Рет қаралды 11,383
ಅನೇಕ ಬಾರಿ ನಾವು ಶುರುಮಾಡಿರುವ ಸ್ಟಾರ್ಟ್ ಅಪ್‌ಗಳು, ಬೆಳೆಸುತ್ತಿರುವ ಉದ್ದಿಮೆಗಳು ಕಠಿಣ ಪರಿಸ್ಥಿತಿಯನ್ನು ಹಾದುಹೋಗುವ ಸಂದರ್ಭ ಬರುತ್ತದೆ. ಆಗೆಲ್ಲಾ ಮಾನಸಿಕ ಸ್ಥೈರ್ಯ ಬಲುಮುಖ್ಯ. ಆರಂಭದಿಂದಲೂ ಅದನ್ನು ಅಳವಡಿಸಿಕೊಂಡು ಬೆಳೆಯುವುದು ಒಳ್ಳೆಯದು. ಹಾಗೆಂದೇ ಯುವಾಬ್ರಿಗೇಡ್ ಆಯೋಜಿಸುತ್ತಿರುವ ಕಾರ್ಯಕ್ರಮ The fifth Pillar - ಐದನೇ ಸ್ತಂಭ. ಉದ್ದಿಮೆಯೊಂದರ ಆರಂಭಕ್ಕೆ ಮತ್ತು ಅದರ ಬೆಳವಣಿಗೆಗೆ ನಾಲ್ಕು ಸ್ತಂಭಗಳು ಬೇಕೇ ಬೇಕು. ಮೊದಲನೆಯದು ಸ್ವತಃ ನೀವೇ. ಎರಡನೆಯದು ನಿಮ್ಮ ಉದ್ದಿಮೆಯ ಐಡಿಯಾ, ಮೂರನೆಯದು ನೀವು ಕಟ್ಟಿರುವ ತಂಡ ಮತ್ತು ನಾಲ್ಕನೆಯದು ನಿಮ್ಮ ಗ್ರಾಹಕ. ಇವೆಲ್ಲವೂ ಇದ್ದಾಗಲೂ ಸೋಲುವ ಪರಿಸ್ಥಿತಿ ಬರುವುದೇಕೆಂದರೆ ಪ್ರೇರಣೆ ಕೊಡಬಲ್ಲ, ಆಸರೆಯಾಗಿ ನಿಲ್ಲಬಲ್ಲ ಐದನೇ ಸ್ತಂಭದ ಕೊರತೆಯಿಂದಾಗಿ ಮಾತ್ರ. ಯುವಾಬ್ರಿಗೇಡ್ ಹೊಸ ಉದ್ದಿಮೆ ಆರಂಭಿಸಿರುವ ತರುಣರಿಗೆ ಹಾಗೆ ಹೆಗಲು ಕೊಟ್ಟು ನಿಲ್ಲುವ ಪ್ರಯತ್ನ ಮಾಡುತ್ತಿದೆ.
for more information please visit www.yuvabrigade.net