ಎತ್ತೆತ್ತ ನೋಡಿದಡೆ ಬಸವನೆಂಬ ಬಳ್ಳಿ-ಮ. ಮಾಚಿದೇವರು-ಲಿಂಗಜಂಗಮದ ಪೂರ್ವಾಶ್ರಯವ ಕಳೆದು ಮಹಾಗುರುವಾದ ಬಸವಣ್ಣ-ಚನ್ನಬಸವಣ್ಣ

  Рет қаралды 456

ಅನುಭವ ಮಂಟಪ ।ಬಸವ ಧರ್ಮ।

ಅನುಭವ ಮಂಟಪ ।ಬಸವ ಧರ್ಮ।

Жыл бұрын

ದಿನಾಂಕ 09/07/2023 ಭಾನುವಾರ ಬಸವ ಧ್ಯಾನ ಮಂಟಪ ಮೇಡಹಳ್ಳಿ ಕೇಂದ್ರದಲ್ಲಿ ಈ ಕೆಳಗಿನಂತೆ ಕಾರ್ಯಕ್ರಮ ನಡೆಯಲಿದೆ. ಬೆಳಗ್ಗೆ 11:00 ಗಂಟೆಯಿಂದ 11:30 ಗಂಟೆಯವರೆಗೆ ಪ್ರಾರ್ಥನೆ, ಪ್ರಾರ್ಥನೆಯನ್ನು ಭಕ್ತಾದಿಗಳಾದ ಸುಮಿತ್ರಾ ಬೀಳಗಿ ಮತ್ತು ಅಪ್ಪಣ್ಣ ಬೀಳಗಿ ದಂಪತಿಗಳು ನೆಡೆಸಿ ಕೊಡಲಿದ್ದಾರೆ* 11:30 ಗಂಟೆಯಂದ 12:45 ಗಂಟೆಯವರೆಗೆ ಶರಣರು ಕಂಡಂತೆ ಬಸವಣ್ಣನವರು ಎಂಬ ವಿಷಯದ ಬಗ್ಗೆ ಶರಣರಾದ ಶಿವಶರಣಪ್ಪ ಮದ್ದೂರು ಬೆಂಗಳೂರು ಇವರು ತಮ್ಮ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ. 12:45 ಗಂಟೆಯಿಂದ 1:00 ಗಂಟೆಯವರೆಗೆ ಮಹಾ ಮಂಗಳ ನಂತರ ಪ್ರಸಾದ. ಪ್ರಸಾದವನ್ನು ಬಸವ ಧ್ಯಾನ ಮಂಟಪದ ಟಷ್ಠನ ಸದಸ್ಯರು ಉಣಬಡಿಸುವರು ಎಲ್ಲಾ ಬಸವ ಬಂಧುಗಳು ಸ್ಟ ಇಚ್ಚೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಮಹಾ ಮಾನವತಾವಾದಿ,ಮಂತ್ರ🙏 ಪುರುಷ, ಕ್ರಾಂತಿಯೋಗಿ ವಿಶ್ಟ ಗುರು ಬಸವಣ್ಣನವರ ಕೃಪೆಗೆ ಪಾತ್ರರಾಗ ಬೇಕೆಂದು ಭಕ್ತಿಪೂರ್ವಕವಾಗಿ ಬೇಡಿ ಕೊಳ್ಳುತ್ತೇವೆ ಶರಣು ಶರಣಾರ್ಥಿ 🙏🙏🙏*
ಮಡಿವಾಳ ಮಾಚಿದೇವರು:
ಎತ್ತೆತ್ತ ನೋಡಿದಡೆ ಅತ್ತತ್ತ ಬಸವನೆಂಬ ಬಳ್ಳಿ.
ಎತ್ತಿ ನೋಡಿದಡೆ ಲಿಂಗವೆಂಬ ಗೊಂಚಲು.
ಒತ್ತಿ ಹಿಂಡಿದಡೆ ಭಕ್ತಿಯೆಂಬ ರಸವಯ್ಯಾ.
ಆಯತ ಬಸವಣ್ಣನಿಂದ, ಸ್ವಾಯತ ಬಸವಣ್ಣನಿಂದ. ಸನ್ನಹಿತವು ಬಸವಣ್ಣನಿಂದ,
ಗುರು ಬಸವಣ್ಣನಿಂದ, ಲಿಂಗ ಬಸವಣ್ಣನಿಂದ. ಜಂಗಮ ಬಸವಣ್ಣನಿಂದ.
ಪಾದೋದಕ ಬಸವಣ್ಣನಿಂದ, ಪ್ರಸಾದ ಬಸವಣ್ಣನಿಂದ.
ಅತ್ತ ಬಲ್ಲಡೆ ನೀವು ಕೇಳಿರೆ, ಇತ್ತ ಬಲ್ಲಡೆ ನೀವು ಕೇಳಿರೆ.
ಬಸವಾ ಬಸವಾ ಬಸವಾ ಎಂದು ಮಜ್ಜನಕ್ಕೆರೆಯದವನ ಭಕ್ತಿ,
ಶೂನ್ಯ ಕಾಣಾ, ಕಲಿದೇವರದೇವಾ.
ಸಮಗ್ರ ವಚನ ಸಂಪುಟ: 8 ವಚನದ ಸಂಖ್ಯೆ: 526
ಪ್ರಾಣಲಿಂಗದ ಪೂರ್ವಾಶ್ರಯವ ಕಳೆಯಲೆಂದು ಲಿಂಗಪ್ರಾಣಿಯಾದ,
ಲಾಂಛನದ ಪೂರ್ವಾಶ್ರಯವ ಕಳೆಯಲೆಂದು ಜಂಗಮಪ್ರೇಮಿಯಾದ,
ಪ್ರಸಾದದ ಪೂರ್ವಾಶ್ರಯವ ಕಳೆಯಲೆಂದು ಪ್ರಸಾದಿಯಾದ,
ಇಂತೀ ತ್ರಿವಿಧದ ಪೂರ್ವಾಶ್ರಯವ ಕಳೆಯಲೆಂದು ಮಹಾಗುರುವಾಗಿ
ಕೂಡಲಚೆನ್ನಸಂಗಯ್ಯನಲ್ಲಿ ಬಸವಣ್ಣನಾದ.
ಸಮಗ್ರ ವಚನ ಸಂಪುಟ: 3 ವಚನದ ಸಂಖ್ಯೆ: 7
ಲಿಂಗದ ಪೂರ್ವಾಶ್ರಯವ ಕಳೆದು,
ಇದು ಪ್ರಾಣಲಿಂಗವೆಂದು ತೋರಬಂದನಯ್ಯಾ ಬಸವಣ್ಣನು!
ಲಾಂಛನದ ಪೂರ್ವಾಶ್ರಯವ ಕಳೆದು,
ಇದು ಲಿಂಗಜಂಗಮವೆಂದು ತೋರಬಂದನಯ್ಯಾ ಬಸವಣ್ಣನು!
ಪ್ರಸಾದದ ಪೂರ್ವಾಶ್ರಯವ ಕಳೆದು,
ಇದು, ಪ್ರಸಾದವೆಂದು ಸಯವ ಮಾಡಿ ತೋರಬಂದನಯ್ಯಾ ಬಸವಣ್ಣನು!
ಇಂತು ಲಿಂಗ ಜಂಗಮದ ಪ್ರಸಾದದ ಪೂರ್ವಾಶ್ರಯವ ಕಳೆಯಲೆಂದು
ಮತ್ರ್ಯಕ್ಕೆ ಜನಿಸಿದನಯ್ಯಾ ಕೂಡಲಚೆನ್ನಸಂಗನಲ್ಲಿ
ಬಸವಣ್ಣನು.
ಸಮಗ್ರ ವಚನ ಸಂಪುಟ: 3 ವಚನದ ಸಂಖ್ಯೆ: 8

Пікірлер
НЫСАНА КОНЦЕРТ 2024
2:26:34
Нысана театры
Рет қаралды 1,3 МЛН
50 YouTubers Fight For $1,000,000
41:27
MrBeast
Рет қаралды 208 МЛН
Mass Prayer at Sharanamela
12:30
ಅನುಭವ ಮಂಟಪ ।ಬಸವ ಧರ್ಮ।
Рет қаралды 78 М.
He Sharana Bandhugale(Lingayata Dharma dhwaja) Part-1
5:14
ಅನುಭವ ಮಂಟಪ ।ಬಸವ ಧರ್ಮ।
Рет қаралды 6 М.
Basava Jayanti 2024 at Sir M Vishveshwaraiah BDA Layout, Bengaluru-at 1171, Basava Prasada Residence
1:26:17
ಅನುಭವ ಮಂಟಪ ।ಬಸವ ಧರ್ಮ।
Рет қаралды 289
Poojya Mataji Prasthavika pravachana
28:38
ಅನುಭವ ಮಂಟಪ ।ಬಸವ ಧರ್ಮ।
Рет қаралды 11 М.
15th Jan 2024- ಬಸವಯೋಗಿ ಸಿದ್ಧರಾಮೇಶ್ವರ ಜಯಂತಿ-Basavayogi Siddharameshwara Jayanti
5:45
НЫСАНА КОНЦЕРТ 2024
2:26:34
Нысана театры
Рет қаралды 1,3 МЛН