ಆಲಕುಂಟೇರ ಸತ್ಯಪ್ಪನವರ ಪೂರ್ವಜರು ಬಿಜಾಪೂರ ನಗರ ನಿರ್ಮಾತೃ ರಂಗವಳ್ಳಿಯವರು ( ರಂಗಮಹಲ್). ತಾಳಿಕೋಟೆ ಯುದ್ಧದ ನಂತರ ಇವರ ಕುಟುಂಬಗಳು ಬಿಜಾಪೂರ ತೊರೆದು ಒಂದು ಶಾಖೆಯು ಜಮಖಂಡಿಯಿಂದ ಗೋಕಾಕನ ಶೇಂದಿ ಕುರಿಬೆಟ್ಟದಲ್ಲಿ ನೆಲೆಸಿ ಮತ್ತುಳಿದವರು ಬೆಳಗಾಂವ ಕೊಲ್ಲಾಪುರ ಮೂಲಕ ಪೂನಾ ಮುಂಬೈಗೆ ಹೋಗಿದ್ದಾರೆ. ಕೆಲವರು ಹುಬ್ಬಳ್ಳಿ ಮೈಸೂರು ಬೆಂಗಳೂರಿನಲ್ಲಿದ್ದಾರೆ. ಈ ಕುಟುಂಬದ ಮೂಲ ವೃತ್ತಿ ಸಿವಿಲ್ ಕಾಮಗಾರಿಗಳಾದ ರಸ್ತೆ, ಕೆರೆ ಕಟ್ಟೆ, ನಿವೇಶನ ಅಭಿವೃದ್ಧಿ, ಗೃಹ ಮತ್ತು ಸರ್ಕಾರಿ ಕಟ್ಟಡ ನಿರ್ಮಾಣ (ಬಿಲ್ಡರ್ ಕಾಂಟ್ರಾಕ್ಟರ್ಸ್) ಈಗಲೂ ಈ ಆಲಕುಂಟೆ ಕುಟುಂಬದವರು ಸೋಲಾಪುರ ಪೂನಾಗಳಲ್ಲೂ ಇದ್ದು ಮುಂಚೂಣಿಯ ಲೋಕೋಪಯೋಗಿ ಗುತ್ತಿಗೆದಾರರೇ ಆಗಿದ್ದರು. ಈ ಪೈಕಿ ಸತ್ಯಪ್ಪನವರು ಅಬಕಾರಿ ಗುತ್ತಿಗೆಯತ್ತ ಗಮನ ಹರಿಸಿ ಅಪಾರವಾದ ಹಣವನ್ನು ಶೇಂದಿ ಮಾರಾಟದಿಂದ ಗಳಿಸಿದರು. ಹಾಗೆಯೆ ಮುಂಬೈ , ಬೆಳಗಾವಿಯ ನಗರ ಜನ ಸಂಪರ್ಕದಿಂದಾಗಿ ಮುಂಬೈ ಕರ್ನಾಟಕದಲ್ಲಿ ಪ್ರಥಮಬಾರಿಗೆ ಶ್ರೀ ಸಿದ್ಧರಾಮೇಶ್ವರ ಮೊಟರ್ ಟ್ರಾನ್ಸ್‌ಪೋರ್ಟ ಹೆಸರಿನಲ್ಲಿ ಸಾರ್ವಜನಿಕ ಸಾರಿಗೆಯನ್ನು ಆರಂಭಿಸಿ ಯಶಕಂಡರು. ಇವರ ಪೂರ್ವಜರು ಬಾಂಧವರು ಗೋಕಾಕ್ ಮಿಲ್ ಸೇರಿದಂತೆ ಬೆಳಗಾವಿಯ ಜಿಲ್ಲಾಧಿಕಾರಿ ಕಚೇರಿ ಸೇರಿ ಹಲವಾರು ಕಟ್ಟಡಗಳನ್ನು ನಿರ್ಮಿಸಿದ್ದಾರೆ. ಆಗ ಕೇವಲ ವಡ್ಡರ ಭೋವಿ ಸಮಾಜದವರು ಮಾತ್ರ ಕಟ್ಟಡ ಕೋಟೆಗಳ ನಿರ್ಮಾಣ ಗ್ರಾನೈಟ್ ಕ್ವಾರಿ ಖಡಿ ಮೈನಿಂಗ್ ಮಾಡುತ್ತಿದ್ದರು. ಮತ್ತು ನಿರ್ಮಾಣ ಕಾಮಗಾರಿಗಳಲ್ಲಿ ಏಕಸ್ವಾಮ್ಯ ಹೊಂದಿತ್ತು. ಮುಂಬೈ ಪ್ರಾಂತ್ಯದಲ್ಲಿ ಈಡಿಗ ಸಮಾಜವು ಇರಲಿಲ್ಲವಾಗಿ ಈಡಿಗರ ವೃತ್ತಿಯನ್ನು ಬಂಜಾರ ಮತ್ತು ಬೇಡರ ಸಮುದಾಯದೊಡಗೂಡಿ ಶೇಂದಿ ವಹಿವಾಟು ನಡೆಸುತ್ತಿದ್ದರು. ಆದ್ದರಿಂದ ಬ್ರಿಟಿಷ ಪೂರ್ವದಲ್ಲಿ ಈ ಸಮಾಜವು ಬಹಳಷ್ಟು ಸಿರಿವಂತಿಕೆಯಲ್ಲಿದ್ದರು. ಹಾಗಾಗಿಯೇ ಸತ್ಯಪ್ಪನವರು ಮುಂಬೈ ಕರ್ನಾಟಕದಲ್ಲಿ ಬಹುದೊಡ್ಡ ಉದ್ಯಮಿಗಳಾಗಿ ವಿಜೃಂಭಿಸಿದ್ದರು. ಸ್ವಾತಂತ್ರ್ಯ ಬಂದ ನಂತರದ ಆಡಳಿತಕ್ಕೆ ಸತ್ಯಪ್ಪನವರು ಹೊಂದಿಕೊಳ್ಳಲಿಲ್ಲ. ವಿದ್ಯಾವಂತರಲ್ಲದ ಕಾರಣ ಸ್ವಾತಂತ್ರ್ಯ ನಂತರದಲ್ಲಿ ತಮ್ಮ ಗುಮಾಸ್ತ ಕುಲಕರ್ಣಿಗಳಿಂದ ಮೋಸ ಹೋಗಿ ಸರಿಯಾಗಿ ಲೆಕ್ಕಪತ್ರಗಳು ನೀಡದ ಶಂಕೆಯಿಂದ ಆದಾಯ ತೆರಿಗೆ ಧಾಳಿಗಳಿಂದ ಇಡೀ ಕುಟುಂಬವು ಕುಸಿದು ಹೋಯಿತೆಂದು ನಮ್ಮ ತಂದೆಯವರು ಹೇಳುತ್ತಿದ್ದರು. ಇವರ ಪಾಲಿನ ಬಹುತೇಕ ಕಾಂಟ್ರಾಕ್ಟ್ ಗಳು ಅಬಕಾರಿ ಗುತ್ತಿಗೆಗಳನ್ನು ಆದಾಯ ತೆರಿಗೆ ಪಾವತಿಸಲಾಗದೆ ತಮ್ಮಲ್ಲಿ ಕೆಲಸ ಮಾಡುತ್ತಿದ್ದವರಿಗೆ ಬಿಟ್ಟುಕೊಟ್ಟರಂತೆ. ಆ ಪೈಕಿ ಜಾರಕಿಹೊಳಿ ಮಾಸ್ತರ ಕುಟುಂಬವೂ ಒಂದು. ಸತ್ಯಪ್ಪನವರ ಅಬಕಾರಿ ವಾಹನಗಳಿಗೆ ರಕ್ಷಣೆ ನೀಡುತ್ತಿದ್ದ ಮಾಸ್ತರ ಜಾರಕಿಹೊಳಿಯವರು ಅಬಕಾರಿ ಗುತ್ತಿಗೆ ಹಿಡಿದು ಬಹಳ ವೇಗವಾಗಿ ಪ್ರವರ್ಧಮಾನಕ್ಕೆ ಬಂದರಂತೆ. ಅಜ್ಜನ ವ್ಯವಹಾರದ ಜಂಜಾಟಗಳೇ ಬೇಡವೆಂದು ಒಂದೊಂದೇ ಆಸ್ತಿಗಳನ್ನು ವಾರಸುದಾರರು ವಿಲೇ ಮಾಡಿದರೆಂದು ತಿಳಿಯುತ್ತದೆ. ಒಂದು ಕಾಲದಲ್ಲಿ ಬ್ರಿಟಿಷರ ಸರ್ಕಾರದಲ್ಲಿ ಮುಂಬೈ ಪ್ರಾಂತ್ಯದಲ್ಲಿ ಅತಿ ಹೆಚ್ಚು ತೆರಿಗೆ ಮತ್ತು ಆದಾಯ ತೆರಿಗೆಯನ್ನು ಪ್ರಾಮಾಣಿಕವಾಗಿ ಕಟ್ಟುತ್ತಿದ್ದರೆಂದು ಬ್ರಿಟಿಷ್ ಸರ್ಕಾರ ಸತ್ಯಪ್ಪನವರಿಗೆ ರಾವ್ ಬಹದ್ದೂರ್ ಬಿರುದನ್ನು ನೀಡಿತ್ತು. ಅಂತಹ ಸತ್ಯಪ್ಪನವರನ್ನು ತೆರಿಗೆ ವಂಚಕನೆಂದು ಬಿಂಬಿಸಿ ಅವರ ಆತ್ಮವಿಶ್ವಾಸ ಕುಗ್ಗಿಸಿದ್ದು ಸ್ವತಂತ್ರ ಭಾರತದ ಸಾಧನೆ. ಇದು ಕೇವಲ ಅರಭಾವಿ ಸತ್ಯಪ್ಪನವರ ಕಥೆಯಲ್ಲ ಬಹುತೇಕ ವಡ್ಡರ ಭೋವಿ ಸಮಾಜದ ಸ್ವಾತಂತ್ರ್ಯ ಪೂರ್ವದ ಸಿರಿವಂತ ಗುತ್ತಿಗೆದಾರರ ಕಥೆ. ಈಗ ಯಾವ ಭಾರೀ ಗುತ್ತಿಗೆಯೂ ಈ ಸಮುದಾಯಗಳ ಕೈಲಿಲ್ಲ. ಈಗೆಲ್ಲಾ L&T ರಿಲಯನ್ಸ್ ಗಳ ಕಾಲ.
@hanamantgiranivaddar63033 жыл бұрын
Va thumba valeya information kotidiri sar
@karnatakaheritage46043 жыл бұрын
Tqqq veryy much sir ...tqqq
@prakashsv96543 жыл бұрын
Good information,, hageye navu nodida hage e janangadavaru bere janangada tara avara janangadavrige support madodu kammi, istu varsha bekayitu e vichara tiliyalu, example bevenadru e janangada mantri gala hattira hodare avrige neevu avra jananga andre hattira bittukollalla
@chandrappachandru85693 жыл бұрын
@@prakashsv9654 Bhovi. Waddara community ge Waddara sathyappa Sahukar Gokak. Arabhavi Good information
@lmallikarjun43183 жыл бұрын
Super sir 👍👏💐
@VenkangoudaPatil-tt6ge2 ай бұрын
Good 👍 thanks 🙏👍
@salethurfaizee66383 жыл бұрын
ಮದ್ಯ ಮಾರಿ ಹಣ ಮಾಡಿ ಬ್ರಿಟಿಷರ ಗುಲಾಮನಾಗಿ ಜೀವಿಸಿದ್ದು ದೊಡ್ಡ ಕೀರ್ತಿಯೇನಲ್ಲ. ಮನೆಯನ್ನು ಪೂರ್ತಿಯಾಗಿ ತೋರಿಸದೆ ಬರೀ ಅರ್ಥಹೀನ ಪ್ರಶ್ನೆಗಳನ್ನು ಕೇಳಿದ್ದಾಳೆ. ಬ್ರಿಟಿಷರ ಕಾಲದಲ್ಲಿ ಅಂತ ಒತ್ತಿ ಹೇಳಬೇಕಾದ ಅಗತ್ಯವಿಲ್ಲ. ಬ್ರಿಟಿಷರ ಕಾಲದಲ್ಲಿ ಶ್ರೀಮಂತ ಆಗಬಾರದಾ? ಮದ್ಯ ಹಂಚಿ ಸಾವಿರಾರು ಕುಟುಂಬಗಳನ್ನು ಬೀದಿಲಾಲು ಮಾಡಿದ್ದು ಸಾಧನೆಯೇನಲ್ಲ.
@ShashikalaKulkarni-h5b2 ай бұрын
Nija👍
@mahanteshkenchappanavar36674 жыл бұрын
🙏ನಮಸ್ತೆ ಮೇಡಂ, ಇತಿಹಾಸ ಪುಟಗಳಲ್ಲಿ ಸೇರುವ ಮನೆಯ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ ತಮಗೆ ನನ್ನ ಗೌರವದ ಅಭಿನಂದನೆಗಳು ಮೇಡಂ, ಬ್ರಿಟಿಷ್ ಸರ್ಕಾರ ಕಾಲದಲ್ಲಿ ನಿರ್ಮಾಣವಾದ ಹಲವಾರು ಮನೆಗಳು ರಾಜ್ಯದಲ್ಲಿ ಇವೇ ,ತಾವು ತಮ್ಮ ಚಾನಲ್ ಮೂಲಕ ಅತಂಹ ಮನೆಯ ಇತಿಹಾಸ ಹಾಗೂ ಹಿನ್ನೆಲೆ ಬಗ್ಗೆ ತಮ್ಮ ಸಂಚಿಕೆಯಲ್ಲಿ ಪ್ರಸಾರ ಮಾಡಿ ಅದರ ಹಿನ್ನೆಲೆಯನ್ನು ರಾಜ್ಯದ ಜನತೆಗೆ ಪರಿಚಯಸಿ ದಯವಿಟ್ಟು ಮೇಡಂ.....
@chandrashekharchandru52204 жыл бұрын
Wonderful Building medam please show full histry....