Рет қаралды 650
ಸತ್ಯವೇದದ ಮೂಲಕ, ಮನುಕುಲವು ನಮ್ಮ ಆತ್ಮಗಳ ತಂದೆ ಮತ್ತು ತಾಯಿಯನ್ನು ತಿಳಿದುಕೊಳ್ಳಬೇಕು
ಪ್ರತಿಯೊಬ್ಬರಿಗೂ ದೈಹಿಕವಾಗಿ ಜನ್ಮ ನೀಡಿದ ತಂದೆ ಮತ್ತು ತಾಯಿ ಇದ್ದಂತೆ, ದೇವದೂತರ ಲೋಕದಲ್ಲಿ ನಮಗೆ ನಿತ್ಯಜೀವವನ್ನು ನೀಡುವ ಆತ್ಮಿಕ ತಂದೆ ಮತ್ತು ಆತ್ಮಿಕ ತಾಯಿ ಇದ್ದಾರೆ.
ಇದನ್ನು ನಂಬುತ್ತಾ, ನಾವು ದೇವರ ಮಕ್ಕಳಾಗಲು ಇರುವ ಏಕೈಕ ಮಾರ್ಗವಾದ ಹೊಸ ಒಡಂಬಡಿಕೆಯ ಪಸ್ಕ ಹಬ್ಬವನ್ನು ಆಚರಿಸಬೇಕು.
ದೇವರ ಮಕ್ಕಳು ತಿಳಿದಿರಬೇಕಾದ ಪವಿತ್ರಾತ್ಮನ ಕಾಲದ ದೇವರ ಹೆಸರು
ಪರಲೋಕರಾಜ್ಯದಲ್ಲಿ ಯುಗಯುಗಾಂತರಗಳವರೆಗೂ ಆಳುವ ದೇವರ ಮಕ್ಕಳು ದೇವರ ಹೆಸರನ್ನು ತಿಳಿದಿರಬೇಕು.
ದೇವಜನರು ಯೇಸು ಎಂಬ ಹೆಸರನ್ನು ಸ್ವೀಕರಿಸಿ ಮಗನ ಕಾಲದಲ್ಲಿ ರಕ್ಷಿಸಲ್ಪಟ್ಟಂತೆಯೇ, ಚರ್ಚ್ ಆಫ್ ಗಾಡ್’ನ ಸದಸ್ಯರು ಪವಿತ್ರಾತ್ಮನ ಕಾಲದಲ್ಲಿ ಕ್ರಿಸ್ತ ಅನ್ ಸಂಗ್ ಹೊಂಗ್ ರವರು ಮತ್ತು ತಾಯಿ ದೇವರನ್ನು ಸ್ವೀಕರಿಸಿ, ಇಡೀ ಲೋಕಕ್ಕೆ ದೇವರ ಹೆಸರನ್ನು ಬೋಧಿಸಿ ಆತ್ಮರಕ್ಷಣೆಯ ಸುದ್ದಿಯನ್ನು ತಿಳಿಸುವರು .
ಇಬ್ರಿಯರಿಗೆ 12:8-9
ತಂದೆಯಿಂದ ಶಿಕ್ಷೆಹೊಂದದ ಮಗನೆಲ್ಲಿ? ಮಕ್ಕಳೆಲ್ಲರೂ ಹೊಂದುವ ಶಿಕ್ಷೆಯು ನಿಮಗುಂಟಾಗದಿದ್ದರೆ ನೀವು ಹಾದರದಿಂದ ಹುಟ್ಟಿದವರೇ ಹೊರತು ಪುತ್ರರಲ್ಲ.
ಇದು ಮಾತ್ರವಲ್ಲದೆ ನಮ್ಮನ್ನು ಶಿಕ್ಷಿಸಿದಂಥ ಶರೀರ ಸಂಬಂಧವಾದ ತಂದೆಗಳನ್ನು ಸನ್ಮಾನಿಸಿದೆವಷ್ಟೆ; ನಮ್ಮ ಆತ್ಮಗಳಿಗೆ ತಂದೆಯಾಗಿರುವಾತನಿಗೆ ನಾವು ಇನ್ನೂ ಹೆಚ್ಚಾಗಿ ಒಳಪಟ್ಟು ಜೀವಿಸಬೇಕಲ್ಲವೇ.
ಕೀರ್ತನೆಗಳು 20:7
ಕೆಲವರು ರಥಬಲದಲ್ಲಿ, ಕೆಲವರು ಅಶ್ವ ಬಲದಲ್ಲಿ ಹೆಚ್ಚಳಪಡುತ್ತಾರೆ; ನಾವಾದರೋ ನಮ್ಮ ದೇವರಾದ ಯೆಹೋವನಲ್ಲಿಯೇ.
[ಈ ವೀಡಿಯೊ ವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್’ನಿಂದ ಹಕ್ಕುಸ್ವಾಮ್ಯಗೊಂಡಿದೆ. ಅನಧಿಕೃತ ನಕಲು ಮತ್ತು ವಿತರಣೆ ನಿಷೇಧಿಸಲಾಗಿದೆ.]
〖World Mission Society Church of God〗watv.org
〖India〗 indiawmscog.org
〖WATV Media Cast〗 watvmedia.org/kn
〖Church of God Introduction〗introwmscog.com