗಳನ್ನೂ ಪ್ರಕಟಿಸಿದ್ದಾರೆ. ವಿನೂತನ ವಿನ್ಯಾಸ ಮತ್ತು ಗುಣಮಟ್ಟದಿಂದ ಹೆಸರಾಗಿರುವ “ಛಂದ ಪುಸ್ತಕಗಳು” ಈವರೆಗೆ 60ಕ್ಕೂ ಹೆಚ್ಚು ಬಹುಮಾನಗಳನ್ನು ಪಡೆದಿವೆ. ತಮ್ಮ ಬರವಣಿಗೆಯನ್ನು ಓದುಗರಿಗೆ ಮುಟ್ಟಿಸುವಲ್ಲಿ ಎದುರಾದ ಸಮಸ್ಯೆಗಳನ್ನು ನಿವಾರಿಸಿಕೊಳ್ಳುವ ಸಲುವಾಗಿ ತಮ್ಮದೇ ಆದ “ಛಂದ ಪುಸ್ತಕ” ಪ್ರಕಾಶನ ಸಂಸ್ಥೆಯನ್ನೇ ಆರಂಭಿಸಿದ ವಸುಧೇಂದ್ರ, ಆ ಕೆಲಸದಲ್ಲೂ ಯಶಸ್ವಿಯಾಗಿದ್ದಾರೆ. ಇದರ ಜೊತೆಗೆ, ಹಲವಾರು ಯುವ ಬರಹಗಾರರ ಪುಸ್ತಕಗಳನ್ನೂ ಪ್ರಕಟಿಸಿದ್ದಾರೆ. ವಿನೂತನ ವಿನ್ಯಾಸ ಮತ್ತು ಗುಣಮಟ್ಟದಿಂದ ಹೆಸರಾಗಿರುವ “ಛಂದ ಪುಸ್ತಕಗಳು”ಈವರೆಗೆ 60ಕ್ಕೂ ಹೆಚ್ಚು ಬಹುಮಾನಗಳನ್ನು ಪಡೆದಿವೆ. ನಮ್ಮ ನಡುವಿನ ಒಬ್ಬ ಅಪರೂಪದ ವ್ಯಕ್ತಿ, ಯುವ ಜನತೆಯ ಇಷ್ಟದ ಕತೆಗಾರ, ಸರಳ, ಹಸನ್ಮುಖಿ ಲೇಖಕ ಮತ್ತು ಪುಸ್ತಕ ಪ್ರಕಾಶಕ ವಸುಧೇಂದ್ರ ಮಾಧ್ಯಮ ಅನೇಕ Webಸಂಭಾಷಣೆ “ಬಿಚ್ಚಿಟ್ಟ ಬುತ್ತಿ”ಯ ಅತಿಥಿ.
#Vasudhendra #Writer #Publisher #LGBTActivist #Author #IndianAuthor #Maneeshe #Ugadi #Chelu #HampiExpress #Mohanaswamy #VishamaBhinnaraashi #Gay #Kothigalu #NammammaAndreNangishta #RakshakaAnnatha #Varnamaya #AiduPaiseVardakshine #HarichittaSatya #TejoTungabhadra #Mithuna #Everest #ECommerce #Mohanaswamy #KarnatakaSahityaAcademyAward #DaRaaBendreStoryAward #MastiKathaAward #URAnanthamurthyAward #BesagarahalliRamannaAward #VasudhevaBhoopalamAward #VardhamanaUdayonmukhaAward #AmmaAwardFromSadem #KatharangamAward #ChandaPustaka #ChandaPustakaBahumana #LGBT #GoodAsYou @ChandaPustaka #Sandalwood #Interview #Trending #Viral #Kannada #KFI #Kannada
Subscribe for Maadhyama Aneka Channel to get updates and notification on more entertainment and infotainment content.
/ @maadhyamaaneka
Please leave your feedback and comments.
Follow Maadhyama Aneka on :
Facebook : / maadhyama
Instagram : / maadhyama.aneka
Twitter : / maadhyamaa
Website : www.maadhyama-aneka.com
© Maadhyama Aneka Pvt. Ltd.

Пікірлер: 60
@sumaramesh8878
@sumaramesh8878 3 жыл бұрын
ತಮ್ಮ ಬದುಕಿನ ಒಳನೋಟಗಳನ್ನು ಬಹಳ ಪ್ರಾಮಾಣಿಕವಾಗಿ ಹೇಳುತ್ತಲೇ ಬರಹಗಾರರಿಗೆ ಇರಬೇಕಾದ ಬದ್ಧತೆಯ ಬಗ್ಗೆ ಅತ್ಯುತ್ತಮವಾದ ಹೊಳಹುಗಳನ್ನು ನೀಡಿದ್ದಾರೆ ವಸುಧೇಂದ್ರರವರು. ಮಾಧ್ಯಮ ಅನೇಕದ ಅನೇಕ ಅತ್ಯುತ್ತಮ ಸಂದರ್ಶನಗಳಲ್ಲಿ ಮುಂಚೂಣಿಯಲ್ಲಿ ನಿಲ್ಲುವಂತಹ ಸಂದರ್ಶನ. ಸಾವಧಾನದಿಂದ ತಮ್ಮ ಬದುಕಿನ ಹಾದಿಯನ್ನು ತಿರುಗಿ ನೋಡುತ್ತಾ ಸಾಗಿರುವ ವಸುಧೇಂದ್ರರವರ ಮಾತಿನಲ್ಲಿ ವ್ಯಥೆ ಅಥವಾ ಹಳಹಳಿಕೆಗಳು ಸ್ವಲ್ಪವೂ ಇಣುಕದೆ; ಬದುಕಿನ ಸಂಘರ್ಷದ ಹಾದಿಯಲ್ಲಿ ಗಳಿಸಿಕೊಂಡಿರುವ ಆತ್ಮವಿಶ್ವಾಸದ ಹೊಳಪು ಎದ್ದು ಕಾಣುತ್ತಿದೆ. ಸರಿತಪ್ಪುಗಳ ಸುಳಿಯಿಂದ ಬಿಡಿಸಿಕೊಂಡು ತನ್ನ ಬದುಕು ತನ್ನ ಕೈಲಿದೆ ಎಂಬುದರ ಅರಿವು ಮೂಡಿದಾಗ ಉಂಟಾಗುವ ಚಮತ್ಕಾರವನ್ನು ತಣ್ಣನೆಯ ಧ್ವನಿಯಲ್ಲೇ ಹೇಳಿರುವ ಅವರು ಅನುಭವದ ಉಣಿಸನ್ನು ಬಡಿಸಿರುವರಷ್ಟೇ! ಬುತ್ತಿಯು ಈಗ ರುಚಿ ಎನಿಸುವುದು ಖಿನ್ನತೆಯೆಂಬ ಬೆಂಕಿ ಹದವಾಗಿ ಬೇಯಿಸಿರುವುದರಿಂದಲೇ! ಇದು ಅನುಭವಿಸಿದವರಿಗೆ ಅರ್ಥವಾಗುವ ಪರಮ ಸತ್ಯ! ಅದಕ್ಕಾಗಿಯೇ ನನಗೆ ಇಷ್ಟವಾದ ಸಂದರ್ಶನ! ನಾನೇನೂ ವಸುಧೇಂದ್ರರನ್ನು, ಮಾಧ್ಯಮ ಅನೇಕವನ್ನು ಅಥವಾ ಸಂದರ್ಶಕಿ ಸ್ನೇಹಿತೆ ನಮನಳನ್ನು ಇಲ್ಲಿ ಪ್ರಮೋಟ್ ಮಾಡುತ್ತಿಲ್ಲ! ಯಾವುದೇ ಉತ್ತಮ ಪ್ರಯತ್ನಕ್ಕೆ ಮೆಚ್ಚುಗೆ ಸೂಸಿ ಬೆನ್ನುತಟ್ಟುವುದು ಮೊದಲಿನಿಂದಲೂ ನನಗೆ ಅಭ್ಯಾಸ. ಹೇಳಿಕೇಳಿ ಇಪ್ಪತ್ನಾಲ್ಕು ಗಂಟೆಗಳ ಕಾಲವೂ ನನ್ನೊಳಗಿನ ಶಿಕ್ಷಕಿ ಜಾಗೃತಳಾಗಿರುವುದೇ ಇದಕ್ಕೆ ಕಾರಣವಿರಬಹುದು! ಮುಂದೊಂದು‌ ದಿನ 'ಮಾಧ್ಯಮ ಅನೇಕ'ದ ಸಾಧಕರೊಡನಿನ ಸಂದರ್ಶನದ ಸರಣಿ ಕಾರ್ಯಕ್ರಮ ನಿಜಕ್ಕೂ ಸಾಹಿತ್ಯ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಮೈಲುಗಲ್ಲುಗಳಾಗುವುದರಲ್ಲಿ ಸಂಶಯವಿಲ್ಲ!
@kashtoncole9609
@kashtoncole9609 2 жыл бұрын
Sorry to be offtopic but does anyone know of a tool to get back into an Instagram account?? I was stupid lost my password. I would appreciate any assistance you can offer me
@zacharydeshawn5703
@zacharydeshawn5703 2 жыл бұрын
@Kashton Cole Instablaster :)
@kashtoncole9609
@kashtoncole9609 2 жыл бұрын
@Zachary Deshawn Thanks for your reply. I found the site through google and I'm in the hacking process atm. Takes quite some time so I will reply here later with my results.
@kashtoncole9609
@kashtoncole9609 2 жыл бұрын
@Zachary Deshawn it did the trick and I now got access to my account again. I'm so happy:D Thanks so much, you saved my account!
@zacharydeshawn5703
@zacharydeshawn5703 2 жыл бұрын
@Kashton Cole No problem xD
@umashreegk6976
@umashreegk6976 2 ай бұрын
Sir I have read your TejoTungabhadra",,such an amazing book,,I just loved the way you wrote it,❤❤ thank you so much sir 🎉
@user-np1qw6fi5h
@user-np1qw6fi5h 2 жыл бұрын
ವಸುದೇಂದ್ರ ಸಾರ್ ನಿಮ್ಮ ಸ್ನೇಹ ನಮಗೆ ದೊರಕಿದ್ದು ನಮ್ಮ ಅದೃಷ್ಟ ಅಂತ ಭಾವಿಸುತ್ತಾ, ಇನ್ನೂ ಹೆಚ್ಚಿನ ಮಟ್ಟದಲ್ಲಿ ಕನ್ನಡ ಸಾಹಿತ್ಯ ಲೋಕಕ್ಕೆ ನಿಮ್ಮ ಕೊಡುಗೆ ದೊರಕಲೆಂದು ಆಶಿಸುತ್ತೇನೆ. ಜೈ 🙏ತೇಜೋ ತುಂಗಭದ್ರ.🙏🍫
@nagaratnapujar3954
@nagaratnapujar3954 3 жыл бұрын
S.L.ಬೈರಪ್ಪನವರ ಸಂದರ್ಶನ ಬರಲಿ ಮಾದ್ಯಮ ಅನೇಕ ದಿಂದ
@subrahmanyabhat965
@subrahmanyabhat965 3 жыл бұрын
ಪ್ರಾಮಾಣಿಕತೆಯ ಬಗ್ಗೆ, ಪ್ರೀತಿಯ ಬಗ್ಗೆ ವಸುಧೇಂದ್ರ ಅವರು ಆಡಿರುವ ಮಾತುಗಳು ಬರೆದಿಟ್ಟುಕೊಳ್ಳುವಂತಿವೆ, ವಸುಧೇಂದ್ರರ ಮಾತುಕೇಳಿ ತೃಪ್ತಿ ಆಯಿತು, ತಂಡಕ್ಕೆ ಧನ್ಯವಾದಗಳು ಮತ್ತು ಅಭಿನಂದನೆಗಳು
@ranjanagundumane5949
@ranjanagundumane5949 2 жыл бұрын
ಒಂದು ಒಳ್ಳೆಯ ಸಂಭಾಷಣೆ.‌ ನನಗೆ ಸಂದರ್ಶಕಿಯ ಶೈಲಿ ತುಂಬಾ ಹಿಡಿಸಿತು. ಎಲ್ಲೂ ಅತಿ ಅನಿಸದ, ಕೂಗಾಟ- ಕಿರುಚಾಟ ಇಲ್ಲದ ಸಭ್ಯ ಶೈಲಿ ಚೆನ್ನಾಗಿದೆ. ಧನ್ಯವಾದಗಳು 🙏🏼
@mangalasatheesh4332
@mangalasatheesh4332 3 жыл бұрын
ಸರ್ ಬಹಳ ಚೆನ್ನಾಗಿ ಎಲ್ಲಾ ವಿಚಾರಗಳನ್ನು ಹೇಳಿದ್ದೀರಿ. ನೀವೂ ಮಾನಸಿಕ ತುಮುಲಗಳನ್ನು ಅನುಭವಿಸಿ ಕೊನೆಗೆ ನಿಮ್ಮ ವಿದ್ಯೆ, ಕೆಲಸ,ಜ್ಞಾನ,ಇವೆಲ್ಲವುಗಳಿಂದ ನೀವು ಧೈರ್ಯವಾಗಿ ಜೀವನವನ್ನು ಎದುರಿಸಿದ್ದಿರಿ ಅಲ್ವಾ? ಎಲ್ಲಕ್ಕಿಂತ ತಿಳುವಳಿಕೆ ಬಹಳ ಮುಖ್ಯ ಅನ್ನಿಸುತ್ತೆ. ಬಹಳ ಬಹಳ ಚೆನ್ನಾಗಿದೆ ನಿಮ್ಮ ಸಂಭಾಷಣೆ🙏🙏
@JustMe54328
@JustMe54328 9 ай бұрын
Stainless Steel patre galu emba gadya paata vannu nanna tamma na patya pustaka dalli odida nantara nanu nimma abhimani aade sir 😊
@srustisinchana
@srustisinchana 2 жыл бұрын
Good one. ವಸುಧೇಂದ್ರ ರವರ ಅನುಭವ ಸಂಭಾಷಣೆ ಮುದನೀಡಿತು. ಪರಿಚಯಿಸಿದ್ದಕ್ಕೆ ಧನ್ಯವಾದಗಳು.
@ravibr1392
@ravibr1392 3 жыл бұрын
ಅತ್ಯಂತ ಪರಿಣಾಮಕಾರಿಯಾಗಿ ಮೂಡಿ ಬಂದ ಸಂದರ್ಶನ...ಧನ್ಯವಾದಗಳು..ಇಡೀ ತಂಡಕ್ಕೆ
@proper_t
@proper_t 3 жыл бұрын
ಒಳ್ಳೆಯ ಲೇಖಕ ಮತ್ತು ಪ್ರಕಾಶಕ.
@drgeethasairam5018
@drgeethasairam5018 3 жыл бұрын
ನನ್ನ ನೆಚ್ಚಿನ ಲೇಖಕ 😊ಮತ್ತಷ್ಟು ಅವರ ಬಗ್ಗೆ ಅರಿತೆ ನಿಮ್ಮ ಮಾಧ್ಯಮ ಅನೇಕ ಸೌಜನ್ಯದಿಂದ 🙏interwier is also well played her role 👌
@rekhashekar2886
@rekhashekar2886 3 жыл бұрын
ವಸುದೇಂದ್ರ ಅವರ ಪ್ರಾಮಾಣಿಕ ಮಾತುಕಥೆ..ಅನುಭವ..ಕನ್ನಡದ ಪ್ರೀತಿ ಎಲ್ಲಾ ತುಂಬಾ ಇಷ್ಟ ಆಯ್ತು..Wonderful interview..Thank you..
@rashmirajrashmiraj6399
@rashmirajrashmiraj6399 6 ай бұрын
ಅದ್ಭುತವಾದ ಉಪಮೆ ತೇಜೋತುಂಗಭದ್ರಾ... ಕನ್ನಡಕ್ಕಾಗಿ ಮೀಸಲಿಟ್ಟ ನಿಮ್ಮ ಬರೆವಣಿಗೆ ಸದಾ ಅಜರಾಮರ 👍🙏
@Venkateshbpatil
@Venkateshbpatil Жыл бұрын
ತುಂಬಾ ಅರ್ಥಪೂರ್ಣವಾದ ಸಂದರ್ಶನ .ಧನ್ಯವಾದಗಳು
@jayashreek1
@jayashreek1 3 жыл бұрын
Hi Vasudendra, you are so honest and humble. I loved all your books. Especially Tejo Tungabdra. I am being engineer the logical way we look in stories is shown in the book. Really I am big fan of yours. :-):-)
@swami2088
@swami2088 3 жыл бұрын
Wonderful
@maheshkolur8433
@maheshkolur8433 Жыл бұрын
ವಸುಧೇಂದ್ರ ಕನ್ನಡದ ಪ್ರತಿಭೆ.ತೋಜೋ ತುಂಗಭದ್ರಾ ಅತ್ಯದ್ಭುತ ಕೃತಿ.
@drgeethasairam5018
@drgeethasairam5018 3 жыл бұрын
Honesty is the best principal --- always 😊
@karnikamakkannavar9214
@karnikamakkannavar9214 Жыл бұрын
Really superb Interview 👍👍
@yashwanths4957
@yashwanths4957 3 жыл бұрын
Madhyama aneka bichhitta butti one of the most amazing interview series...... Very well prepared, questions are asked, amazing guys, thank you
@chandrikag8377
@chandrikag8377 Жыл бұрын
ಬಹಳ ಚೆನ್ನಾಗಿ ಸಂದರ್ಶನ ಮಾಡಿದ್ದಾರೆ
@renukakantachitapur8077
@renukakantachitapur8077 3 жыл бұрын
Thank you so much Madhyama Aneka for Vasundhra Sir's interview. Keep going... Expecting a series with S.L.Bhyrappa sir
@gurum2364
@gurum2364 3 жыл бұрын
Very nice interview 🙂
@manjunyamathiable
@manjunyamathiable 3 жыл бұрын
One another best interview
@sadanandab5156
@sadanandab5156 2 жыл бұрын
ಸರ್ ನೀವು ನಿಜವಾಗಿಯೂ ಗ್ರೇಟ್.ಭಗವಂತ ತಮಗೆ ಸದಾ ಒಳ್ಳೆಯದನ್ನು ಮಾಡಲಿ.
@sureshatd9606
@sureshatd9606 3 жыл бұрын
😍😍💝
@htkowshik2312
@htkowshik2312 3 жыл бұрын
❤️❤️❤️
@nagabhushanmpnagabhushanmp7602
@nagabhushanmpnagabhushanmp7602 3 жыл бұрын
💕🥰💐👌
@shekargodikar9609
@shekargodikar9609 3 жыл бұрын
Ha
@shivarajug601
@shivarajug601 3 жыл бұрын
ತುಂಬ ಅಚ್ಚುಕಟ್ಟಾದ ಮಾತುಕತೆ 👍
@padmathirtha5186
@padmathirtha5186 3 жыл бұрын
Very nice interview.
@ramamoorthyb6142
@ramamoorthyb6142 3 жыл бұрын
ವಸುದೇ oದ್ರ ಕನ್ನಡ ದ ಪ್ರಾಮಾಣಿಕ ಧೈಯ ೯ ವ೦ತ ಕತೆಗಾರ
@nagabhushanmpnagabhushanmp7602
@nagabhushanmpnagabhushanmp7602 3 жыл бұрын
ಕನ್ನಡ ವಿಶ್ವವಿದ್ಯಾಲಯ ಹಂಪಿ... ಯಾವಾಗ ಬರುವುದು ಮೇಡಂ ನಮನ💕🥰
@sowmyab3082
@sowmyab3082 3 жыл бұрын
ನಿರೂಪಣೆ ಮತ್ತು ಸಂದರ್ಶನ ತುಂಬಾ ಚೆನ್ನಾಗಿದೆ. ನಗುಮುಖದ ಈ ನಿರೂಪಕಿ ಯಾರು?
@sameer.kukanur
@sameer.kukanur 3 жыл бұрын
❤️❤️
@shekargodikar9609
@shekargodikar9609 3 жыл бұрын
Nice
@maheshpulikeshi6972
@maheshpulikeshi6972 2 жыл бұрын
Beautiful Interview.. ಸಂದರ್ಶಕಿಯವರ ಹೆಸರೇನು? ಬಹಳ ಚೆಂದದ ನಿರೂಪಣೆ.
@Maskmanchess
@Maskmanchess 2 жыл бұрын
Pls try to upload it as podcasts in any of music streaming app
@mreddyydg
@mreddyydg 3 жыл бұрын
Why there r so less views to this amazing channel videos
@umaprakash8830
@umaprakash8830 3 жыл бұрын
Thumba olleya sandarshana,thejo thungabhadra thumba aasakthiyannu huttu hakuva Kadambari,sadara anthya mathra thumba cinimiyavagide.Madhama aanekakke abhinandanegalu hagu dhanyavaadagalu
@shekargodikar9609
@shekargodikar9609 3 жыл бұрын
Nine
@ashalatha9336
@ashalatha9336 2 жыл бұрын
Depression ಬಗ್ಗೆ ಎಷ್ಟು ಒಳ್ಳೆ ಮಾತುಗಳನ್ನು ಹೇಳಿದ್ದೀರಿ ಸರ್. 🙏 ಖಿನ್ನತೆ ಯ ಬಗ್ಗೆ ತುಂಬಾ ವಿಷಯಗಳನ್ನು ತಿಳಿಸಿರುವುದರಿಂದ ಎಷ್ಟೊಂದು ಜನರಿಗೆ ಅನುಕೂಲವಾಗುತ್ತದೆ.
@kiranmkiranm1308
@kiranmkiranm1308 2 жыл бұрын
ಎಷ್ಟು ಮುಗ್ದವಾದ ನಗು 😍
@rohinisubbarao3664
@rohinisubbarao3664 3 жыл бұрын
ಸಿಧ್ಧ ಪ್ರಶ್ನೆ ಗಳನ್ನು ಕಲಿತು ಕೇಳಿದಂತಿದೆ,
@sharadhaguru2533
@sharadhaguru2533 2 жыл бұрын
ವಸುಧೇಂದ್ರ ಅವರ ಫೋನ್ ನಂಬರ್ ಕೊಡಿ ಸರ್
@umamahadevappa344
@umamahadevappa344 2 жыл бұрын
Sir neevu Mithuna anuvadadalli kelavu telugu padagalannu hageye barediddira ex , 'raka' andre reeti heege innu ive kannada padagalu idru saha
@nalinirao3121
@nalinirao3121 Жыл бұрын
ವಸುಧೇಂದ್ರ, ನಿಮ್ಮ ಕಥೆಗಳು, ಬರಹಗಳು ಉತ್ತಮ ವಾಗಿರುತ್ತದೆ.ಹಾಗೆ ನಿಮ್ಮ ಸಂದರ್ಶನ ಕೂಡ ನೇರ,ಸ್ಪಷ್ಟ, ಪ್ರಾಮಾಣಿಕವಾಗಿ ಮೂಡಿ ಬಂದಿದೆ. ನಿಮ್ಮ.ಜೀವನದ ವಿವಿಧ ಘಟ್ಟಗಳಲ್ಲಿ ಎದುರಿಸಿದ ಸಮಸ್ಯೆ, ತುಮುಲಗಳನ್ನು ಪ್ರಾಮಾಣಿಕವಾಗಿ ತಿಳಿಸಿ ಅದರಿಂದ ನೀವು ಪಾರಾಗಿ ಬಂದದನ್ನು ಹೇಳಿರುವ ರೀತಿ ಇತರರಿಗೆ ...... ಈರೀತಿಯ ಸಮಸ್ಯೆಯನ್ನು ಅನುಭವಿಸುತ್ತಿರುವ ಯುವ ಜನಾಂಗಕ್ಕೆ ಧೈರ್ಯ ಕೊಡುವಂತಿದೆ..... ಅವರು ಸಮಾಜಕ್ಕೆ ಕಂಟಕ ರಾಗಬಾರದು. ನಿಮ್ಮ ಪ್ರಯತ್ನ ವಿದ್ದರೂ ನಿಮ್ಮ ಬದಲಾವಣೆಗೆ ನಿಮ್ಮ ಸಂಸ್ಕಾರ, ವಿದ್ಯೆ, inner strength ಕೂಡಾ ಬಹಳ ಮುಖ್ಯ. ಸಂದರ್ಶಕಿಯವಾರ ಪ್ರಶ್ನೆಗಳು ಉತ್ತಮ ವಾಗಿತ್ತು.ನಿಮ್ಮ ಪ್ರಯತ್ನಗಳೆಲ್ಲ ಸಫಲ ವಾಗಲಿ .ಶುಭ ಹಾರೈಸುತ್ತೇನೆ. ಮುಂಬೈ ಗೆ ಬರುವ ಸಾಧ್ಯತೆ ಇದೆಯಾ? ನಾನು ಹೊರನಾಡ ಕನ್ನಡತಿ...ಒಮ್ಮೆಯಾದರೂ bhetimaaduva ಇಚ್ಛೆ ....sir
@manjunathprasadcv3332
@manjunathprasadcv3332 Жыл бұрын
Although I appreciate his boldness to come out as a gay kannada writer but he reeks of caste privilege by saying he didn't see any religion and caste conflict bcoz his father had a Muslim friend lmfao that's like a classic example of white racist man saying that ' I'm not racist . because I have a black friends
Получилось у Миланы?😂
00:13
ХАБИБ
Рет қаралды 4,6 МЛН
What it feels like cleaning up after a toddler.
00:40
Daniel LaBelle
Рет қаралды 86 МЛН
БАБУШКИН КОМПОТ В СОЛО
00:23
⚡️КАН АНДРЕЙ⚡️
Рет қаралды 17 МЛН
Chandrasekhar Kambar | Web Interview | ಬಿಚ್ಚಿಟ್ಟ ಬುತ್ತಿ | Web Sambhashane | bichchitta butthi
1:18:49
Pinni - Short Film | Bhuvan Sathya | Rishab Shetty Films | Santhosh T Ninasam
20:15
Writer Dr. H S Anupama in Shubhodaya Karnataka | 24- 01-2020 | DD Chandana
55:59
ದೂರದರ್ಶನ ಚಂದನ - Doordarshan Chandana
Рет қаралды 22 М.
спидран по ютуб шортс 86 | Ушные свечи
0:35
小蚂蚁那么小气干嘛!#火影忍者 #佐助 #家庭
0:26
火影忍者一家
Рет қаралды 10 МЛН
All creatures are from God #jesus #jesuschrist #jesuslovesyou
0:19
Jesus By Your Side
Рет қаралды 47 МЛН
ПИЩЕВОЙ ВАНДАЛ НАКАЗАН
0:20
МАКАРОН
Рет қаралды 2,8 МЛН