ಹಾಡು, ಸಂಗೀತ, ಗಾಯನ ಮತ್ತು ಕೇಳುಗ ಪ್ರಭುವಿನ ಹೃದಯ ಕಂಪನ ಎಲ್ಲವೂ ಒಂದೇ ಒಂದು ಸಣ್ಣ ಬಿಂದುವಿನಲ್ಲಿ ಒಂದೇ ಕ್ಷಣದಲ್ಲಿ ಸೇರಿದಾಗ ಮಾತ್ರ ಈ ಅನಿರ್ವಚನೀಯ ಅನುಭವ ಆಗುತ್ತದೆ. ನನಗೀಗ ಆಗುತ್ತಿರೋದು ಅದೇ. ಈ ಬುದುಕೆಂಬ ಬೆರಗಿನರಮನೆಯ ಮಗು ನಾನು ಅನಸ್ತಿದೆ. ಹಾಡಿಗೆ ಅಷ್ಟೊಂದು ಶಕ್ತಿ ಇರುತ್ತದ? ನೋವು ಮರೆಸುವಷ್ಟು, ದುಃಖ ತಡೆ ಹಿಡಿಯುವಷ್ಟು, ಕತ್ತಲಿಗೆ ದೀಪ ಆಗುವಷ್ಟು, ಸೋಲಿಗೆ ಗೆಲುವಾಗುವಷ್ಟು, ನೊಂದ ಮನಸಿಗೆ ನೆಮ್ಮಿದಿ ಆಗುವಷ್ಟು, ಸಮಾಧಾನ ಹೇಳುವಷ್ಟು.... ಎಸ್ ಅದು ಎಲ್ಲಾ ಇದ್ದಾಗ್ಲೇ ತಾನೇ ಹಾಡು ಹಾಡಾಗೋದು, ಕೇಳುಗ ಬೆರಗಾಗೋದು, ಮೆಚ್ಚಿಕೊಳ್ಳೋದು. ಹಾಡು ಕೇಳ ಕೇಳುತ್ತಲೇ ಯಾವ್ದೋ ಒಂದು ಸಾಲು ಎದೆಗೆ ನುಗ್ಗಿ ಬಿಡುತ್ತದೆ. ಯಾರೂ ಇಲ್ಲದ ಹೊತ್ತಲ್ಲಿ, ಇಳಿ ಸಂಜೆಯ ತಂಗಾಳಿಯಲ್ಲಿ , ನೆನಪುಗಳು ಹೊತ್ತು ಸಾಗುವ ಮನಸಿನ ತೇರಿನಲ್ಲಿ ಏನೋ ಒಂದು ಅಚಾನಕ್ಕಾಗಿ ಘಟಿಸಿ ಬಿಡುತ್ತೆ. ಕಣ್ಣಿಂದ ಎರಡು ಹನಿ ನೀರು. ಅದು ಆನಂದ ಭಾಷ್ಪವೋ , ಎಂದಿನಿಂದಲೋ ಹಿಡಿದಿಟ್ಟುಕೊಂಡ ಬಂದ ನೋವವೋ! ಹತಾಶೆಯೋ, ನಿರಾಶೆಯೋ, ಖುಷಿಯೋ ಯಾರಿಗೆ ತಾನೇ ಗೊತ್ತು. ಭಾವಕ್ಕೆ ತಕ್ಕಂತೆ ತಾಳ ಹಾಕಲು ಒಂದು ಸಾಲು ಬೇಕಿತ್ತು, ಅದಕ್ಕೊಂದು ಹಿನ್ನೆಲೆ ಸಂಗೀತ ಬೇಕಿತ್ತು, ಅದನ್ನ ನಮ್ಮೆದೆಗೆ ದಾಟಿಸಲು ಒಂದು ಧ್ವನಿ ಬೇಕಿತ್ತು. ಕವಿ ಸಾಲು ಗೀಚಿದ,ವಾದ್ಯಗಾರ ವಾದ್ಯ ನುಡಿಸಿದ, ಗಾಯಕಿ ಹಾಡಿದಳು... ಇವರೆಲ್ಲರೂ ಮಾಡಿದ್ದು ಒಂದೇ ಒಂದು ಕ್ರಿಯೆ ಆದ್ರೆ ಅದು ಅಜರಾಮರವಾಗಿ ಬೆಳೆಯುತ್ತಲೇ ಹೋಯಿತು. ಬಳ್ಳಿಯ ಹಾಗೆ. ಅದು ಕೇಳಗನೊಬ್ಬನ ರೋಮಾಂಚನಕ್ಕೆ ಕಾರಣ ಆಯ್ತು. ಹೊರಗೆ ಬಿದ್ದ ಹನಿ ನೋವಿಗೆ ಸಾಕ್ಷಿ ಆಯ್ತು. “ದೂರ ನಿಂತು ನಗುವ ಮನಕೆ ಬದುಕು ಬೆರಗಿನರಮನೆ." ಎಷ್ಟು ನಿಜ ಅಲ್ವಾ? ಬದುಕು ಅನ್ನೋದು ದೂರದಿಂದ ನೋಡುವಾಗ ಎಷ್ಟು ಬೆರಗು ಆದ್ರೆ ಹತ್ರ ಹೋದಾಗ.! ಅಲ್ಲಿ ನೋವು ಇದೆ, ಹತಾಶೆ, ಒಂಟಿತನ, ಖುಷಿ, ಬೇಸರ, ಸಡಗರ, ಸಂಭ್ರಮ, ನಿರಾಶೆ ಸೋಲು, ಗೆಲುವು ಅಂತಿಮವಾಗಿ ಬದುಕು ಒಂದು ಬೆರಗು ಮೂಡಿಸುತ್ತದೆ. ಇಡೀ ಭಾವಗೀತೆಯೇ ಇಷ್ಟ ಆಗಿರುವಾಗ ಇದು ಚೆಂದ,ಈ ಸಾಲು ಚೆಂದ ಅನ್ನುವುದು ಅಷ್ಟು ಸರಿ ಅಲ್ವೇನೋ.. ಆದ್ರೂ ಕವಿ ರವೀಂದ್ರ ನಾಯಕ್ ಅವ್ರು ಬರೀತಾರೆ.. “ನೋವು ಒಮ್ಮೆ ನೋವ ಪಟ್ಟು ನೋವ ಸುಖವ ಕಂಡರೆ: ಮುಳ್ಳ ನಡುವೆ ಅರಳಿ ನಗುವ ಹೂವ ಬದುಕ ಅರಿಯದೆ?” ಇದಕ್ಕಿಂತ ಅದ್ಭುತ ಸಾಲು ಇನ್ನೇನು ಬೇಕು ಹೇಳಿ. ಭಾವಗೀತೆಗಳೇ ಹಾಗೆ ಭಾವುಕರನ್ನಾಗಿ ಮಾಡಿ ಬಿಡುತ್ತವೆ. ಸ್ಪೂರ್ತಿ ಕೊಡುತ್ತವೆ. ಕಟ್ಟ ಕಡೆಗೆ ಎಲ್ಲವೂ ಮುಗಿದು ಹೋಯಿತು ಅನ್ನುವಾಗ ಹೆತ್ತ ತಾಯಿ ಹಾಗೆ ಸಮಾಧಾನ ಮಾಡುತ್ವೆ. ಹೀಗೇ ಈ ಹಾಡಿನ ಪ್ರತಿ ಸಾಲಿನ ಕುರಿತು ಬರೆಯಬೇಕು ಅನಿಸುತ್ತದೆ ಆದ್ರೆ ಎಲ್ಲಿ ಆ ಹಾಡಿನದು ಗುಲಗಂಜಿ ತೂಕ ಕಡಿಮೆ ಆಗಿ ಬಿಡುತ್ತೋ ಏನೋ ಅನ್ನೋ ಆತಂಕ. ಕೊನೆಯದಾಗಿ... ಕವಿಗಳಾದ ರವೀಂದ್ರ ನಾಯಕ್ ಅವ್ರಿಗೆ, ಗಾಯಕಿಯವರಿಗೆ ಅನಂತಾನಂತ ಧನ್ಯವಾದಗಳು ಈ ಹಾಡು ಈ ಕ್ಷಣಕ್ಕೆ ನನಗೆ ಕೊಟ್ಟ ಅನುಭೂತಿಗೆ ಮಾತುಗಳಿಲ್ಲ. ನಿಮ್ಮ ಗಾಯನ ನಿಮ್ಮ ಬರವಣಿಗೆ ಎಲ್ಲವೂ ನಿರಂತರವಾಗಿ ನಡೆಯುತ್ತಲೇ ಇರಲಿ. ನಾವು ಕೇಳುತ್ತಾ ಕೇಳುತ್ತಾ ಕಳೆದು ಹೋಗುತ್ತೇವೆ. ಧನ್ಯವಾದಗಳೊಂದಿಗೆ ರವಿ ಶಿವರಾಯಗೋಳ
@Ravindranayaksannakkibettu2 ай бұрын
ನಮ್ಮ ಏಕಾಂತದ ಕ್ಷಣಗಳಿಗೆ ಜೊತೆಯಾಗುವ ಅಂತರಂಗದ ಗೆಳೆಯನ ಹಾಗೆ ಗೆಳತಿಯ ಹಾಗೆ ಒಂದು ಹಾಡು ಸಿಕ್ಕಿಬಿಟ್ಟರೆ ಇಡೀ ಬದುಕನ್ನು ಆ ಕವಿತೆ ಕಾಯುತ್ತದೆ ಅಂತ ನಂಬಿಕೊಂಡವನು ನಾನು. ಸದಾ ಅಂತಹ ಸಾಲುಗಳಿಗಾಗಿ ತುಡಿಯುತ್ತಲೇ ಇರುತ್ತೇನೆ. ಸಿಕ್ಕಾಗ ಬೆರಗು. ಕೈಗೆ ಸಿಗದೇ ಕಾಡಿಸಿದಾಗ ಚಡಪಡಿಕೆ ಮತ್ತು ಈ ವೃತ್ತದಲ್ಲಿಯೇ ತಿರುಗುತ್ತಲಿರುವುದು ನನ್ನ ಬದುಕು. ರವಿ...ನಿಮಗೆ ಸಿಗುವ ಸೂಕ್ಷ್ಮ ಹೊಳಹುಗಳಿಗೆ ನಾನು ಸದಾ ಮೂಕವಿಸ್ಮಿತ. ಇಂತಹ ಸ್ಪಂದನೆ ಸಿಕ್ಕಿದಾಗ ಸ್ಫೂರ್ತಿಯ ಟಾನಿಕ್ ಸಿಕ್ಕಿದ ಹಾಗೆ. ಮತ್ತೆ ಬೆಳಗ್ಗೆ ನಾಲ್ಕಕ್ಕೆ ಎದ್ದು ಬರಿಬೇಕು ಅನ್ನಿಸುವ ಉತ್ಕಟತೆ ಹೆಚ್ಚುತ್ತದೆ. ಜೊತೆಗೆ ಸಾಗೋಣ❤️
@TheWadirajАй бұрын
ಸಾಹಿತ್ಯ, ಸಂಗೀತ ಮತ್ತು ಹಾಡುಗಾರಿಕೆ ಎಲ್ಲವೂ ಅತ್ಯದ್ಭುತ. 👌👏👏👏👍🙏
@parvathiaithal6412 ай бұрын
ತುಂಬಾ ಚೆನ್ನಾಗಿದೆ.. ಮಧುರ ಮತ್ತು ಭಾವಪೂರ್ಣ
@dr.chandrakalava8226Ай бұрын
ಅನಂತ ನಮನಗಳು ಸಾಹಿತ್ಯ ಸಂಗೀತ ಕ್ಕೆ 🙏🙏
@vinugsp20002 ай бұрын
ಮಧುರವಾಗಿದೆ...❤❤❤
@ParashivaiahАй бұрын
ಭಾವ ಗೀತೆಗಳ ಭಾವನೆಗಳೇ ಬೇರೆ, ಸೊಗಸಿನ ಭಾವಗಳು, ಹಾಡಿದವರಿಗೆ ಧನ್ಯವಾದಗಳು
ನಿಮ್ಮೆಲ್ಲರ ಪ್ರೀತಿಪ್ರೋತ್ಸಾಹವೇ ಮತ್ತೆ ಮತ್ತೆ ಹೊಸ ಪ್ರಯತ್ನಗಳಿಗೆ ಶಕ್ತಿ ತುಂಬುತ್ತಿದೆ. ಪ್ರೀತಿಯ ಧನ್ಯವಾದ❤️ ಇದೂ ಇಷ್ಟ ಆಗ್ಬಹುದು kzbin.info/www/bejne/iKrWoX2tht2aq9Esi=p3WUmGfSE3H1x_Az
@ParashivaiahАй бұрын
ತನು ಶ್ರೀ, ಪೃತ್ವಿ ಭಟ್ ಸೂಪರ್, ಸೂಪರ್, makkale
@ramyavinay292Ай бұрын
ಎಲ್ಲಾ ಹಾಡುಗಳೂ ಮಾಸ್ಟರ್ ಪೀಸ್ ಆದರೆ ಹೇಗೆ..!! Intro Bgm ಬೆಂಕಿ ❤️🔥ಮೊನಚಾದ ಕತ್ತಿಯಲಗು ಒಮ್ಮೆ ತಿವಿದು ಮತ್ತೆ ಮದ್ದಿಡುವ ಹಾಗೆ ಇದೆ!!❤️🩹 ಒಂದಷ್ಟು ಒತ್ತಡ ಕಳೆದು ನಿರಾಳವಾಗಿ ಕೇಳಿದೆ ., ಅಬ್ಬರ ನಿಂತು ಶಾಂತವಾದ ಕಡಲಲ್ಲಿ ತೇಲಿ ಹೋದೆ. ಹಿತವಾದ ಸಂಗೀತ-ಗಾಯನ, ದೃಶ್ಯ ಎಲ್ಲವೂ ಮತ್ತೆ ಮತ್ತೆ ಕೆಳಬೇಕೆನಿಸುವ ಹಾಗಿದೆ. ಯಾಕೋ ಗೊತ್ತಿಲ್ಲ ಅಗಲಿದ ಅಮ್ಮನ ಬೆರಳು ತಲೆಯ ನೆವರಿಸಿದ ಹಾಗಾಯ್ತು.. ಖುಷಿಯ ಬೆನ್ನಲ್ಲೇ ನೋವು ; ನೋವ ನಡುವೆ ಖುಷಿಯ ಅರಸುವುದೇ ಜೀವನ.. ತೀರ ಸರಿವ ಕ್ಷಣಕೆ ಇಲ್ಲಿ ಉಂಟು ನೂರು ಯಾತನೆ...🥲
@AFPPP7306A2 ай бұрын
ರವೀಂದ್ರ ನಾಯಕರ ಅದ್ಭುತ ಸಾಹಿತ್ಯ ಕ್ಕೆ ಸುಂದರ ಸಂಗೀತ, ಭಾವ ಪೂರ್ಣ ಗಾಯನ 🙏🙏
@aryagouri52822 ай бұрын
Very beautiful song and music. I don't understand much Kannada but I can feel sadness in this song... 👌👌👌
@Ravindranayaksannakkibettu2 ай бұрын
Thank you for your love and support ❤️❤️❤️ Please listen this new song and share your view kzbin.info/www/bejne/m4Kwh5tto7-qebcsi=bnnOgN9abZO7PqZl ಒಂದು ಹೊಸ ಭಾವಗೀತೆ *ನೂರು ನೋವಿನ ನಡುವೆ* *ಒಂದು ನಗೆಯು ಕಾಡಿ* ಸಾಹಿತ್ಯ: ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಸಂಗೀತ ಮತ್ತು ಗಾಯನ: ಗಣೇಶ್ ದೇಸಾಯಿ ನಿಮ್ಮ ಅಭಿಪ್ರಾಯ ತಿಳಿಸಿ❤️ ಇಷ್ಟವಾದಲ್ಲಿ ನಿಮ್ಮ ಆಪ್ತರೊಂದಿಗೆ ಹಂಚಿಕೊಳ್ಳಿ💐
@sugunarramalingam59082 ай бұрын
ಅದ್ಭುತ ಸಾಹಿತ್ಯ ಮತ್ತು ಸಂಗೀತ ಸುಮಧುರ....ನಿಮ್ಮ ಸಾಹಿತ್ಯ ನೂರಾರು ಬರುತಿರಲಿ ರವೀಂದ್ರ ರವರೆ❤❤🎉
@seetharamsira1476Ай бұрын
Very nice 👍
@RavindranayaksannakkibettuАй бұрын
Thank you ❤️
@karthikkote4082 ай бұрын
ಬಹಳ ಚಂದದ ಪರಿಪೂರ್ಣ ಭಾವಗೀತೆ. ಆಹಾ ❤❤❤
@Vijayashree-ja4vk2 ай бұрын
Mast👌❤️
@basukumbar98852 ай бұрын
ಅರ್ಥಗರ್ಭಿತ ಪದಗಳ ಸಾಲುಗಳು... ಇಂಪಾದ ಧ್ವನಿ... ಮತ್ತೆ ಮತ್ತೆ ಕೇಳಬೇಕೆನಿಸುವಂತಿದೆ... ❤🎉
@rajkumarnabhirajjain42282 ай бұрын
ಎಂದಿನಂತೆ ರವೀಂದ್ರ ನಾಯಕ್ ಸಣ್ಣಕ್ಕಿ ಬೆಟ್ಟು ಸರ್ ಅವರ ಅಧ್ಭುತವಾದ ಸಾಹಿತ್ಯದ ಬರವಣಿಗೆ ರಾಘವೇಂದ್ರ ಬೀಜಾಡಿಯವರ ಮಧುರವಾದ ಸಂಗೀತ ಮಂಗಳಾರವಿಯವರ ಸುಶ್ರಾವ್ಯ ಕಂಠದಿಂದ ಮೂಡಿಬಂದಿರುವ ಅಧ್ಭುತವಾದ ಭಾವಗೀತೆ ದೂರ ನಿಂತು ನಗುವ ಮನಕೆ ಬದುಕು ಬೆರಗಿನರಮನೆ 👌👌👌👌
@phanivenisn48772 ай бұрын
ಅದ್ಭುತವಾದ ಸಾಹಿತ್ಯ.... ಪೂರಕ ಗಾಯನ...ಮನತುಂಬಿತು ಸರ್❤
@karunakarab2 ай бұрын
ಕೇಳು ಕೇಳುತ ಮೈಮರೆತು ಹೋಗುವಷ್ಟು ಸುಂದರ ಸಾಹಿತ್ಯ, ಮನಸ್ಸಿಗೆ ಮುದ ನೀಡುವ ಗಾಯನ.. ❤ simply
@jayarampaniyadi6152 ай бұрын
ಹಾಡು ಕೇಳಿ ಕಳೆದು ಹೋದೆ. 👌👌
@prajnayanevanil80322 ай бұрын
ಅತ್ಯುತ್ತಮ ಸಾಹಿತ್ಯ. ರಾಗ ಕೂಡ ಉತ್ತಮ ವಾಗಿದೆ
@SumaShetty-v8d2 ай бұрын
Super❤
@bindu72472 ай бұрын
❤ sogasagide
@raghunirvanaswamy4675Ай бұрын
Super duper 👌👌👌🙏🙏🙏
@RavindranayaksannakkibettuАй бұрын
ತುಂಬಾ ತುಂಬಾ ಧನ್ಯವಾದ ನಿಮ್ಮ ಪ್ರೀತಿಪ್ರೋತ್ಸಾಹಕ್ಕೆ❤️ ಬಿಡುವಿದ್ದಾಗ ಕೇಳಿ ಇದೂ ಇಷ್ಟ ಆಗ್ಬಹುದು kzbin.info/www/bejne/m4Kwh5tto7-qebcsi=bnnOgN9abZO7PqZl
@RavindranayaksannakkibettuАй бұрын
ತುಂಬಾ ತುಂಬಾ ಧನ್ಯವಾದ ನಿಮ್ಮ ಪ್ರೀತಿಪ್ರೋತ್ಸಾಹಕ್ಕೆ❤️ ಬಿಡುವಿದ್ದಾಗ ಕೇಳಿ ಇದೂ ಇಷ್ಟ ಆಗ್ಬಹುದು kzbin.info/www/bejne/m4Kwh5tto7-qebcsi=bnnOgN9abZO7PqZl
@MythiliSRam2 ай бұрын
Beautiful song awesome singing fabulous music composition excellent lyrics fantastic video graphics thank you for sharing
@parvathiaithal6412 ай бұрын
ಸಾಹಿತ್ಯ ಗಾಯನ ಸಂಗೀತ ಎಲ್ಲವೂ ತುಂಬಾ ಚೆನ್ನಾಗಿವೆ...
@mallikasnayak63182 ай бұрын
ಚಂದ ಚಂದ, ಭಾವಪೂರ್ಣ...❤
@spailoor2 ай бұрын
you are an amazing song writer ..
@SANVIRAVINDRANAYAK2 ай бұрын
Excellent singing Mangala madam ❤
@Lachamanna.19752 ай бұрын
ಜೈ ಕವಿ ರವೀಂದ್ರ 🙏🙏🙏
@vijayalaxmikateel14132 ай бұрын
ಒಂದು ವಾಸ್ತವ ಸತ್ಯವನ್ನು ಸಮೀಕರಿಸಿ ಹೆಣೆದ ಭಾವಗೀತೆ.....ಎಂದಿನಂತೆ ಬೀಜಾಡಿಯವರ ಅದ್ಭುತಸಂಗೀತ ಅಷ್ಟೇ ಭಾವಪೂರ್ಣ ಗಾಯನ ಮಂಗಳಾ ರವಿಯವರದ್ದು....ವಾದ್ಯ ಸಂಗೀತ ಎಲ್ಲವೂ ಭಾವಲೋಕದಲ್ಲಿ ವಿಹರಿಸುವಂತೆ ಮಾಡಿದೆ.....ಅಲ್ಲೊಂದು ಸಣ್ಣ ಗೆಜ್ಜೆಯ ದನಿ ಕೇಳುವಾಗ ಏನೋ ಅನೂಹ್ಯ ಭಾವನೆ.....ಸಂಗೀತ ನಿರ್ದೇಶನ ಎಷ್ಟು ಸೂಕ್ಷ್ಮ..... ಕವಿಯ ಭಾವವನ್ನು ಇನ್ನಷ್ಟು ಶ್ರೀಮಂತಗೊಳಿಸಿದ ಹಿನ್ನೆಲೆವಾದನ......
@shashikantpdesai28402 ай бұрын
ಅತ್ಯುತ್ತಮ ಸಾಹಿತ್ಯವೇ ಗೀತೆಯ ಮೂಲ ಬಂಡವಾಳ, ಅದರೊಂದಿಗೆ ಸಂಗೀತ ಸೇರಿದರಂತೂ ಒಂದು ಉತ್ತಮ ಗೀತೆ, ಗಾಯನದಲ್ಲಿ ಅದು ಇನ್ನೂ ಹೆಚ್ಚು ಪಕ್ವವಾದಾಗ, ಕೇಳಲು ಖುಷಿಯಾಗುತ್ತದೆ. ಇಡೀ ತಂಡಕ್ಕೆ ಶರಣು.
ಎಂದಿನಂತೆ ರವೀಂದ್ರ ನಾಯಕ್ ಸಣ್ಣಕ್ಕಿ ಬೆಟ್ಟು ಸರ್ ಅವರ ಅಧ್ಭುತವಾದ ಸಾಹಿತ್ಯದ ಬರವಣಿಗೆ ರಾಘವೇಂದ್ರ ಬೀಜಾಡಿಯವರ ಮಧುರವಾದ ಸಂಗೀತ ಮಂಗಳಾರವಿಯವರ ಸುಶ್ರಾವ್ಯ ಕಂಠದಿಂದ ಮೂಡಿಬಂದಿರುವ ಅಧ್ಭುತವಾದ ಭಾವಗೀತೆ ದೂರ ನಿಂತು ನಗುವ ಮನಕೆ ಬದುಕು ಬೆರಗಿನರಮನೆ 👌👌👌👌ಪ