ಹೊಡಿ ನಗಾರಿ ಮೇಲೆ ಕೈಯ | hodi nagari mele kaiya | Padmaja Vasudevachar |kum. Dhanya

  Рет қаралды 5,508

putti paddu

putti paddu

Күн бұрын

ಶ್ರೀ ವಾದಿರಾಜರ ಪುಣ್ಯ ದಿನವಾದ ಇಂದು ಶ್ರೀ ಪ್ರಾಣಪತಿ ವಿಠಲ ದಾಸ ವಿರಚಿತ ಶ್ರೀ ವಾದಿರಾಜರ ಮೇಲಿನ ಪದದ ಸಮರ್ಪಣೆ
Śrī vādirājara puṇya dinavāda indu śrī prāṇapati viṭhala dāsa viracita śrī vādirājara mēlina padada samarpaṇe
ಹೊಡಿ ನಗಾರಿ ಮೇಲೆ ಕೈಯ ಗಡ ಗಡ |
ಹೊಡಿ ನಗಾರಿ ಮೇಲೆ ಕೈಯ ||ಪ||
ಕಡು ವಾದಿರಾಜರು ಧೃಡ ಋಜುಗಣರೆಂದು ||ಅಪ||
ಹಯ ಮುಖ ಪಾದದ್ವಯ ಸೇವಕರು |
ಜಯಶೀಲರು ನಿಜಭಯ ಹರರೆಂದು ||೧||
ಮೋದತೀರ್ಥ ಮತ ಸಾಧಿಸಿ ಮೆರೆಸುವ |
ವಾದಿರಾಜಗುರು ಪೂರ್ಣಬೋಧರು ಸಮರೆಂದು ||೨||
ಇಂದಿರಾ ಪತಿಯ ಪೂರ್ಣಚಂದದಿ ಪೂಜಿಪ|
ನಂದಿವಾಹನ ಮುಖ್ಯರಿಂದ್ವಂದ್ಯರು ಎಂದು ||೩||
ಕಲಿ ಮುಖ್ಯ ದಾನವ ಬಲವ ಜಯಿಪ |
ನಿಷ್ಕಲುಷ ಚಿತ್ತ ಯತಿಕುಲ ಭೂಷಣರೆಂದು ||೪||
ಕಂಸಾದಿ ಮುಖ ಧ್ವಂಸಿ ಸಮೀರಣ |
ಹಂಸವಾಹನನಂಶಾಸಹಿತರೆಂದು ||೫||
ಲಾತವ್ಯಾತ್ಮಕ ಭೀತಿರಹಿತ ಮಹಾ |
ಪಾತಕ ಹರ ಸುರನಾಥ ಮಹಿಮರೆಂದು ||೬||
ಭಾವಿ ಭರತಿದೇವಿ ಕರ ಕಮಲಸೇವಿತ |
ಪದ ರಾಜೀವ ದ್ವಯರಿವರೆಂದು ||೭||
ದೂಷಕರನು ಬಹು ಘಾಸಿ ಕೊಟ್ಟು ನಿಜ |
ದಾಸರ ತೋಷಿಸಿ ಪೋಷಿಪರೆಂದು ||೮||
ವೃಂದಾವನ ಸದಮಂದಾಖ್ಯಾನವ |
ಭೂವೃಂದಕರಿಗೆ ತಿಳಿಪರಿವರೆಂದು ||೯||
ಸುಂದರ ಪಂಚ ಸುವೃಂದಾವನದೊಳು |
ವೃಂದಾರಕ ಮುನಿ ವೃಂದ ವಂದಿತರೆಂದು ||೧೦||
ಸಾನುರಾಗದಿ ಪ್ರಾಣಪತಿ ವಿಠಲನ |
ಧ್ಯಾನದಿಂದ ಸನ್ಮಾನಿತರಿವರೆಂದು ||೧೧||
🙏ಶ್ರೀಕೃಷ್ಣಾರ್ಪಣಮಸ್ತು🙏
Hoḍi nagāri mēle kaiya gaḍa gaḍa |
hoḍi nagāri mēle kaiya ||pa||
kaḍu vādirājaru dhr̥ḍa r̥jugaṇarendu ||apa||
haya mukha pādadvaya sēvakaru |
jayaśīlaru nijabhaya hararendu ||1||
mōdatīrtha mata sādhisi meresuva |
vādirājaguru pūrṇabōdharu samarendu ||2||
indirā patiya pūrṇacandadi pūjipa|
nandivāhana mukhyarindvandyaru endu ||3||
kali mukhya dānava balava jayipa |
niṣkaluṣa citta yatikula bhūṣaṇarendu ||4||
Kansādi mukha dhvansi samīraṇa |
hansavāhanananśāsahitarendu ||5||
lātavyātmaka bhītirahita mahā |
pātaka hara suranātha mahimarendu ||6||
bhāvi bharatidēvi kara kamalasēvita |
pada rājīva dvayarivarendu ||7||
dūṣakaranu bahu ghāsi koṭṭu nija |
dāsara tōṣisi pōṣiparendu ||8||
Vr̥ndāvana sadamandākhyānava |
bhūvr̥ndakarige tiḷiparivarendu ||9||
sundara pan̄ca suvr̥ndāvanadoḷu |
vr̥ndāraka muni vr̥nda vanditarendu ||10||
sānurāgadi prāṇapati viṭhalana |
dhyānadinda sanmānitarivarendu ||11||
🙏śrīkr̥ṣṇārpaṇamastu🙏

Пікірлер: 56
@Latha67
@Latha67 6 ай бұрын
🙏🏻🙏🏻🙏🏻🙏🏻🌺🌸🌺🌸
@jayashreeramesh2658
@jayashreeramesh2658 6 ай бұрын
Excellent Padmaja avre. A sacred Sangeetha seva to Sri Vadhiraja Theertharu. And as usual Sravana seva by all of us. Song selection, Raga, rendition and the involvement... Everything making us so happy. Dhanyavadhagalu🙏🙏
@anjanakulkarni5841
@anjanakulkarni5841 4 ай бұрын
Super ಗಾಯನ 👌🙏🌹ಸುಂದರ ಸಾಹಿತ್ಯ 🙏
@puttipaddu1715
@puttipaddu1715 4 ай бұрын
ಧನ್ಯವಾದಗಳು💐😊
@trivikramapuranik3278
@trivikramapuranik3278 6 ай бұрын
ಸಾಹಿತ್ಯ ಗಾನ ಎರಡೂ ತುಂಬಾ ಚೆನ್ನಾಗಿದೆ
@vasudhavinod9353
@vasudhavinod9353 6 ай бұрын
ಶ್ರೀ ವಾದಿರಾಜ ಗುರುಸಾರ್ವಭೌಮರ ಪುಣ್ಯ ದಿನದಂದು ಶ್ರೀ ಪ್ರಾಣಪತಿ ವಿಠಲ ದಾಸರ ವಿರಚಿತವಾದ ಇದನ್ನು ನಿಮ್ಮ ಸುಮಧುರವಾದ ಕಂಠದಿಂದ ಕೇಳಿ ನಿಜವಾಗಲೂ ಧನ್ಯರಾದೆವು🙏🙏🙏👌👌👌👌👌👌
@padmasriba3260
@padmasriba3260 6 ай бұрын
Hare Srinivasa mami 🙏🙌🙏🙌🙏🙌🙏🙌🙏 Every hadugulu awesome Every day I play maximum songs🙏🙌🙏🙌🙏🙌🙏🙌👌👌👌👍👍👍
@puttipaddu1715
@puttipaddu1715 6 ай бұрын
Thank you😊💐
@usharavikumar7925
@usharavikumar7925 6 ай бұрын
🙏🙏🙏
@indiramuralidaran4839
@indiramuralidaran4839 6 ай бұрын
🙏🙏🙏🌺
@sitabindhumadhavan5313
@sitabindhumadhavan5313 6 ай бұрын
Thumba chennagi ide padmaja avare.
@jayasreeparsrinath4369
@jayasreeparsrinath4369 6 ай бұрын
🙏🏻🙏🏻👌👌👌🌹
@chidambararao5284
@chidambararao5284 6 ай бұрын
🙏🙏👌👌
@anandrao8197
@anandrao8197 6 ай бұрын
@chandanaprasad.s3375
@chandanaprasad.s3375 6 ай бұрын
ಸುಮಧುರವಾದ ಗಾಯನ ಮೇಡಂ 🙏🙏
@geethamadhusudhan536
@geethamadhusudhan536 6 ай бұрын
👌👏💐🌹❤️🤩🙏
@shwethasatenahalli1264
@shwethasatenahalli1264 6 ай бұрын
❤❤
@madhavak541
@madhavak541 6 ай бұрын
👌👌👌👌💐💐💐
@krishnamurthybangalore7818
@krishnamurthybangalore7818 6 ай бұрын
Estu chennagi hadtira keltaidre keluttale irabekanisutte 👏👏👌👌❤
@jayashreemahabashya9816
@jayashreemahabashya9816 6 ай бұрын
Super singing 👏💐🙏
@NagaRaju-tg4sz
@NagaRaju-tg4sz 6 ай бұрын
SUPER SUPER SUPER SUPER SUPER SONG MADAM SUPER SUPER VOICE MADAM 🎵🎵🎵🎸🎸🎸🎉🎉🎉.
@vasudhawuntakal3854
@vasudhawuntakal3854 6 ай бұрын
Wah! Excellent singing ree❤
@indirabhat3974
@indirabhat3974 6 ай бұрын
🙏🏻🙏🏻🙏🏻
@sankarshancpshan4051
@sankarshancpshan4051 6 ай бұрын
🙏💯💯💯💯💯🙏⭐⭐⭐⭐⭐👏👌✌️ಮ್ಯಾಡಮ್,ನಿಮ್ಮಂತಹ ಮಹಾನ್ ಸಕಲ ಸೌಭಾಗ್ಯವತಿಯಾದ ಪುಣ್ಯಶೀಲೆಯ ದೈವಭಕ್ತಿಗಾಯನವನ್ನು ಕೇಳಲು ಸಬ್ಸ್ಕ್ರೈಬ್ ಆದಾಗಿನಿಂದ ನಾನಂತೂ ಎಷ್ಟು ಪುಳಕಿತಭಾವದ ಪುನೀತತೇಯಿಂದ ಪುಣ್ಯವಂತನಾದ ಭಾಗ್ಯಶಾಲಿಯಾದ ಶ್ರೀಹರಿಭಕ್ತನಾಗಿದ್ದೀನಿ ಮ್ಯಾಡಮ್, ನೀವು ದೈವಿಕಮಯವಾದ ದೃಢಏಕಸಂಕಲ್ಪ ಚಿತ್ತರಾಗಿ ಆಧ್ಯಾತ್ಮವಾದಿನಿಯಾಗಿ ದೈವಿಕಮಯವಾಗಿ ಶೋಧನೋಪಾದಿಯಲ್ಲಿ ಗಮನಕೊಟ್ಟು ಹೆಕ್ಕಿ ಹೆಕ್ಕಿ ಆರಿಸಿ ಹಾಡಿದ ಅಮೋಘವಾದ ದೈವಭಕ್ತಿಗಾನಪ್ರಸ್ತುತಿನ ಕೇಳಿ, ಕೇಳಿ, ನನಗನಿಸಿದ್ದು ಒಂದೇ ಒಂದು ಅದೇನಪ್ಪ ಅಂದರೇ ಹೇಳುತ್ತೀನಿ ಹೇಳೇ ಬಿಡುತ್ತೀನಿ ಮ್ಯಾಡಮ್ (ಹೊಡಿ ನಗಾರಿ ಮೇಲೆ ಕೈಯ ಗಡ ಗಡ ಹೊಡಿ ನಗಾರಿ ಮೇಲೆ ಕೈಯ ಪರಮ ಪೂಜ್ಯ ಶ್ರೀಶ್ರೀಶ್ರೀ ವಾದಿರಾಜಮಹಾಸ್ವಾಮಿಗಳಿಗೇ ನಿಷ್ಕಾಮ ನಿರ್ಮಲಶುದ್ಧ ಪಟ್ಟ ಶಿಷ್ಯೆ ಎಂದೂ ಹೊಡಿ ನಗಾರಿ ಮೇಲೆ ಕೈಯ)🙏🙏🙏ಓಂಶ್ರೀ ವಾದಿರಾಜಮಹಾಸ್ವಾಮಿ ಮಹಾಗುರುವೇ ನಮಃ👏👌✌️⭐⭐⭐⭐⭐🙏💯💯💯💯💯🙏
@parimalachandrabalajirao4659
@parimalachandrabalajirao4659 4 ай бұрын
Super ❤
@sindhurashmibalaji2803
@sindhurashmibalaji2803 6 ай бұрын
🙏🙏🙏🙏🙏🙏
@sowmyaprasad6115
@sowmyaprasad6115 6 ай бұрын
ತುಂಬಾ ಚೆನ್ನಾಗಿದೆ 🎉
@lathabhat6109
@lathabhat6109 6 ай бұрын
ನಿಮ್ಮ ಹಾಡುಗಾರಿಕೆ ಕೂಡಾ ನಗಾರಿ ಹೊಡೀತಾ ಇದೆ 😊 ತುಂಬಾ ಚೆನ್ನಾಗಿದೆ 🎉🎉🎉🎉🎉
@hithopadhesh8194
@hithopadhesh8194 6 ай бұрын
Excellent 🎉🎉🎉❤❤❤
@puttipaddu1715
@puttipaddu1715 6 ай бұрын
Thank you😊💐
@latharameshhathwar8030
@latharameshhathwar8030 6 ай бұрын
ಏನ್ ಸುಂದರ ಎಂಥ ಸುಮಧುರವಾದ ಗಾಯನ 👌👌👌 ಶ್ರೀ ವಾದಿರಾಜ ಗುರುಭ್ಯೋ ನಮಃ🙏🙏🙏
@puttipaddu1715
@puttipaddu1715 6 ай бұрын
ಧನ್ಯವಾದಗಳು😊💐
@sharadapatel5741
@sharadapatel5741 6 ай бұрын
Too good Padmaja avre
@siriprabhasiriprabha4694
@siriprabhasiriprabha4694 6 ай бұрын
ವಾಹ್ ಅದ್ಭುತವಾದ ಸಾಹಿತ್ಯ ನಿಮ್ಮ ಗಾಯನ ಯಾವಾಗಲೂ ಅದ್ಭುತವಾಗಿರುತ್ತದೆ ತುಂಬು ಹೃದಯದ ಧನ್ಯವಾದಗಳು ಮೇಡಂ 🙏🏼🙏🏼🙏🏼🙏🏼
@puttipaddu1715
@puttipaddu1715 6 ай бұрын
ಧನ್ಯವಾದಗಳು😊💐
@Ramamani1972
@Ramamani1972 6 ай бұрын
Very nice... Jai Sri Rama🙏🏻
@SU-tf5yk
@SU-tf5yk 6 ай бұрын
ಆಹಾ ಅಧ್ಭುತ 🙏🙏🙏
@Narasimhamurthy-w2q
@Narasimhamurthy-w2q 6 ай бұрын
Estu chennagi hadteera keltane irbeku ansutte saraswati anugraha ide
@heman8993
@heman8993 6 ай бұрын
Vadhirajara araadane dina yenthaha adbutavada hadu aayke madi nimma athi maduravada dwaniyalli yallarannu santhosha padisuttiri!vadirajara vishesha anugraha nimage kandhithavagi sigutte !nijavada punyavantaru. Keluvudu namma bhagya.namaskaragalu👌👍👏👏
@bsebestsisterever7318
@bsebestsisterever7318 6 ай бұрын
Super 💯
@shobharao7571
@shobharao7571 6 ай бұрын
Adbhutavagide, dhanyavadagalu 🙏🙏🙏
@geetharao6174
@geetharao6174 6 ай бұрын
Very nice🙏
@bsebestsisterever7318
@bsebestsisterever7318 6 ай бұрын
Super madam
@anushreebagalkot5815
@anushreebagalkot5815 6 ай бұрын
ಅಧ್ಬುತ
@geethar5139
@geethar5139 6 ай бұрын
Awesome mam, which raga mam and tala please mam
@sudhaguru87
@sudhaguru87 6 ай бұрын
Awesome 👌 ❤
@ushakiran8414
@ushakiran8414 6 ай бұрын
Thumbha chennagi ide namaskaragalu
@puttipaddu1715
@puttipaddu1715 6 ай бұрын
Dhanyavadagalu😊💐
@padmamalladi2995
@padmamalladi2995 6 ай бұрын
Can u send the lyrics of this song
@puttipaddu1715
@puttipaddu1715 6 ай бұрын
Pls check the description box
@phaneendranrao4165
@phaneendranrao4165 6 ай бұрын
Bilahari????
@puttipaddu1715
@puttipaddu1715 6 ай бұрын
Shankarabharana
@geetha4231
@geetha4231 6 ай бұрын
🙏🙏🙏
@roopapatil9577
@roopapatil9577 6 ай бұрын
🙏🙏👌👌
@ramyavaranasi1219
@ramyavaranasi1219 6 ай бұрын
🙏🙏
@VaruniKatti
@VaruniKatti 6 ай бұрын
🙏🙏🙏
How To Get Married:   #short
00:22
Jin and Hattie
Рет қаралды 31 МЛН
规则,在门里生存,出来~死亡
00:33
落魄的王子
Рет қаралды 30 МЛН
Life hack 😂 Watermelon magic box! #shorts by Leisi Crazy
00:17
Leisi Crazy
Рет қаралды 78 МЛН
Gelluvudu geleuve alla / ಗೆಲ್ಲುವುದು ಗೆಲುವೇ ಅಲ್ಲ
5:57
Naada maninalkur ನಾದ ಮಣಿನಾಲ್ಕೂರು
Рет қаралды 105 М.
sudama charitra
13:05
Sreelatha Badrinath
Рет қаралды 53 М.
ಶೇಷಗಿರಿ ದೊರೆ ನಮ್ಮ | ವೆಂಕಟವಿಠಲ ದಾಸರು | Sheshagiri Dore Namma | Sri Venkata Vithala Dasaru | Bhajane
6:54
How To Get Married:   #short
00:22
Jin and Hattie
Рет қаралды 31 МЛН