Рет қаралды 113,620
ಮೈಸೂರಿನ ಸುಬ್ಬರಾವ್ ದಾಸರ ರಾಗ ಸಂಯೋಜನೆ ಯಲ್ಲಿ
ಅವರ ಕೃಪೆಯಿಂದ ಈ ಹಾಡನ್ನು ಕಲಿತು ಪ್ರಸ್ತುತ ಪಡಿಸುತಿದ್ದೇನೆ
song: Adhika masa bandu
raagam: mohana
lyrics: Susheela
anikita: madwesha Krishna
ಅಧಿಕ ಮಾಸದ ಹಾಡು
******************
ಅಧಿಕ ಮಾಸ ಬಂದುಅಧಿಕಾನಂದ ತಂದು
ಅಗಣಿತ ಮಹಿಮನ ಆರಾಧಿ ಸಲೆಂದು
ಅಧಿಕ ಅಧಿಕವಾಗಿ ಅನುಗ್ರಹ ಪೊಂದ ಲು
ಅಪೂಪ ದಾನಗಳ ನೀಡೆ ನ್ನಲು
ಪಲ್ಲವಿ
ಅಷ್ಟ ವಸುಗಳು ಏಕಾದಶ ರುದ್ರರು
ದ್ವಾದಶ ಆದಿತ್ಯ ರ ಸಹಿತವಾಗಿ
ವಷಟ್ ಕಾರ ಮತ್ತು ಭಗಧಾತು ಎಂದು ಮುವತ್ತ ಮೂರು ರಂಗೋಲಿ ಹಾಕಿ IIಅಧಿಕ II
ಅಧಿಕ ಮಾಸದಲ್ಲಿ ಮುದಮನ ದಿಂದ
ಭಕ್ತರಿಗೆ ದಾನವ ಮಾಡಲು
ಅಧಿಕ ಕವಾಗಿ ಫಲ ಬರುವುದೆಂದು
ಪದುಮನಾಭನ ದಯೆ ಸಿಗುವುದೆಂದೂ IIಅಧಿಕ II
ವ್ರತ ನೇಮ ಉಪವಾಸ ದಂಪತ್ತು ಭೋಜನ
ಲಕ್ಷ ಬತ್ತಿ ಲಕ್ಷ ನಮಸ್ಕಾರಾವು
ಏಕ ಭುಕ್ತಿ ದಿಕ್ಕು ಬದಲಿಸಿ ಊಟ
ಧಾರಣೆ ಪಾರಣೆ ವಿಷ್ಣುಪಂಚಕವು II ಅಧಿಕ II
ಲಕ್ಷ ಪುಷ್ಪಾರ್ಚನೆ ಮೌನವ್ರತವು ಬಳಿಕ
ಅರಿಸಿನ ಕುಂಕುಮ ಮರದ ಬಾಗಿನವು
ವಸ್ತ್ರಗಳ ದಾನ ಭಾಗವತ ಶ್ರವಣ
ಪುರಾಣಾದಿಗಳ ಮನನವು II ಅಧಿಕ II
ನಿತ್ಯ ದಾನಗಳ ದಾನ ವಿವಿಧ ಫಲಗಳ ದಾನ
ನಿತ್ಯ ಗೆಜ್ಜೆವಸ್ತ್ರದ ದಾನವು
ನಾರೀಕೇಳದ ದಾನ ಕಲ್ಲು ಸಕ್ಕರೆ ದಾನಖರ್ಜೂರದಾ ದಾನಗಳು, II ಅಧಿಕ II
ಹಾಲು ಮೊಸರಿನ ದಾನ ಅ ಡಿಕೆ ವಿಳೆದೆಲೆ ದಾನ
ಸಾಲಿಗ್ರಾಮದ ದಾನಗಳು
ಭಾಗವತ ಗ್ರಂಥದ ದಾನವು
ಮುವ್ವತ್ತ ಮೂರು ದಾಸರ ಪದ ಗಾಯನವು II ಅಧಿಕ II
ದಿನದಿನವು ಮನೆಯಲ್ಲಿ ಶಾಂತಿಯು ನೆಲೆಸುವುದು
ಅನುದಿನ ಆನಂದವಾಗುವುದು
ಸಚ್ಚಿದಾನಂದ ನ ದಯೆ ಸಿಗಲೆಂದು
ಮಧ್ವೇಶ ಕೃಷ್ಣನಲಿ ಬೇಡುವುದು
, IIಅಧಿಕ II
ಗಾಯನ: ರಶ್ಮಿ ಆದೀ ಶ್
ಸಾಹಿತ್ಯ:ಸುಶೀಲ ಕಾಂತಾರಾವ್
ಅಂಕಿತ : ಮಧ್ವೇಶ ಕೃಷ್ಣ
ರಾಗ ಸಂಯೋಜನೆ: ಮೈಸೂರಿನ ಸುಬ್ಬರಾವ್ ದಾಸರು