ನಾವು ಕೇವಲ ಕರ್ನಾಟಕ ಸಂಗೀತ ಪಠ್ಯದ ಸಿಲೆಬಸ್ ಪ್ರಕಾರ ಸಂಗೀತ ಪಾಠಗಳನ್ನು ಮಾಡಿದ್ದಿದ್ದರೆ ಈಗಾಗಲೇ ವರ್ಣಗಳು ಮುಗಿದಿರುತ್ತಿದ್ದವು. ಆದರೆ ಸಂಗೀತ ಆಸಕ್ತರು ಸಮಗ್ರವಾಗಿ, ಸಮರ್ಥವಾಗಿ ಸಂಗೀತ ಕಲಿಯಬೇಕು ಎಂಬ ಉದ್ದೇಶದಿಂದ ವಚನ, ದಾಸರ ಪದ, ಭಕ್ತಿಸಂಗೀತ, ಸ್ವರಪ್ರಸ್ತಾರ, ಮಾಹಿತಿ... ಹೀಗೆ ವಿಭಾಗಗಳನ್ನು ಮಾಡಿ systematic ಆಗಿ ಸಂಗೀತ ಹೇಳಿಕೊಡುವ ಪ್ರಾಮಾಣಿಕ ಪ್ರಯತ್ನದಲ್ಲಿ ಸಾಗುತ್ತಿದ್ದೇವೆ. ಇವೆಲ್ಲವನ್ನೂ ನಮಗೆ ಸಿಗುವ ಸಮಯಾವಕಾಶದ ಪರಿಧಿಯಲ್ಲಿ ಪ್ಲಾನ್ ಮಾಡಬೇಕಾಗುತ್ತೆ. ಆದ್ದರಿಂದ ನೀವೂ ಕೂಡ ತಾಳ್ಮೆಯಿಂದ ಸಹಕರಿಸಿ. ನಮ್ಮ ಚಾನೆಲ್ ನ ಸಂಗೀತ ಪಾಠಗಳ ಜೊತೆಗೆ ಬೇರೆ ವಿಭಾಗಗಳ ವೀಡಿಯೊಗಳನ್ನು ವೀಕ್ಷಿಸಿ. ಇನ್ನೂ ಕೆಲ ಜತಿಸ್ವರ, ಲಕ್ಷಣಗೀತೆ ವಿಡಿಯೋ ಆದ ಮೇಲೆ ವರ್ಣಗಳನ್ನು ಆರಂಭಿಸುತ್ತೇವೆ. ವೈವಿಧ್ಯಮಯ ಪ್ರಯತ್ನ, ಆಸಕ್ತಿ, ತಾಳ್ಮೆಯಿಂದ ಕಲಿತರೆ ಸಂಗೀತದಲ್ಲಿ ನಮಗೊಂದು control ಹಾಗೂ confidence ಬರುತ್ತೆ. ಧನ್ಯವಾದಗಳು.
@littlelilly74803 жыл бұрын
Why iam not able to play this on harmonium mam ?
@MusicInKannada3 жыл бұрын
Probably you are trying with wrong swara sthanas. If you're Hindustani music learner and trying to play Carnatic song, then you should have basic knowledge in both swara identifying systems.
ಇದು ಕ್ರಮೇಣ ಅನುಭವದಿಂದಲೇ ಬರಬೇಕು. ಅಂದ್ರೆ ಕೇಳಿದ ಕೂಡಲೇ ಇದು ಇಂಥದ್ದೇ ಸ್ವರ ಅಥವಾ ಇಂಥದ್ದೇ ರಾಗ ಅಂತ ಗುರುತಿಸುವ ಸಾಮರ್ಥ್ಯ ಬರಬೇಕು. ಇದಕ್ಕೆ ದೀರ್ಘ ಕಾಲದ ಸಂಗೀತಾಭ್ಯಾಸ,ಪ್ರಯತ್ನ ಬೇಕು. ಬೇರೆ ಬೇರೆ ಹಾಡುಗಳ observation, study ಮಾಡಬೇಕಾಗುತ್ತದೆ. ಇಂಥ ಸಾಹಿತ್ಯ ಬಂದಾಗ ಇಂಥ ಸ್ವರ ಬರುತ್ತೆ ಅಂತ ಯಾವ ಲಾಜಿಕ್ ಅಥವಾ ಸಿದ್ಧ ಸೂತ್ರಗಳಿಲ್ಲ. ಇದು 100% ವ್ಯಕ್ತಿಗತ ಕ್ರಿಯೇಟಿವಿಟಿ. ಧೀರ್ಘ ಕಾಲದ ಸಂಗೀತದ ಟಚ್ ಇದ್ರೂ ಸ್ವರ ಪ್ರಸ್ತಾರ ನನಗೆ ಸುಲಭ ಅನಿಸಿಲ್ಲ. ಈಗಲೂ ಪ್ರಯತ್ನಿಸುತ್ತೇನೆ. ದೊಡ್ಡ ದೊಡ್ಡ ಸಂಗೀತ ನಿರ್ದೇಶಕ/ಕಂಪೋಸರ್ ಗಳಿಗೆ ಮಾತ್ರ ಇದು ಸುಲಭ.
@vijaykumar-ix6hb3 жыл бұрын
Super maam
@MusicInKannada3 жыл бұрын
Thanks
@raghu4utube3 жыл бұрын
ತುಂಬ ಅದ್ಬುತವಾಗಿ ಮೂಡಿ ಬಂದಿದೆ. ॥ _ । ∪ ∪ _ U ॥ _ _ | U _ U ॥ ಶ್ರೀ। ಗಣನಾಥ॥ ಸಿಂಧೂ|ರ ವರ್ಣ॥ ಮೂರನೆ ಪಾದದಲ್ಲಿ 'ಗಣನಾಥ' ಎಂಬುದು 5 ಮಾತ್ರಾ ಕಾಲದಿಂದ ಕೂಡಿದ ಲಘುವಾಗಿದ್ದು ಹಾಗು 'ಸಿಂಧೂ' ಎಂಬುದು 4 ಮಾತ್ರಾ ಕಾಲದ ದ್ರುತ. ಈ ರೀತಿ ಕಾಲ 17 ಮಾತ್ರಾ ಕಾಲವನ್ನು 12 ಮಾತ್ರಾ ಕಾಲಕ್ಕೆ ಇಳಿಸಲು ನಿಯಮಗಳಿವೆಯೇ?. ಕೆಳಗಿನ ರೀತಿಯಲ್ಲಿ ತಾಳ ಬಳಸಲು ಸಾದ್ಯವಿದೆಯೇ ತಿಳಿಸಿ. ॥ _ । ∪ ∪ _ ॥_ । _ _ ॥ _ । _ _ ॥ ಶ್ರೀ। ಗಣನಾ ॥ಥಽ। ಸಿಂಧೂ॥ರಽ। ವರ್ಣಽ॥ ಧನ್ಯವಾಧಗಳು.
@MusicInKannada3 жыл бұрын
17 ಮಾತ್ರಾ ರೂಪಕ ತಾಳದ 12 ಮಾತ್ರಾಕಾಲಕ್ಕೆ ಇಳಿಸಲು ನಿಯಮದ ಪ್ರಕಾರ ಸಾಧ್ಯವಿಲ್ಲ. ತಾಳಕ್ಕೆ ತಕ್ಕಂತೆ ಹೊಂದಿಸ ಬೇಕಾಗುತ್ತದೆ. 17ಕ್ಕೆ ಒಂದು 'ಆ' ಕಾರ ಅಥವಾ s ಸೇರಿಸಿ ಇನ್ನೊಂದು ಆವರ್ತ (6 x 3 = 18) ಮಾಡಿ ಮೂರು ಆವರ್ತಗಳಲ್ಲಿ ಸೇರಿಸಬಹುದು. ಇದನ್ನು ನೀವು ಸರಿಯಾಗೇ ಮಾಡಿದ್ದೀರಿ. ಇನ್ನೊಂದು ಮಾರ್ಗ ಕೂಡ ಇದೆ. ಸಮಾನ ಅರ್ಥ ಕೊಡುವ ಸಾಹಿತ್ಯದ ಪದ ಬದಲಾವಣೆ. ಸಿನಿಮಾ ಸಂಗೀತದಲ್ಲಿ ಗೀತ ರಚನಾಕಾರರು ಸಾಮಾನ್ಯವಾಗಿ ಸಂಗೀತ ನಿರ್ದೇಶಕರ ಅನುಕೂಲಕ್ಕೆ ತಕ್ಕಂತೆ ಇಂಥ ಬದಲಾವಣೆ ಮಾಡುತ್ತಾರೆ. ಉದಾಹರಣೆಗೆ, 5 ಮಾತ್ರಾಕಾಲದ ' ಆಕಾಶ ' ಬದಲಿಗೆ 4 ಮಾತ್ರಾ ಕಾಲದ ' ಅಂಬರ '. ಪ್ರಸ್ತುತ ಈ ಗೀತೆಯ 5 ಮಾತ್ರಾ ಕಾಲದ ಗಣನಾಥ ಬದಲಿಗೆ 4 ಮಾತ್ರಾ ಕಾಲದ ಗಣಪತಿ ಎಂದು ಬದಲಿಸಬಹುದು. ಆದರೆ ಇವೆಲ್ಲ ತಾರ್ಕಿಕವಾಗಿ ಸರಿ ಎನಿಸಿದರೂ, ಸಂಗೀತ ಪಿತಾಮಹ ಶ್ರೀ ಪುರದರದಾಸರ ಸಂಗೀತ ಕಲಿಕಾ ವಿಧಾನದ ಮುಂದೆ ಅಷ್ಟು ಸಮಂಜಸವಲ್ಲ. ಇಲ್ಲಿ ಪುರಂದರದಾಸರ ಸದುದ್ದೇಶ ಮತ್ತು ದೂರದೃಷ್ಟಿ ಗಣನೆಗೆ ತೆಗೆದುಕೊಳ್ಳಬೇಕು. ಸರಳವಾಗಿ, ಹಂತ ಹಂತವಾಗಿ, ಕ್ರಮಬದ್ಧವಾಗಿ ಸಂಗೀತ ಕಲಿಯಲು, ಅದ್ಭುತ ಕಲಿಕಾ ಪದ್ಧತಿ ಅಳವಡಿಸಿ ದ್ದಾರೆ. ಸ್ಟರಾಭ್ಯಾಸಗಳ ನಂತರ ಗೀತೆಗಳ ಮೂಲಕ ಸುಲಭವಾಗಿ ಸ್ವರ ಸಾಹಿತ್ಯ ಜೋಡಣೆ ಕಲಿಯುವಂತಾಗ ಬೇಕೆಂದು, ಸಿದ್ಧ ನಿಯಮಗಳಲ್ಲಿ ಸಡಿಲಿಕೆ ಮಾಡಿದ್ದಾರೆ. ಇಲ್ಲಿ ಪಲ್ಲವಿ, ಚರಣಗಳ ವಿಭಾಗಗಳು ಇಲ್ಲ. 2 ನೇ, 3 ನೇ ಕಾಲಗಳು ಕಡ್ಡಾಯ ಇಲ್ಲ. ಹಾಗೇ, ಸಾಹಿತ್ಯ ಅಕ್ಷರಗಳ ಮಾತ್ರಾ ಕಾಲದ ಕಡ್ಡಾಯ ನಿಯಮ ಇಲ್ಲ. ಉದಾಹರಣೆಗೆ, ನೀವು ತಿಳಿಸಿದ ಸಾಲಿನಲ್ಲಿ ಗಣನಾಥ ನಾಮಪದ ದಲ್ಲಿನ ' ನಾ ' ಅಕ್ಷರವನ್ನು ಎಳೆದು ಹಾಡಬೇಕಿಲ್ಲ. ಅದನ್ನು ಒಂದು ಮಾತ್ರಾ ಕಾಲದಂತೆ ಹಾಡಲಾಗುತ್ತದೆ. ಹೀಗೆ ಕೆಲವು ಕಡೆ ಗುರು ಇದ್ದಲ್ಲಿ ಲಘುವಿನಂತೆ ಹಾಡೋದ್ರಿಂದ ತಾಳದ ಆವರ್ತಗಳಿಗೆ ಹೊಂದಿಕೊಳ್ಳುತ್ತವೆ. ನೀವು comment ನಲ್ಲಿ ತಿಳಿಸಿದಂತೆ ನಿಯಮದ ಪ್ರಕಾರ ಮಾತ್ರಾ ಗಣ ವಿಭಾಗ ಮಾಡಬಹುದು. ಆದರೆ add ಮಾಡಿದ ಆವರ್ತ complete ಆಗಿರಬೇಕು. ಧನ್ಯವಾದಗಳು.
@veenasantoshkulkarni26924 жыл бұрын
Thanks madam
@MusicInKannada4 жыл бұрын
Welcome
@netravatiravikumarrevankar50644 жыл бұрын
G1 M1 andare enu Madam tilisi
@MusicInKannada4 жыл бұрын
Music lessons Playlist ಗೆ ಹೋಗಿ ಆರಂಭದಿಂದ ಕ್ರಮವಾಗಿ, ನಿಧಾನವಾಗಿ ವಿಡಿಯೋಗಳನ್ನು ನೋಡಿ. ಧನ್ಯವಾದಗಳು.
@harshavardhantnchannel15773 жыл бұрын
Mam fast you can send message please mam
@MusicInKannada3 жыл бұрын
Thanks for watching our videos. Music is scientifically proved best hobby which tunes our mind. Learn, improve and enjoy the traditional music.