Рет қаралды 23,607
ಮಂಗಳಂ ಜಯ ಮಂಗಳಂ । ಮಂಗಳಂ ಶುಭ ಮಂಗಳಂ ।।
ಅಕ್ರೂರಗೊಲಿದ ತ್ರಿವಿಕ್ರಮಗೆ । ನಕ್ರನ ಗೆಲಿದ ಪರಾಕ್ರಮಿಗೆ ।
ಶಕ್ರನಗರ್ವಾಪಹಾರವ ಮಾಡಿದ ಶುಕ್ರನ ಶಿಷ್ಯನ ಗೆಲಿದವಗೆ ।।
ಗಂಗೆಯ ಪಡೆದ ಶ್ರೀರಂಗನಿಗೆ । ರಂಗು ಮಾಣಿಕದುಂಗುರದವಗೆ ।
ಭೃಂಗಕುಂತಳೆಯರ ವ್ರತವನೇ ಕೆಡಿಸಿದ ಅಂಗಜನಯ್ಯ ಶುಭಾಂಗನಿಗೆ ।।
ಧರೆಯೊಳಧಿಕ ವೆಂಕಟಾಚಲಗೆ । ಸ್ಥಿರವಾಗಿ ಪುಷ್ಕರಿಣಿಲಿ ನೆಲೆಸಿಹಗೆ ।
ಪರತತ್ತ್ವ ಶ್ರೀ ಪುರಂದರ ವಿಠ್ಠಲಗೆ ವರವೆಂಕಟೇಶ ಶ್ರೀನಿವಾಸಗೆ ।।