Рет қаралды 6,121,451
Belli bettavanalone (ಬೆಳ್ಳಿ ಬೆಟ್ಟವನಾಳೋನೆ) | Kannada Song | Mangli Shiva song | Varadaraj Chikkaballapura | Baji | Damu Reddy
#Bellibettavanalone #mangli #manglisong #manglikannadasongs #manglisongs
Director - Damu Reddy
Singer - Mangli
Lyrics- Varadaraj Chikkaballapura
Music - Mangli
Editing- Uday kumbham
Dop - Tirupathi
Thumbnail- Sagar
DI - Sanjeev
॥ ಪಲ್ಲವಿ ॥
ಬೆಳ್ಳಿ ಬೆಟ್ಟವನಾಳೋನೆ.. ಅಡ್ಡ ಬೊಟ್ಟು ಶಂಕರನೇ.
ಕೈಲಿ ಜೋಳಿಗೆಯ ಹಿಡಿಯುತ..
ಜಗವ ಕಾಯೋ ಜಂಗಮನೇ ।।
ಕಂಠದಿ ಗರಳವನಿಟ್ಟೋನೆ.. ಕಣ್ಣ ನೋಟದಿ
ಲೋಕವ ನಡೆಸೋನೆ..
ಆದಿ ಅಂತ್ಯಗಳು ಇಲ್ಲದೋನೆ..
ಅಂಡಪಿಂಡ ಬ್ರಹ್ಮಾಂಡವು ನೀನೇ ಶಿವನೇ..
ನಾಗಾಭರಣನೇ... ನಂದಿ ವಾಹನನೇ..
ಕೇದಾರನಾಥನೇ.. ಕಾಶಿವಿಶ್ವೇಶ್ವರನೇ..!!
ಶ್ರೀ ಕಾಳೇಶ್ವರಾ.. ಓಂಕಾರೇಶ್ವರಾ..
ಭೀಮಾಶಂಕರ.. ಮಹಾ ರಾಜರಾಜೇಶ್ವರ...
ಬೆಳ್ಳಿ ಬೆಟ್ಟವನಾಳೋನೆ.. ಅಡ್ಡ ಬೊಟ್ಟು ಶಂಕರನೇ.
ಕೈಲಿ ಜೋಳಿಗೆಯ ಹಿಡಿಯುತ..
ಜಗವ ಕಾಯೋ ಜಂಗಮನೇ ।।
ಕಂಠದಿ ಗರಳವನಿಟ್ಟೋನೆ.. ಕಣ್ಣ ನೋಟದಿ
ಲೋಕವ ನಡೆಸೋನೆ..
ಆದಿ ಅಂತ್ಯಗಳು ಇಲ್ಲದೋನೆ..
ಅಂಡಪಿಂಡ ಬ್ರಹ್ಮಾಂಡವು ನೀನೇ ಶಿವನೇ..
॥ ಚರಣ 01 ॥
ಹಣ್ಣು ಕಾಯ ತನ್ನಿರೆ.. ಪಾಯಸವ ಮಾಡಿರೆ
ಅಕ್ಕಿ ಬೆಲ್ಲ ಬೆರೆಸಿ ಪ್ರಸಾದವ ಹಂಚಿರೆ..
ಪ್ರಸಾದವ ಹಂಚಿರೆ..
ತುಪ್ಪದ ದೀಪಗಳ ತಪ್ಪದೆ ಬೆಳಗಿರೆ..
ಶಿವ ಪಂಚಾಕ್ಷರಿ ಮಂತ್ರವನು ಪಠಿಸಿರೆ
ಮಂತ್ರವನು ಪಠಿಸಿರೆ..
ರೂಪಾಯಿ ಮುಡಿಪೊಂದ.. ಹರಕೆಯ ಗುಡಿಕೊಂದ
ಕಟ್ಟಿದರೆ ಸಾಕು ನೀ ಬಂಧುವೆ..
ಮಡಿಯುಟ್ಟು ಗುಡಿ ಸುತ್ತ.. ಶಿವನಾಮ ಜಪಿಸುತ್ತ
ಕೈಗಳ ಮುಗಿದರೆ ದಿಕ್ಕೆ ನೀನಲ್ಲವೆ..
ಮಲೆಯ ಮಾದಪ್ಪ.. ಶ್ರೀ ಶೈಲ ಮಲ್ಲಪ್ಪ
ಏನೆಂದು ಕರೆದರೂ ಓಗೊಡುವೆ ನಮ್ಮಪ್ಪ..
ಓಗೊಡುವೆ ನಮ್ಮಪ್ಪ..
ಕೋರಲು ಮಕ್ಕಳ ಕೊಟ್ಟು.. ಕೇಳಲು ಸಿರಿಯ ಕೊಟ್ಟು
ವಿಧ ವಿಧ ಪೂಜೆ ಪಡೆವ ನಮ್ಮ ಮನೆಯ ದೇವರಪ್ಪಾ..
॥ ಚರಣ 02 ॥
ನಿನ್ನಾಜ್ಞೆ ಇಲ್ಲದೇ.. ಹುಲ್ಲು ಕೂಡ ಕದಲದೆ..
ನರರಿಗೆ ನಿನ್ನಯ ಲೀಲೆಗಳೆ ನಿಲುಕದೆ..
ಲೀಲೆಗಳೆ ನಿಲುಕದೆ..
ಮುಡಿಯಲಿ ಗಂಗವ್ವ.. ಪಕ್ಕದಲಿ ಪಾರ್ವತವ್ವ
ಇಬ್ಬರು ಸತಿಯರ ಪತಿ ಮುದ್ದಿನ ಮುಕ್ಕಣ್ಣನೆ..
ಮುದ್ದಿನ ಮುಕ್ಕಣ್ಣನೆ..
ಒಪ್ಪೊತ್ತು ವ್ರತಗಳು.. ನೈವೇದ್ಯ ಫಲಗಳು
ಮನಸಾರೆ ನಿನ ಮುಂದೆ ತಂದಿಟ್ಟೆವು..
ಕೈಲಾಸವಾಸನೆ ಕರುಣಾ ಸಮುದ್ರನೆ..
ಕರುಣೆಯ ತೋರುತ್ತ ಹರಸು ಎಂದೆವು..
ತ್ರೈಲೋಕ್ಯ ಪೂಜ್ಯನೆ... ತ್ರಿಶೂಲಧಾರನೆ..
ಪಂಚಭೂತಗಳ ಅಧಿಪತಿಯು ನೀತಾನೆ..
ಅಧಿಪತಿಯು ನೀತಾನೆ..
ಶರಣೆಂದವರಿಗೆ ವರಗಳ ಕೊಡುವವನೇ
ಅಭಿಷೇಕ ಪ್ರಿಯನೆ.. ಅದ್ವೈತ ಭಾಸ್ಕರನೆ
ಅದ್ವೈತ ಭಾಸ್ಕರನೆ..
ದೇವಾನುದೇವರು ಮೆಚ್ಚಿದೋನೆ..
ಪತ್ರೆ ಪುಷ್ಪದ ಪೂಜೆಯ ಪಡೆಯೋನೆ..
ಅನಂತ ಜೀವರಾಶಿ ಕಾರಕನೆ..
ನೀನು ಆತ್ಮಲಿಂಗವೆ ಮಾದಪ್ಪನೆ..
ಕೋಟಿ ಲಿಂಗದ ದರುಶನ ಕರುಣಿಸೋನೆ
ಭೋಗ ನಂದೀಶ್ವರನಾಗಿ ಬಂದೋನೆ
ನಟರಾಜ ನಾಟ್ಯವನಾಡೋನೆ
ನಾಗರಾಜನ ಕೊರಳಲ್ಲಿ ಸುತ್ತಿದೋನೆ..
ನಾಗಾಭರಣನೇ... ನಂದಿ ವಾಹನನೇ..
ಕೇದಾರನಾಥನೇ.. ಕಾಶಿವಿಶ್ವೇಶ್ವರನೇ..!!
ಶ್ರೀ ಕಾಳೇಶ್ವರಾ.. ಓಂಕಾರೇಶ್ವರಾ..
ಭೀಮಾಶಂಕರ.. ಮಹಾ ರಾಜರಾಜೇಶ್ವರ... ॥