No video

ಸಾಲ ತೀರಿಸಲಿಲ್ಲವೋ|ಶ್ರೀಶ್ರೀವಿದ್ಯಾಸಾಗರ ಮಾಧವತೀರ್ಥರು|saalateerisalillavo| Padmaja Vasudevachar|kum.Dhanya

  Рет қаралды 5,431

putti paddu

putti paddu

Күн бұрын

ಕೃತಿ : ಸಾಲತೀರಿಸಲಿಲ್ಲವೋ
ರಚನೆ : ಶ್ರೀ ಶ್ರೀ ವಿದ್ಯಾಸಾಗರ ಮಾಧವತೀರ್ಥರು.
ಮಾಧವತೀರ್ಥ ಮಠದ ಸಂಸ್ಥಾನ ಪೀಠಾಧಿಪತಿಗಳು ತಂಬಿಹಳ್ಳಿ .ಕೋಲಾರ ಜಿಲ್ಲೆ.
ಅಂಕಿತ : ಜ್ಞಾನಸಾಗರ ಮಾಧವ
ರಾಗ : ವಲಚಿ.
Kr̥ti: Sālatīrisalillavō racane: Śrī śrī jṇānasāgara mādhavatīrtharu mādhavatīrtha maṭhada sansthāna.Tambihaḷḷi.Kōlāra jille. Aṅkita: Jñānasāgara mādhava rāga: Valaci
ಸಾಲ ತೀರಿಸಲಿಲ್ಲವೋ ಸ್ವಾಮಿ ನಿನ್ನ |
ಸಾಲಗಾರನಾದೆನೋ ||ಪ||
ಸಿರಿ ಸಾರ್ವಭೌಮ ವೀರರಾಮ ||ಅ.ಪ||
ಮೇರು ನರ ಜನ್ಮವನು ಕೊಟ್ಟಸಾಲ ಮತ್ತೆ |
ಬಾಳಲೆಂದಿತ್ತ ಉತ್ತಮ ಕುಲದ ಸಾಲ ||
ದುಷ್ಟ ಕಲಿಕಾಲ ತಾಪವ ನಷ್ಟಗೊಳಿಪ |
ಶಿಷ್ಟ ಗುರುಗಳನಿತ್ತ ವಿಶಿಷ್ಟ ಸಾಲ ||೧||
ಮುಕ್ತಿ ಮಾರ್ಗವ ತೋರುವ ಭಕ್ತಿ ಕೊಡುವ |
ಭಾಗವತ ಭಾರತಗಳ ಇತ್ತ ಭವ್ಯ ಸಾಲ ||
ನಾನೆ ದೇವರೆಂಬ ಅಜ್ಞಾನ ನಾಶಮಾಡಿ |
ಈಶ ದಾಸ ಭಾವದ ಸಿರಿ ಇತ್ತ ಸಾಲ ||೨||
ತಪ್ಪು ಒಪ್ಪುಗಳರುಹಿ ಉದ್ಧಾರ ಮಾಳ್ಪ |
ಆಪ್ತ ಗುರು ಪರಂಪರೆ ಇತ್ತನರ್ಘ್ಯ ಸಾಲ ||
ನಿನ್ನ ಹೊರತನ್ಯರನು ಶರಣೆನ್ನದಂತೆ |
ನನ್ನ ಮರುಳು ಮಾಡಿದ ಹರಿ ನಿನ್ನ ಸಾಲ ||೩||
ನಿನ್ನ ದಿವ್ಯ ಮಂಗಳ ಮೂರುತಿಯನ್ನು |
ಕೈಯಲಿಟ್ಟ ಆನಂದ ಗಣಿಯ ಸಾಲ ||
ನಿನ್ನ ಮುಟ್ಟಿಸಿಕೊಂಡು ಒಂದು ನಿಮಿಷ ನಿನ್ನ |
ಸಾರ ದರಹಾಸ ತೋರಿದ ಅಸದೃಶ ಸಾಲ ||೪||
ಅಧೀನ ಲೀಲಾ ಹಸಿತೇಕ್ಷಣೋಲ್ಲಸತ್ |
ಭ್ರೂಭಂಗ ಸಂಸೂಚಿತ ಭೂರ್ಯನುಗ್ರಹದ ಕುಬೇರ ಸಾಲ ||
ಗಣಿಸಲಳವೆ ಈ ಸಾಲಗಳಿನ್ನು |
ಬಡ್ಡಿ ಗುಣಿಸಿದರೆ ಜನುಮ ಜನುಮಕು ಋಣಿ ನಾನು ||೫||
ನನ್ನ ಅಡವಿಟ್ಟುಕೊಂಡು ಇನ್ನು ನನ್ನ ಬಿಡದೆ |
ದುಡಿಸಿಕೋ ದುಡಿವೆ ತವ ಸಾಲ ಮುಗಿವವರೆಗು ||
ಮುಗಿದರು ಇಹದ ಋಣಗಳು ಮುಗಿಯದಿರುವ |
ಬಡ್ಡಿಗಾಗಿ ಮುಕುತಿಯಲ್ಲು ಬಂದು ದುಡಿವೆ ||೬||
ಜ್ಞಾನ ಸಾಗರ ಮಾಧವ ದೀನ ಬಂಧು |
ಜ್ಞಾನ ಸಾಗರ ಮಾಧವ ದೀನ ಬಂಧು ||
ಜ್ಞಾನ ಸಾಗರ ಮಾಧವ ದೀನ ಬಂಧು |
ಜ್ಞಾನ ಸಾಗರ ಮಾಧವ ದೀನ ಬಂಧು ||೭||
Saala teerisalillavo swamy ninna salagaaranaadeno ||pa||
Siri sarvabhouma veera raama||a .pa||
Meru nara janmavanu kotta saala matte |
Baalalenditta uttama kulada saala ||
Dushta kali kaala taapava nashta golipa |
Shishta gurugalanitta vishishta saala||1||
Mukti maargava toruva bhakti koduva |
Bhagavata bharatagala itta bhavya saala |
Naane devaremba ajnaana naasha maadi |
Eesha daasa bhavada siri itta saala||2||
Tappu oppugalaruhi uddhara maalpa |
Aapta guru parmpare ittanarghya saala||
Ninna horatanyaranu sharanennadante |
Nanna marulu maadida hari ninna saala ||3||
Ninna Divya mangala moorutiyannu|
Kaiyyallitta aananda ganiya saala ||
Ninna muttisi kondu ondu nimisha ninna |
Saara darahaasa torida asadrusha saal||4||
Adheena leela hasitekshanollasat|
Bhroo bhanga samsuchita bhuryanugrahada kubera saala ||
Ganisalalave ee saalugalinnu |
Baddi gunisidare januma janumaku runi naanu ||5||
Nanna adavittukondu innu nanna bidade |
Dudisiko dudive tava saala mugiva varegu|
Mugidaru ihada runagalu mugiyadiruva|
Baddigaagi mukutiyallu bandu dudive ||6||
Jaana saagara maadhava deena bandho |
Jnaana saagara maadhava deena bandho||7||
🙏ಶ್ರೀಕೃಷ್ಣಾರ್ಪಣಮಸ್ತು🙏
🙏shri krishnarpanamastu🙏

Пікірлер: 97
@suneetharaghavendra1012
@suneetharaghavendra1012 6 күн бұрын
ಗುರು ರಾಘವೇಂದ್ರ ರಾಯರಿಗೆ ನಮೋ ನಮೋ ಗುರು ಜಗನ್ನಾಥ ದಾಸರಿಗೆ ನಮೋ ನಮೋ ಸುಶ್ರಾವ್ಯವಾಗಿ ಹಾಡಿದ ನಿಮಗೆ ಅಭಿನಂದನೆಗಳು
@anjanakulkarni5841
@anjanakulkarni5841 Ай бұрын
ಸುಂದರ ಸಾಹಿತ್ಯ ನಿಮ್ಮ ಭಾವಪೂರ್ಣ ಗಾಯನ ಹೃದಯಕ್ಕೆ ತಟ್ಟಿತು ಮೇಡಂ ಅದ್ಭುತ ಸಾಹಿತ್ಯ ಕೊಟ್ಟಿರುವ ಗುರುಗಳಿಗೆ ಅನಂತ ನಮಸ್ಕಾರಗಳು 🙏🙏🙏ನಿಮ್ಮ ಧ್ವನಿಯಲ್ಲಿ ಕೇಳಿದ್ದು ನಮ್ಮ ಭಾಗ್ಯ 🙏🌹
@puttipaddu1715
@puttipaddu1715 Ай бұрын
@@anjanakulkarni5841 ಧನ್ಯವಾದಗಳು😊💐
@sharadajoshi8920
@sharadajoshi8920 Ай бұрын
Adbhuta padagalu, Madhavateertha gurubhyonamaha Sundara gayana❤
@puttipaddu1715
@puttipaddu1715 Ай бұрын
Thank you😊💐
@anujakoppar906
@anujakoppar906 Ай бұрын
ತುಂಬಾ ಮಧುರ ವಾಗಿದೆ ಹಾಡು ಮತ್ತು ಹಾಡುಗಾರಿಕೆ
@puttipaddu1715
@puttipaddu1715 Ай бұрын
@@anujakoppar906 ಧನ್ಯವಾದಗಳು😊💐
@roopadevi4877
@roopadevi4877 Ай бұрын
ಎನು ಹಾಡಿದೀರ ಪರವಶವಾಗಿ ಹೋದೆ ❤
@puttipaddu1715
@puttipaddu1715 Ай бұрын
ಧನ್ಯವಾದಗಳು💐😊
@nvj8375
@nvj8375 Ай бұрын
ಇಂತಹ ಸುಂದರ ಸಾಹಿತ್ಯ ಕರುಣಿಸಿರುವ ಗುರುಗಳಿಗೆ ಅನಂತ ನಮಸ್ಕಾರಗಳು ಹಾಗೂ ಅದನ್ನು ಸಂಗೀತದ ಮೂಲಕ ನಮಗೆ ಕೊಟ್ಟಿದ್ದಕ್ಕೆ ನಿಮಗೆ ಅನಂತ ಧನ್ಯವಾದಗಳು 🙏🏻🙏🏻
@puttipaddu1715
@puttipaddu1715 Ай бұрын
@@nvj8375 💐😊
@shobharao7571
@shobharao7571 Ай бұрын
A wonderful kriti, adbhuta sahitya, thumba dhanyavadagalu ee prastutigagi🙏🙏🙏
@puttipaddu1715
@puttipaddu1715 Ай бұрын
ಧನ್ಯವಾದಗಳು😊💐
@bkjyothibkjyothi
@bkjyothibkjyothi Ай бұрын
ತುಂಬಾ ಚೆನ್ನಾಗಿದೆ ಮೇಡಂ ಧನ್ಯವಾದಗಳು🙏🙏🙏🙏💐💐💐💐
@puttipaddu1715
@puttipaddu1715 Ай бұрын
@@bkjyothibkjyothi ಧನ್ಯವಾದಗಳು😊💐
@savithasaithal2511
@savithasaithal2511 Ай бұрын
Thumba sogsagede🙏
@puttipaddu1715
@puttipaddu1715 Ай бұрын
@@savithasaithal2511 dhanyavadagalu😊💐
@sujathavenkatesan4726
@sujathavenkatesan4726 Ай бұрын
Athi sundara
@sudharao2418
@sudharao2418 Ай бұрын
Entha Saahitya. Jnana. Srigalavaradu!!Eduvaregu gottillada. Sri hariya runa!!🙏
@malathiguruprasad3059
@malathiguruprasad3059 Ай бұрын
Swamigala sahithya adhpudha. nimma ibbara gayanavu adhpudha. Hvg nimma jothe sarvatha iralli. Expecting more jnana sahara madhava theertha swamigala rachane hadugalu
@puttipaddu1715
@puttipaddu1715 Ай бұрын
Thank you 😊💐sure 👍
@arunpriya1240
@arunpriya1240 Ай бұрын
Beautiful singing dhanyavathagalu❤❤🙏🙏🙏
@puttipaddu1715
@puttipaddu1715 Ай бұрын
@@arunpriya1240 thank you😊💐
@ramyavaranasi1219
@ramyavaranasi1219 Ай бұрын
🙏🙏
@sanjaysakri9
@sanjaysakri9 Ай бұрын
🎉🎉🎉🎉🎉jy shree krishna
@sankarshancpshan4051
@sankarshancpshan4051 Ай бұрын
🙏🙏🙏💯💯💯💯💯⭐⭐⭐⭐⭐🌍🌍🌍🌍🌍👏👌✌️ಮ್ಯಾಡಮ್, ಭಗವಂತನಾದ,ಭಕ್ತವತ್ಸಲನಾದ, ಶ್ರೀಹರೀಸ್ವಾಮಿಯು ಸರ್ವತಂತ್ರ ಸ್ವತಂತ್ರನಾದ, ಜ್ಞಾನಾನಂದಾದಿ ಸಕಲಗುಣಗಳಿಗೆ ಪರಿಪೂರ್ಣನು, ಸರ್ವಕರ್ತನು,ಸ್ವತಂತ್ರಕರ್ತನು, ಸರ್ವೋತ್ತಮನು, ಪೂರ್ಣಕಾಮನು, ಮುಕ್ತಿಪ್ರದನಾದ,ಸಚ್ಚಿದಾನಂದ ದಿವ್ಯ ತೇಜೋಮಯ ಸ್ವರೂಪನಾದ ಶ್ರೀಹರಿಸ್ವಾಮಿಯ ನಡುವೆ ಮ್ಯಾಡಮ್ ನಿಮ್ಮ ಮಧ್ಯೆ ಸ್ವಾಮಿಯ ಮೇಲೆ ನಿಮಗೇ ಏಕಾಂತಿಕಭಕ್ತಿ ತುಂಬಿದ ಅಪರಿಮಿತ ಅವಿನಾಭಾವ ಸಂಬಂಧವಿದೆ ಮ್ಯಾಡಮ್. ಪರಮಪವಿತ್ರಪೂಜ್ಯ ಸಂಭಾವಿತೆಯಾದ, ಸಚ್ಚಾರಿತ್ರಿಣಿಯಾದ, ನಿರ್ಮಲಶುದ್ಧ ಹರಿದಾಸಿನಿಯೇ, ನೀವು ಮ್ಯಾಡಮ್. ಶ್ರೀಹರಿಸ್ವಾಮಿಯನ್ನು ಅನುನಿತ್ಯವು ನಿಷ್ಕಾಮ ಶ್ರೀಹರಿಭಕ್ತಿಯ ಆತ್ಮಧ್ಯಾನದ ಭಕ್ತಿಮನಸ್ಸಿನ ಗಾನಾಮೃತದ ಗಾಯನದಿಂದ ಕೂಡಿದ ದೈವಿಕ ಭವ್ಯ ಕಲ್ಪನೆಯ ಮೂಲಕ ನೀವು ಕಾಣುವ ರೀತಿ ಹೇಗಿರುತ್ತಪ್ಪ ಅಂದರೇ ಈಗ ತಾನೇ ಹಾಲಿನ ಕೆನೆ ಒಡೆದು ಹೊಸದಾಗಿ ತೆಗೆದ ತಾಜ ಬೆಣ್ಣೆಯಂತಹ ಪವಿತ್ರಾತ್ಮದಿಂದ ಕೂಡಿದ ಅಚಲ ಅನನ್ಯ ಶ್ರೀಹರಿಭಕ್ತಿ ಮ್ಯಾಡಮ್ ನಿಮ್ಮದು ಶ್ರೀಹರಿಸ್ವಾಮಿಯು ನಿಮ್ಮ ಒಳಗೇ ಹೊರಗೆ ಅಂತರ್ಯಾಮಿಯಾಗಿ ನಿಂತು ನಿಮ್ಮ ಸಮಚಿತ್ತದ ತನ್ಮಯತ್ವದ ತಲ್ಲೀನತೆಯಿಂದ ಶ್ರೀಹರೀಸ್ವಾಮಿಗೆ ನಮಸ್ಕಾರಪೂರ್ವಕವಾಗಿ ಉಪಾಸಿಸುತ್ತ ಆತ್ಮ ಸಮರ್ಪಣೆಯ ಮೂಲಕ ಪ್ರಬುದ್ಧ ಪ್ರಚಂಡ ವಿದ್ವತ್ಪೂರ್ಣ ಅದ್ವಿತೀಯ ಅನುಪಮ ಮನೋಹರ ಗಾನಪ್ರಸ್ತುತಿಗೆ ಅನವರತವು ಶ್ರೀಹರಿಸ್ವಾಮಿಗೆ ಅತ್ಯಂತಪ್ರಿಯರಾದ ಭಕ್ತಳಾಗಿ,ಶ್ರೀಹರಿಯ ಪಾದಪದ್ಮದಲ್ಲಿ ಜೀವನ್ಮುಕ್ತಿಗೆ ಅರ್ಹರಾಗಿ, ನಿಮ್ಮ ಪವಿತ್ರ ಗಾನಾಮೃತದ ಗಾಯನವನ್ನು ಆಲಿಸಿದ ಪ್ರತಿ ಭಕ್ತರೂ ಕೂಡ ಮೋಕ್ಷಕ್ಕೆ ಅರ್ಹರಾಗಿ, ಪ್ರಬುದ್ಧ ಆಧ್ಯಾತ್ಮಿಕ ಜ್ಞಾನಿಗಳಾಗಿ ಬದಲಾಗುವಂತಹ ಸರ್ವಶ್ರೇಷ್ಠ ದೃಢಸಂಕಲ್ಪದ ಮನೋನಿಶ್ಚಯದಿಂದ ಕೂಡಿದ ಶ್ರೀಹರಿಯ ಪಾದಪದ್ಮವನ್ನು ಅಚಲವಾದ ಆತ್ಮಧ್ಯಾನದ ನಂಬಿಕೆಯಿಂದ ನಂಬಿರುವಂತಹ ಸರ್ವೋತ್ಕೃಷ್ಠವಾದ ಅತ್ಯದ್ಭುತ ದೈವಭಕ್ತಿಗಾನಪ್ರಸ್ತುತಿ ಮ್ಯಾಡಮ್ ನಿಮ್ಮದು 👏👌🌹💯💯💯💯💯🌍🌍🌍🌍🌍⭐⭐⭐⭐⭐🙏🙏🙏
@arpithamujumdar1291
@arpithamujumdar1291 Ай бұрын
👌🏻👌🏻🙏🏻🙏🏻
@neelasasirekha3416
@neelasasirekha3416 Ай бұрын
Akka nimage namaskara chennagi heliddiri santhosha vayithu
@puttipaddu1715
@puttipaddu1715 Ай бұрын
@@neelasasirekha3416 dhanyavadagalu😊💐
@roopapatil9577
@roopapatil9577 Ай бұрын
🙏🙏👌
@puttipaddu1715
@puttipaddu1715 Ай бұрын
@@roopapatil9577 thank you😊💐
@geethamadhusudhan536
@geethamadhusudhan536 Ай бұрын
👌❤️😍🙌💐🌹🙏
@chandrikasrao2140
@chandrikasrao2140 Ай бұрын
👋👋👋👋👋
@jayashreeramesh2658
@jayashreeramesh2658 Ай бұрын
Excellent!! Padmaja avre. We are blessed to hear a composition of Sri Sri Vidhya Sagara Theertharu of Sri Madhava theertha Mutt. Feeling happy about ur Sangeetha seve. Thank u for posting such rare kruthi that too in apt Valachi raga🙏🙏
@puttipaddu1715
@puttipaddu1715 Ай бұрын
Thank you😊💐
@jayashreeramesh2658
@jayashreeramesh2658 Ай бұрын
🤝🙏
@siriprabhasiriprabha4694
@siriprabhasiriprabha4694 Ай бұрын
ಅದ್ಭುತವಾದ ಸಾಹಿತ್ಯ ರಚನೆ ನಿಮ್ಮ ಗಾಯನ ಯಾವಾಗಲೂ ಅದ್ಭುತವಾಗಿರುತ್ತದೆ ತುಂಬು ಹೃದಯದ ಧನ್ಯವಾದಗಳು ಮೇಡಂ 🙏🏼💓🎉
@puttipaddu1715
@puttipaddu1715 Ай бұрын
@@siriprabhasiriprabha4694 ಧನ್ಯವಾದಗಳು😊💐
@savithakumar4132
@savithakumar4132 Ай бұрын
Super ❤❤
@gayatrijoshi6063
@gayatrijoshi6063 Ай бұрын
🙏🙏🙏🙏
@manoramasg1336
@manoramasg1336 Ай бұрын
Niu
@prasannasandur8238
@prasannasandur8238 Ай бұрын
Excellent🎉🎉
@puttipaddu1715
@puttipaddu1715 Ай бұрын
@@prasannasandur8238 thank you😊💐
@kavyabhushan580
@kavyabhushan580 Ай бұрын
E hadigagi kayuttidde akka dhanyavadagalu
@srishas5805
@srishas5805 Ай бұрын
ನಿಮ್ಮಿಬ್ಬರ ದ್ವನಿ ಅದ್ಭುತವಾಗಿದೆ ಪ್ರತಿಯೊಂದು ಹಾಡು ಅದ್ಬುತ ಮನಮೋಹಕ 👏👏👏👏
@puttipaddu1715
@puttipaddu1715 Ай бұрын
ಧನ್ಯವಾದಗಳು😊💐
@lathabhat6109
@lathabhat6109 Ай бұрын
ನನ್ನ ಅಡವಿಟ್ಟುಕೊಂಡು ...... ಏನ್ ಸಾಹಿತ್ಯ ರೀ... ನಿಮ್ಮ ಭಾವಪೂರ್ಣ ಗಾನ... ಏನ್ರೀ ನಿಮ್ಮ ಪುಣ್ಯ.... ಇದನ್ನು ಕೇಳಿದ.. ಇದು ಭಾಗ್ಯ ಇದು ಭಾಗ್ಯ ಇದುಭಾಗ್ಯವಯ್ಯ.... ನೀವು ಧನ್ಯ ಜೀವರು... ನಿಮ್ಮನ್ನು ಕೇಳ್ತಿದ್ದಕ್ಕೆ ನಾವು ಭಾಗ್ಯವಂತರು. ಧನ್ಯೋಸ್ಮಿ 🙏💐
@puttipaddu1715
@puttipaddu1715 Ай бұрын
@@lathabhat6109 😊💐🙏
@gayathrimk8575
@gayathrimk8575 Ай бұрын
Sri Ramaya namo namaha 🙏🙏🙏🙏🙏🙏🙏🙏🙏🙏🍇🍈🍒🍎🏵🍓🌷🌻🌼🍓🌷🍋🌸⚘🍏🌺🍊🥀 Very good voice, verynice thanku, amma, God bless u,thanku amma
@puttipaddu1715
@puttipaddu1715 Ай бұрын
@@gayathrimk8575 thank you😊💐
@trivenikp1225
@trivenikp1225 Ай бұрын
ಸಾಹಿತ್ಯ ತುಂಬಾ ಚೆನ್ನಾಗಿದೆ ಮೇಡಂ ನೀವು ಹಾಡುವುದು ಕೇಳುತ್ತಿದ್ದರೆ ಇನ್ನ ಕೇಳಬೇಕು ಎನಿಸುತ್ತದೆ ತುಂಬಾ ಚೆನ್ನಾಗಿದೆ.
@puttipaddu1715
@puttipaddu1715 Ай бұрын
@@trivenikp1225 dhanyavadagalu😊💐
@pranavaravinda2689
@pranavaravinda2689 Ай бұрын
Entha atyadbhuthavaada sahitya . Sri Vidya Sagara Madhava Teertharige Jayavagali 🥹🙏🏻Raga haagoo gayana bahala sogasagi ide 🥹🙏🏻
@vsiblings9689
@vsiblings9689 Ай бұрын
ತುಂಬಾ ಧನ್ಯವಾದಗಳು ನಿಮಗೆ. ಮತ್ತೆ upload ಮಾಡಿದಿಕ್ಕೆ. 🙏🙏
@annapoornanr8824
@annapoornanr8824 Ай бұрын
ಕರ್ಣಾನಂದ ವಾಯಿತು ಅಕ್ಕ,ಸಕಲಗ್ರಹ ನೀನೆ ಸರಸಿಜಾಕ್ಷ ಅಠಾಣ ರಾಗ ,ನಿಮ್ಮ ಧ್ವನಿ ಯಲ್ಲಿ ಕೇಳುವಾಸೆ ,ದಯವಿಟ್ಟು ಹೇಳಿಅಕ್ಕ❤
@puttipaddu1715
@puttipaddu1715 Ай бұрын
ಆಗಲಿ😊
@sujamscrk
@sujamscrk Ай бұрын
very nice as always thanks for posting
@vyshampayanaananth6292
@vyshampayanaananth6292 Ай бұрын
ನಿಮ್ಮ ಹಾಡು ಯಾವತ್ತಿಗೂ superb.- ಗೀತಾ ಅನಂತ್
@puttipaddu1715
@puttipaddu1715 Ай бұрын
@@vyshampayanaananth6292 ಧನ್ಯವಾದಗಳು😊💐
@chitraram1832
@chitraram1832 Ай бұрын
Thumba chennagi idhe ri. Nice deep meaning. I have run out of adjectives to praise your songs 😅 Just sheer aanandha! As always English lyrics are a big help🙏 Thanks a million First time I am hearing a song from Srigalavaru
@puttipaddu1715
@puttipaddu1715 Ай бұрын
@@chitraram1832 swamyji has composed many songs .we have also sung eshtu cheluvano rama neeneshtu cheluva.pls listen to that also
@chitraram1832
@chitraram1832 Ай бұрын
@@puttipaddu1715 Thumba thanks ri. Will definitely listen right now!
@geetha4231
@geetha4231 Ай бұрын
🙏🙏👌👌
@ushakiran8414
@ushakiran8414 Ай бұрын
Adbutha, thumbha santhosha aythu mathu dhanyavadagalu hari vayu gurugalu hege nimminda prathinitya hadisali
@puttipaddu1715
@puttipaddu1715 Ай бұрын
@@ushakiran8414 dhanyavadagalu😊💐
@vasudhawuntakal3854
@vasudhawuntakal3854 Ай бұрын
ಅತ್ಯದ್ಭುತ ವಾಗಿದೆ ರೀ. ತುಂಬಾ ದಿವಸ ಆದಮೇಲೆ ಮತ್ತೆ ಕೇಳಿದೆ. ಧನ್ಯವಾದಗಳು ರೀ 🙏
@puttipaddu1715
@puttipaddu1715 Ай бұрын
@@vasudhawuntakal3854 ಧನ್ಯವಾದಗಳು😊💐
@heman8993
@heman8993 Ай бұрын
Adbutavada Gayana as always!oh what a divine voice madam. Really you are blessed! Varnisalu asadhyavada deani bhakthi tumbi tulukuttide.HVG BLESS you both with abundant of happiness 👌👍👍🙏🙏🙏😊😊😊
@heman8993
@heman8993 Ай бұрын
*dwani
@puttipaddu1715
@puttipaddu1715 Ай бұрын
@@heman8993 dhanyavadagalu😊💐
@attravanamsailaja1946
@attravanamsailaja1946 Ай бұрын
Nimmage thumba thumba thanks.Ee haadigaagi thumba kadidde.Dhanyavadagalu nimma ibbarigu.
@puttipaddu1715
@puttipaddu1715 Ай бұрын
Dhanyavadagalu😊💐
@sujatarameshkhajane9469
@sujatarameshkhajane9469 Ай бұрын
Atyadhbhutavada sahitya haagu gayana Jenina savi unnisiddakkee Dhanyavadagalu
@puttipaddu1715
@puttipaddu1715 Ай бұрын
dhanyavadagalu😊🤗💐
@latharameshhathwar8030
@latharameshhathwar8030 Ай бұрын
ಸುಂದರವಾದ ಪ್ರಸ್ತುತಿ ಮೇಡಮ್ 👌👌👌 ಸತ್ಯನಾರಾಯಣ ದೇವರ ಪೂಜೆಯ ಹಾಡು ಹಾಡಿ ಮೇಡಮ್
@puttipaddu1715
@puttipaddu1715 Ай бұрын
ಧನ್ಯವಾದಗಳು😊💐
@puttipaddu1715
@puttipaddu1715 Ай бұрын
ಹಾಡ್ತಿನಿ
@latharameshhathwar8030
@latharameshhathwar8030 Ай бұрын
ಧನ್ಯವಾದಗಳು 😊
@sudhaguru87
@sudhaguru87 Ай бұрын
Very nice ❤❤❤
@ashakulkarni8336
@ashakulkarni8336 Ай бұрын
ದ್ಯಾನ್ ಸ್ಮಾಧವ್ ತೀರ್ಥರು ಎಂದರೆ ಯಾರು ? ಎಲ್ಲಿಯವರು ? ಸೋಲೇಪ್ ಮಾಹಿತಿ ಬೇಕಿತ್ತು .ದಯವಿಟ್ಟು ತಿಳಿಸಬೇಕು.
@geetharao6174
@geetharao6174 Ай бұрын
Thumba chennagi athey. Angita yaridu😊
@puttipaddu1715
@puttipaddu1715 Ай бұрын
Description nalli haakidini
@geetharao6174
@geetharao6174 Ай бұрын
Nodithey. Thank you🙏
@chandrikasrao2140
@chandrikasrao2140 Ай бұрын
Channagi, bandide,
@trivenikp1225
@trivenikp1225 Ай бұрын
ಪುರುಷೋತ್ತಮನ ಸ್ತೋತ್ರ ಹಾಕಿ ಮೇಡಂ 🙏
@bssumithrasumitraomnamoven3821
@bssumithrasumitraomnamoven3821 Ай бұрын
Ankita nama Sagara Madhava yethigala hesaru
@puttipaddu1715
@puttipaddu1715 Ай бұрын
Ankita jnana Sahara madhava Hesaru vidya Sahara madhava teerthatu
@suneetharaghavendra1012
@suneetharaghavendra1012 27 күн бұрын
ಸಾಹಿತ್ಯ ಮನಮುಟ್ಟುವಂತಿದೆ ಅದಕ್ಕೆ ಸರಿಯಾಗಿ ನಿಮ್ಮ ಗಾಯನ ಮಧುರವಾಗಿದೆ ನಿತ್ಯ ಕನಿಷ್ಠ ಎರಡು ಬಾರಿ ಕೇಳ್ತೀನಿ
@bhagyalakshmihl1959
@bhagyalakshmihl1959 Ай бұрын
ಅಂಕಿತ ಯಾವುದು ಮೇಡಂ
@puttipaddu1715
@puttipaddu1715 Ай бұрын
ಜ್ಞಾನಸಾಗರ ಮಾಧವ
@bhagyalakshmihl1959
@bhagyalakshmihl1959 Ай бұрын
@@puttipaddu1715 ಓಕೆ ಧನ್ಯವಾದಗಳು ತುಂಬಾಚೆನ್ನಾಗಿ ಹಾಡಿದ್ದೀರಾ
@anushreebagalkot5815
@anushreebagalkot5815 Ай бұрын
👌👌🙏🙏
@puttipaddu1715
@puttipaddu1715 Ай бұрын
ಧನ್ಯವಾದಗಳು😊💐
@kavyabhushan580
@kavyabhushan580 Ай бұрын
😂😂
@hemapatil9648
@hemapatil9648 Ай бұрын
Nakkiddu??yake?
Gajendra moksha | sri vadirajaru | Padmaja Vasudevachar
14:06
putti paddu
Рет қаралды 953 М.
Challenge matching picture with Alfredo Larin family! 😁
00:21
BigSchool
Рет қаралды 43 МЛН
My Cheetos🍕PIZZA #cooking #shorts
00:43
BANKII
Рет қаралды 28 МЛН
managed to catch #tiktok
00:16
Анастасия Тарасова
Рет қаралды 46 МЛН
Ugabhoga Chintana | Part - 02 | Dr. Vidyabhushan | Sri Purandara Dasaru | Haridasa
19:56
Draupadi Maana Rakshana- Udaya Raga Kruthi
11:54
yuma bokkasa
Рет қаралды 11 М.
Challenge matching picture with Alfredo Larin family! 😁
00:21
BigSchool
Рет қаралды 43 МЛН